ಜ್ಞಾನ ಒಂದು ಇದ್ದ ಮ್ಯಾಲ ಮಾನಕೇನ ಕಡ್ಮಿ ಇಲ್ಲ

Author : ಪಿ. ಜಿ. ಕೆಂಪಣ್ಣವರ

Pages 68

₹ 50.00




Year of Publication: 2007
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: 23 ಅಲ್ಲಮಪ್ರಭು ಜನ ಕಲ್ಯಾಣ ಸಂಸ್ಥೆ, ಸಿದ್ಧ ಸಂಸ್ಥಾನಮಠ, ಚಿಂಚಣಿ-591272

Synopsys

`ಜ್ಞಾನ ಒಂದು ಇದ್ದ ಮ್ಯಾಲ ಮಾನಕೇನ ಕಡ್ಮಿ ಇಲ್ಲ’ ಕೃತಿಯು ಗುರುಪಾದ ವಾಳಕಿ ಅವರ ಸಂಕಲನವಾಗಿದ್ದು, ಪಿ.ಜಿ. ಕೆಂಪಣ್ಣವರ ಸಂಪಾದಿತ ಶಿರಗೂರು ಕಲ್ಮೇಶನ ತತ್ತ್ವಪದಗಳಾಗಿವೆ. ಈ ಕೃತಿಯ ಕುರಿತ ಕೆಲವೊಂದು ವಿಚಾರಗಳು ಹೀಗಿವೆ; ಕಲ್ಲೇಶ್ವರರ ಪರಮ ಭಕ್ತರೂ, ಪಾರಮಾರ್ಥ ರಂಗದ ಅಸದೃಶ್ಯ ವ್ಯಕ್ತಿತ್ವವುಳ್ಳ ''ಶಿರಗೂರಿನ ಕಲ್ಮೇಶನ ತತ್ವಪದಗಳೆಲ್ಲ ಬಹು ಅಮೂಲ್ಯವಾದವುಗಳು. ರಾಯಭಾಗ ತಾಲೂಕಿನ ಚಿಕ್ಕ ಗ್ರಾಮವಾದ ಶಿರಗೂರಿನ ಶ್ರೀ ಸತ್ಯಪ್ಪಹಾಗೂ ಶ್ರೀಮತಿ ಸಿದ್ದಮ್ಮ ದಂಪತಿಗಳ ಸುಪುತ್ರನಾದ ಕಲ್ಲೇಶ್ವರರು ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಒಲವನ್ನು ಗಳಿಸಿಕೊಂಡವರು. ತಮ್ಮ ಹುಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾತ್ರೆ, ಉತ್ಸವಗಳಲ್ಲಿ ಭಾಗಿಯಾಗಿ ಅಲ್ಲಿ ಹಾಡುತ್ತಿದ್ದ. ಡೊಳ್ಳಿನ ಹಾಡುಗಳನ್ನು ರಿವಾಯತ ಪದಗಳನ್ನು, ಗೀಗೀ, ಲಾವಣಿ ಹಾಗೂ ಭಕ್ತಿಪದಗಳನ್ನು ಕೇಳಿ ತಾನೂ ಸಹ ಅರ್ಥಗರ್ಭಿತವಾದ, ಸಂಗೀತಾತ್ಮಕ ತತ್ವಪದಗಳನ್ನು ರಚಿಸಿ, ಹಾಡಿ ಜನರನ್ನು ರಂಜಿಸುತ್ತಿದ್ದ ಕಲ್ಲೇಶನ ಬದುಕು, ಪಟ್ಟ ಪಾಡು ಬಹುರೋಚಕವಾದುದು ಹಿರಿಯರ ಒತ್ತಾಯಕ್ಕೆ ಮಣಿದು ಮದುವೆಯಾದರೂ ಸದಾ ಪಾರಮಾರ್ಥದಲ್ಲಿಯೇ ಇದ್ದು ಸಂಸಾರವನ್ನು ಸಂಸಾರ ಮಾಡಿಕೊಂಡವರು. ಭವಸಾಗರವನ್ನು ದಾಟುವ ದಾರಿಕಂಡವರು. ಮೋಜಿಗಾಗಿ ಸರ್ಕಸ್ ಕಂಪನಿ ಕಟ್ಟಿ ನಾಡನೆಲ್ಲ ಸುತ್ತಾಡಿ ಅನುಭವದಾಗರವಾದವರು. ಹಿಡಿದ ವೃತ್ತಿಯಲ್ಲಿ ಸೋಲನ್ನನುಭವಿಸಿ ಸಾವಿಗೆ ಶರಣಾಗಬೇಕೆಂದಾಗ ಅನುಭಾವಿಗಳ ಸಂಪರ್ಕದಿಂದ ಆ ವಿಚಾರಕ್ಕೆ ತಿಲಾಂಜಲಿಯನ್ನಿತ್ತು ಬದುಕಬೇಕೆಂಬ ಛಲ ಹೊತ್ತುಸಾಗಿ ಅಧ್ಯಾತ್ಮದ ಶಿಖರವೇರಿದವರು. ಆ ನಂತರದ ಅವರ ಅಮೂಲ್ಯ ವೃಕ್ತರುಗು ಬದುಕು ಸಾಮಾನ್ಯರಿಗೆ ದಾರಿದೋರುವಂತಹದು, ಏರಿದ ಎತ್ತರ ಬೆಳಕ ನ್ನು ವ ಬೀರುವಂತಹದು. ಸದಕರಣ ಸಾಕ್ಷಿ ಎಂಬ ಅಧ್ಯಾತ್ಮದ ಔನ್ನತ್ಯಕ್ಕೇರಿದರೂ ಗುರುವನ್ನೂ ಮೀರಿ ನಿಂತ ಕಲ್ಲೇಶನ ಶಿಷ್ಯ ಎರಿಗಳು, ಸಮೂಹವೂ ಸಹ ಬಹುದೊಡ್ಡದು. ಅವರ ಕರಸಂಜಾತರಾಗಿ ಬೆಳೆದ ಸದ್ಗುರು ಅಲ್ಲಮಪ್ರಭು ಮಹಾರಾಜ (ತಾತ್ಯಾಸಾಹೇಬ ಪಾಟೀಲರು ಈಗಾಗಲೇ ತಮ್ಮ ಗುರುವಿನಿಂದ ರಚಿತವಾದ ''ಪರಮಾರ್ಥ ಜ್ಞಾನ ಜ್ಯೋತಿ' ಕೃತಿಗೆ ಸರಳ ಹಾಗೂ ಸುಂದರವಾದ ಟೀಕಾ ತಾತರ್ಯ ಬರೆದು ಜ್ಞಾನಪಿಪಾಸುಗಳಿಗೆ ಸಹಕರಿಸಿದ್ದನ್ನು ಸ್ಮರಿಸಲೇಬೇಕು ಎಂದಿದೆ.

About the Author

ಪಿ. ಜಿ. ಕೆಂಪಣ್ಣವರ

ಪಿ. ಜಿ. ಕೆಂಪಣ್ಣವರ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನವರು. ಸಾಹಿತಿ, ಸಂಶೋಧಕರು.  ಕೃತಿಗಳು : ಬೆಳಗಾವಿ ಜಿಲ್ಲೆಯ ಸಾಹಿತ್ಯ ದರ್ಶನ ...

READ MORE

Related Books