‘ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ’ ಶಿವಕವಿ ಶಿವಣ್ಣ ಹುಲ್ಲೂರ ಅವರ ತತ್ವಪದಗಳನ್ನು ಡಾ. ಸಿ.ಬಿ. ಚಿಲ್ಕರಾಗಿ ಅವರು ಸಂಪಾದಿಸಿದ್ದಾರೆ. ಕಲ್ಯಾಣ ಕರ್ನಾಟಕವೆಂದರೆ ವೈಚಾರಿಕತೆಯ ಗೋಳವನ್ನು ನಿರ್ಮಿಸಿದ ತತ್ವಪದ ಪರಂಪರೆಯ ನೆಲ. ಕರ್ನಾಟಕದಲ್ಲಿ ಪರ್ಯಾಯ ಸಾಹಿತ್ಯ ಆಧ್ಯಾತ್ಮ ದಾರ್ಶನಿಕತೆಯನ್ನು ಕಿರುದಾರಿಗಳಲ್ಲಿ ತತ್ವಪದಕಾರರು ಶೋಧಿಸಿದ್ದಾರೆ. ಅಲ್ಲದೆ ನೆಲಮೂಲ ಸಂಸ್ಕೃತಿ ಚಹರೆಯನ್ನು ಅವೈದಿಕ ನೆಲಯಲ್ಲಿ ರೂಪಿಸಿದ್ದಾರೆ. ಇಂದಿಗೂ ಹೊಸಕಾಲದ ನೆಲದ ಆರ್ದ್ರತೆಯನ್ನು ಕವಿತೆಯಲ್ಲದ ರೂಪದಲ್ಲಿ ಹಿಡಿದಿಡುತ್ತಿರುವುದು ವಿಶೇಷ. ಕಾಲುದಾರಿಯಲ್ಲಿ ಅನುಭಾವಿಕ ಪರಮಾರ್ಥವನ್ನು ಈ ಕಾಲದಲ್ಲಿ ಸಶಕ್ತವಾಗಿ ನೆಯ್ದು ಕೊಡುತ್ತಿರುವ ಶಿವಕವಿ ಶಿವಣ್ಣ ಹುಲ್ಲೂರು ಅವರು ತಮ್ಮದೇ ಪರಿಭಾಷೆಯಲ್ಲಿ ಬರೆದಿದ್ದಾರೆ. ನಾಟಕ, ಕಾವ್ಯ, ಜೀವನ ಚರಿತ್ರೆಗಳ ಮೂಲಕ ಮತ್ತು ತಮ್ಮ ಹಾಡುಗಳನ್ನು ಕೇಳುಗರು ಕ್ಯಾಸೆಟ್ ಗಳನ್ನು ಮಾಡಿಸಿ ಕೊಂಡಿದ್ದಾರೆ. ನಡೆ ನುಡಿಯಲ್ಲಿ ಒಂದಾಗುವ ಮಾರ್ಗ ಕಂಡುಕೊಳ್ಳುವ ತತ್ವಪದಕಾರರ ಸಾಧನಾ ಕೂಟಗಳಲ್ಲಿ ಮುಖಾಮುಖಿಯಾಗುವ ಇವರು ಆಧ್ಯಾತ್ಮ ಸಾಧಕರಾಗಿಯೂ ಹೆಸರು ಗಳಿಸಿದ್ದಾರೆ.
©2024 Book Brahma Private Limited.