‘ಶಿಲವೇರಿ ಶಿವಪ್ಪನವರ ತತ್ವಪದಗಳು’ ಲೇಖಕ ಪೀರ್ ಬಾಷಾ ಅವರು ಸಂಪಾದಿಸಿರುವ ಕೃತಿ. ತತ್ವಪದ ಪರಂಪರೆಯು ನಮ್ಮ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಭಿವ್ಯಕ್ತಿಯ ವಿಸ್ತಾರವಾದ ಭಾಗವಾಗಿದೆ. ಪ್ರಜಾಸತ್ತಾತ್ಮಕ ಜೀವನಮೌಲ್ಯಗಳನ್ನು ಅಭಿವ್ಯಕ್ತಿಸುವ ಮತ್ತು ಬದುಕುವ ಪರಂಪರೆಗಳಲ್ಲಿ ತತ್ವಪದ ಪರಂಪರೆಯೂ ಒಂದು. ವರ್ತಮಾನದ ಜೀವಂತ ಭಾಗವಾಗಿರುವ ತತ್ವಪದಗಳನ್ನು ಸಮಗ್ರವಾಗಿ ಸಂಪಾದಿಸಿ ಪ್ರಕಟಿಸುವ ಯೋಜನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿತ್ತು. ಆ ಯೋಜನೆಯ ಭಾಗವಾಗಿ ‘ಶಿಲವೇರಿ ಶಿವಪ್ಪನವರ ತತ್ವಪದಗಳು’ ಎಂಬ ಕೃತಿಯನ್ನು ಪೀರ್ ಬಾಷ ಅವರು ಸಂಪಾದಿಸಿದ್ದಾರೆ.
©2025 Book Brahma Private Limited.