`ಶಾಲೆಯಲ್ಲಿ ಹಿಂದುಳಿಯುವಿಕೆ' ವಾಕ್-ಶ್ರವಣ ದೋಷ ತಜ್ಞ ಡಾ. ಜಿ. ಪುರುಷೋತ್ತಮ ಅವರ ಕೃತಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಾರೆ. ಇವರಿಗೆ ವಿಶೇಷ ಶಿಕ್ಷಣದ ಅಗತ್ಯವಿರುತ್ತದೆ. ಇಂತಹ ಮಕ್ಕಳನ್ನು ಗುರುತಿಸುವುದು ಶಿಕ್ಷಕರ ಹೊಣೆಗಾರಿಕೆ ಆಗಿರುತ್ತದೆ. ಮಕ್ಕಳ ಈ ತೊಂದರೆಗೆ ವಂಶವಾಹಿನಿಯ ಇಲ್ಲವೇ ಪರಿಸರದ ಕಾರಣಗಳು ಇರುತ್ತವೆ. ಮಕ್ಕಳ ಕಲಿಕೆಯ ತೊಂದರೆಗಳ ದೋಷ ಪಂಚೇಂದ್ರಿಯಗಳಲ್ಲಿ ಇದೆಯೋ ಅಥವಾ ಪರಿಸರದಲ್ಲಿದೆಯೋ ಎಂಬ ಕಾರಣವನ್ನು ಕೆಲವು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಬಹುದು. ಈ ತೊಂದರೆ ಕಾಣಿಸಿಕೊಳ್ಳಲು ಪಾಲಕರು ಮಕ್ಕಳನ್ನು ಬೆಳೆಸುವ ರೀತಿಯೂ ಕಾರಣವಾಗಿರುತ್ತದೆ. ಇಂತಹ ಸಂಗತಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಕೃತಿ ಇದು.
©2024 Book Brahma Private Limited.