ಹೈದ್ರಾಬಾದ-ಕರ್ನಾಟಕ ಪ್ರದೇಶವೆಂದರೆ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ತುಂಬಾ ಶ್ರೀಮಂತಿಕೆಯ ನಾಡು. ದಾಸರು, ಸೂಫಿ- ಸಂತರು, ಶರಣರು ಈ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವರು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಪ್ರಥಮಗಳು ಇದೇ ಹೈದ್ರಾಬಾದ-ಕರ್ನಾಟಕ ಪ್ರದೇಶದಲ್ಲಿವೆ. ಹೀಗಾಗಿ ಶ್ರೀಮಂತ ಇತಿಹಾಸದ ಈ ಪ್ರದೇಶವು ತತ್ವಪದಗಳ ದೃಷ್ಟಿಯಿಂದಲೂ ಅತ್ಯಂತ ಸಮೃದ್ಧ ಎಂಬುದನ್ನು ಡಾ. ಬಸವರಾಜ ಸಬರದ ಅವರ ‘ಹೈದರಾಬಾದ-ಕರ್ನಾಟಕದ ತತ್ವಪದಗಳು; ಕೃತಿ ತೆರೆದು ತೋರುತ್ತದೆ. ಹೈ-ಕ ಭಾಗದ ತತ್ವಪದಕಾರರ ಬದುಕು, ಸಂದೇಶಗಳ ದೃಷ್ಟಿಕೋನ, ಉದ್ದೇಶಗಳೊಂದಿಗೆ ವ್ಯಕ್ತಿಗತ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಚಯಿಸುತ್ತದೆ.
©2024 Book Brahma Private Limited.