ಕನ್ನಡ ತತ್ವಪದಕಾರರ ಸಾಹಿತ್ಯಧಾರೆ

Author : ರಾಜಶ್ರೀ ಕಿಶೋರ

Pages 226

₹ 100.00




Year of Publication: 2021
Published by: ಶೇಖರಯ್ಯ ನಂದಿ ಸಹೋದರರು

Synopsys

ಡಾ. ರಾಜಶ್ರೀ ಕಿಶೋರ ಅವರು 'ಕನ್ನಡ ತತ್ವಪದಕಾರರ ಸಾಹಿತ್ಯಧಾರೆ'ಯ ಮೂಲಕ ತತ್ವಪದಗಳ ಸಂಕಲನ ಸಾಹಿತ್ಯವನ್ನು ಉತ್ತಮ ಕಾಣಿಕೆ ನೀಡಿದ್ದಾರೆ. ತತ್ವಪದಗಳ ಸಾಹಿತ್ಯಕತೆ ಮತ್ತು ಸಾಧನಾತ್ಮಕ ಕತೆಗಳ ಇಮ್ಮಗ್ಗುಲುಗಳನ್ನು ಈ ಸಂಗ್ರಹ ಕಾಪಾಡಿಕೊಂಡಿದೆ. ಇಲ್ಲಿ ಒಟ್ಟು ಗೂಡಿಸಲ್ಪಟ್ಟಿರುವ ಬಹುತೇಕ ರಚನೆಗಳು ರಾಯಚೂರಿನ ಸುತ್ತಮುತ್ತಲ ಸೀಮೆಯವರಾದರೂ ಇತರ ಪ್ರದೇಶಗಳ ಜನಪ್ರಿಯ ರಚನೆಗಳನ್ನು ಒಳಗೊಂಡಿದೆ. ಉದಾಹರಣಗೆ ಶರೀಫರ, ಸಣ್ಣಪ್ಪನವರ ರಚನೆಗಳು ಪ್ರಾದೇಶಿಕ ಮಿತಿಯನ್ನು ದಾಟಿ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಹೊಂದಿವೆ. ಸಂಸ್ಕೃತ ರಚನೆಯೂ ಇಲ್ಲಿ ಸೇರಿದೆ. ತತ್ವಪದಗಳು ಭಾಷೆಯಲ್ಲಿ ಅಚ್ಚಕನ್ನಡದ ರಚನೆಗಳಾದರೂ ಅವುಗಳ ವಸ್ತುಗಳ ಹರಿವು ಭಾರತೀಯವಾದುದು. ಈ ವಿಶಾಲ ದೃಷ್ಟಿ ಪ್ರಸ್ತುತ ಸಂಗ್ರಹಕ್ಕೆ ಪ್ರೇರಣೆ ನೀಡಿದೆ. ಇಡೀ ಭಾರತದ ಅವಧೂತ ಪರಂಪರೆಗಳ ಮುಖವಾಣಿಯಾಗಿ ಭಾರತೀಯ ಸಮಾಜದ ಸಮಸ್ತ ವರ್ಗ ಗಳನ್ನು ಆತುಕೊಂಡ ತತ್ವಪದ ಪರಂಪರೆ ಇಹ-ಪರ, ಜೀವ-ಶಿವ, ತಾನು-ಇದಿರು, ಪ್ರಾದೇಶಿಕ ಸಮಸ್ತ ಹೀಗೆ ಎಲ್ಲಾ ವೈರುದ್ಯ ಬಿಂದುಗಳನ್ನೂ ಒಂದು ಮಹಾನ್ ಸಮನ್ವಯ ಸಂಸ್ಕೃತಿಯ ದ್ಯೋತಕವೆನ್ನುವುದನ್ನು ಈ ಕೃತಿ ಸಾರಿ ಸಾರಿ ಇಂದಿನ ಒಡಕು ಕೆಡಕುಗಳ ಸಮಾಜಕ್ಕೆ ಸಂಜೀವಿನಿಯಂತಿದೆ ಎಂದು ಎಚ್‌.ಎಸ್‌. ಶಿವಪ್ರಕಾಶ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಶ್ರೀ ಕಿಶೋರ

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...

READ MORE

Related Books