ಡಾ.ಕೂ.ಸ.ಅಪರ್ಣ ಅವರು ಬರೆದಿರುವ ' ದೇವಾಲಯ ವಾಸ್ತುಶಿಲ್ಪ ಪರಿಚಯ ' ಪುಸ್ತಕವು ದೇವಾಲಯ ವಾಸ್ತುಶಿಲ್ಪವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಸಹಾಯ ಮಾಡುವ ಒಂದು ವಿಶಿಷ್ಟ ಮಾರ್ಗದರ್ಶಿ ಕೃತಿಯಾಗಿದೆ. ದೇವಾಲಯ ವಾಸ್ತುಶಿಲ್ಪವನ್ನು ಕನ್ನಡದಲ್ಲಿ ಶಾಸ್ತ್ರೀಯವಾಗಿ ಪರಿಚಯಿಸುವ ಪುಸ್ತಕ ಇದಾಗಿದ್ದು, ಭಾರತದಲ್ಲಿ ದೇವಾಲಯಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಅಲ್ಲದೆ ಸಾಮಾಜಿಕ, ಆಡಳಿತಾತ್ಮಕ ಹಾಗೂ ಆರ್ಥಿಕ ಕೇಂದ್ರಗಳು ಸಹ ಆಗಿದ್ದವು ಎಂಬುದನ್ನು ನಮ್ಮ ಪ್ರಾಚೀನ ಶಾಸನಗಳು ಸಮರ್ಥವಾಗಿ ಮಾಹಿತಿ ನೀಡುತ್ತವೆ. ಅಲ್ಲದೆ, ವಾಸ್ತುಶಿಲ್ಪ, ಮೂರ್ತಿಶಿಲ್ಪ ಮತ್ತಿತರ ದೃಷ್ಟಿಯಿಂದ ಅದೊಂದು ಕಲಾವೈಭವವೂ ಆಗಿತ್ತು ಎಂಬುದಕ್ಕೆ ಆ ಕಾಲದ ದೇವಾಲಯಗಳೇ ಸಾಕ್ಷಿಯಾಗಿವೆ. ಕೃತಿಯ ಪರಿವಿಡಿಯಲ್ಲಿ : ದೇವಾಲಯ : ವಿಷಯ ಪ್ರವೇಶ, ಊರ್ಧ್ವಮುಖ ರಚನೆಗಳು, ತಿರ್ಯಙ್ಮುಖ ರಚನೆಗಳು, ಅಲಂಕಾರಿಕ ಭಾಗಗಳು , ಬಾಹ್ಯ ವಾಸ್ತುರಚನೆಗಳು, ಅನುಬಂಧಗಳು ಹೀಗೆ ಪುಸ್ತಕವನ್ನು ಅತ್ಯಂತ ನಿಖರ ಮಾಹಿತಿಯೊಡನೆ ನಿರೂಪಿಸಲಾಗಿದೆ.
©2024 Book Brahma Private Limited.