ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರು ಬರೆದ ತತ್ವಪದಗಳ ಸಂಕಲನ-ಗುಡ್ಡದ ಗುಡುಗು. ಪತ್ರಕರ್ತ ಹಿರಿಯ ಸಾಹಿತಿ ಬಿ. ಮಹಾದೇವಪ್ಪ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿಯ ತತ್ವಪದಗಳು ತುಂಬಾ ಅರ್ಥಪೂರ್ಣವಾಗಿವೆ. ಜೀವನ ತತ್ವಭರಿತವಾಗಿವೆ. ಭಜನೆ ಹಾಡುಗಳ ಸ್ವರೂಪದಲ್ಲಿವೆ. ಜೀವನಾನುಭವದೊಡನೆ ಅಭಿವ್ಯಕ್ತಿ ಸಾಮರ್ಥ್ಯ ಇವರಿಗೆ ಸಿದ್ಧಿಸಿದೆ. ತಿಣುಕಿ ಬರೆಯದೇ ಸಹಜತೆಯನ್ನು ಒಳಗೊಂಡಿವೆ. ದೈವದಲ್ಲಿ ಅಚಲ ನಂಬಿಕೆ ಇರಬೇಕು ಎನ್ನುವ ಮೂಲಕ ಮನುಷ್ಯನ ಭ್ರಮೆಗಳನ್ನು ತೆರೆದು ತೋರಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಸಿ.ಎಂ. ಪಟ್ಟೇದಾರ ಅವರು ಕೃತಿಗೆ ಬೆನ್ನುಡಿ ಬರೆದು ‘ಸಾಮಾಜಿಕ ಅನಿಷ್ಟಗಳ ವಿರುದ್ಧ ಕಾವ್ಯ ರಚನೆಯ ಮೂಲಕ ಕವಿಗಳ ಹೋರಾಟವಿರುವುದನ್ನು ಕಾಣುತ್ತೇವೆ. ತತ್ವಪದಗಳ ಸ್ವರೂಪದಲ್ಲಿದ್ದರೂ ವೈಚಾರಿಕತೆ ಇದೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.