ಲೇಖಕ ಲಿಂಗಾರೆಡ್ಡಿ ಶೇರಿ ಅವರು ನಿಂಬೋಳಿ ತಿಪ್ಪಣ್ಣನವರ (1922-83) ತತ್ವಪದಗಳನ್ನು ಸಂಪಾದಿಸಿದ ಕೃತಿ-ನಿತ್ಯಾನಂದ ತತ್ವಪದಗಳು. ಸುಮಾರು 66 ಕನ್ನಡ ಹಾಗೂ ತೆಲುಗು 03 ತತ್ವಪದಗಳು ಸಂಕಲನಗೊಂಡಿವೆ. ಸೇಡಂ ತಾಲೂಕು ತೆಲಂಗಾಣ ರಾಜ್ಯದ ಗಡಿ ತಾಲೂಕು ಆಗಿದ್ದರಿಂದ ತೆಲುಗು ಪ್ರಭಾವವನ್ನೂ ನಿರ್ಲಕ್ಷಿಸುವಂತಿಲ್ಲ. ತತ್ವಪದಗಳು ಅಧ್ಯಾತ್ಮಕ, ಜೀವ, ನಿರ್ಜೀವ, ಸಮಾಜ ಹಾಗೂ ಮನುಕುಲದ ಮಹತ್ವ, ಮೂಢನಂಬಿಕೆ ವಿರೋಧಿ ಭಾವ, ಕೋಮು ಸೌಹಾರ್ದತೆ ಇತ್ಯಾದಿ ಅಂಶಗಳು ಇವರ ತತ್ವಪದಗಳು ವಸ್ತುಗಳಾಗಿವೆ. ಸೇಡಂ ತಾಲೂಕಿನ ರಂಜೋಳ ಗ್ರಾಮದವರಾದ ತಿಪ್ಪಣ್ಣನವರ ಮನೆತನದ ಅಡ್ಡ ಹೆಸರು ನಿಂಬೋಳಿ. ಹೀಗಾಗಿ ಅವರನ್ನು ನಿಂಬೋಳಿ ತಿಪ್ಪಣ್ಣ ಎಂದೇ ಕರೆಯಲಾಗುತ್ತಿತ್ತು. ಇವರ ತತ್ವಪದಗಳು ವಿಶೇಷವಾಗಿ ತೆಲುಗು ಭಾಷೆಯಲ್ಲಿ ರಚಿತವಾದ ತತ್ವಪದಗಳನ್ನು ಲೇಖಕರು ಸಂಶೋಧಿಸುತ್ತಿದ್ದಾರೆ.
©2025 Book Brahma Private Limited.