ಕಲಿಕೆಯ ತೊಂದರೆಗಳು- ಲೇಖಕ-ವಾಕ್ ಶ್ರವಣತಜ್ಞ ಡಾ. ಜಿ. ಪುರುಷೋತ್ತಮ ಅವರು ಬರೆದ ಕೃತಿ. ಕಲಿಕೆಯ ತೊಂದರೆಗಳು ಮುಖ್ಯವಾಗಿ ಮಗು ಬೆಳೆಯುತ್ತಿರುವ ಪರಿಸರವೇ ಪ್ರಮುಖ ಕಾರಣ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಜೊತೆಗೆ, ಹೆತ್ತವರೂ ಈ ತೊಂದರೆಗೆ ಕಾರಣವಾಗುವರು. ಇದು ಹೆತ್ತವರಿಗೂ ತಿಳಿದಿರಲಾರದು. ಮಗುವಿನ ದೃಷ್ಟಿದೋಷ, ಶ್ರವಣದೋಷ, ನರಗಳ ದೋಷವೂ ಕಾರಣವಾಗಿರಬಹುದು. ಈ ತೊಂದರೆಯನ್ನು ಗುರುತಿಸುವುದು ಹೇಗೆ ? ಇದರ ಪರಿಹಾರ ಹೇಗೆ ? ಮಕ್ಕಳ ಕಲಿಕೆಯ ತೊಂದರೆಯನ್ನು ಗುರುತಿಸುವ ನಿಟ್ಟಿನಲ್ಲಿ ಹೆತ್ತವರಿಗೂ, ಶಿಕ್ಷಕರಿಗೂ ಉಪಯುಕ್ತವಾಗುವ ಕೃತಿ ಇದು.
©2024 Book Brahma Private Limited.