ಡಾ. ಜಿ. ಪುರುಷೋತ್ತಮ ಅವರು ಬರೆದ ಕೃತಿ-ಕಿವುಡು ಮಗು ಮಾತಾಡಬಲ್ಲದು. ವಿಕಲ ಚೇತನರಿಗೆ ವಿಶೇಷ ಶಿಕ್ಷಣ ನೀಡುವುದು ತುಂಬಾ ಕಷ್ಟದ ಕೆಲಸ. ಅದಕ್ಕೆ ವಿಶೇಷ ಶಿಕ್ಷಣ ಹಾಗೂ ತರಬೇತಿಯ ಅಗತ್ಯವಿದೆ. ಇಲ್ಲಿ ಲೇಖಕರು ಕಿವುಡು ಮಕ್ಕಳಿಗೆ ಹೇಗೆ ಮಾತು ಕಲಿಸಬಹುದು ಎಂಬ ಬಗ್ಗೆ ಶೈಕ್ಷಣಿಕ ವಿಧಾನಗಳನ್ನು ಪರಿಚಯಿಸಿದ್ದಾರೆ. ಈ ಕೃತಿಯು ಕೇವಲ ವಿಶೇಷ ಶಿಕ್ಷಣ ಪಡೆದ ಶಿಕ್ಷಕರಿಗೆ ಹಾಗೂ ಕಿವುಡು ಮಗು ಹೊಂದಿರುವ ಪಾಲಕರಿಗೂ ತುಂಬಾ ಉಪಯುಕ್ತವಾಗಿದೆ. ಅಗತ್ಯಕ್ಕೆ ತಕ್ಕಂತೆ ಚಿತ್ರಗಳ ಮೂಲಕವೂ ಇಲ್ಲಿ ಶಿಕ್ಷಣ ನೀಡಲು ಯತ್ನಿಸಲಾಗಿದೆ. ಈ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ.
©2024 Book Brahma Private Limited.