ಲೇಖಕರು ಆರ್ಕಿಟೆಕ್ಚರ್ ಕಲಿಯುತ್ತದ್ದಾಗ ಕಾಲೇಜು ಹೋದದ್ದು ಕಡಿಮೆ. ಐದು ವರ್ಷಗಳ ಬಿ-ಆರ್ಕ್ ಕೋರ್ಸಿನಲ್ಲಿ ಓದಿ ಕಲಿತಿದ್ದಕ್ಕಿಂತ ನೋಡಿ ಕಲಿತಿದ್ದೇ ಹೆಚ್ಚು.ಲೇಖಕರು ವಿದ್ಯಾರ್ಥಿಯಾಗಿದ್ದಾಗ ವರ್ಷಪೂರ್ತಿ ಪ್ರವಾಸ ಮಾಡುತ್ತಿದ್ದರು ಈ ಸುತ್ತಾಟದ ಬದುಕನ್ನು “ಕಮಾನು ಕಟ್ಟುಕತೆ ಕಟ್ಟುಪಾಡು”ಕೃತಿಯಲ್ಲಿ ಕಥೆಗಾರ ನಾಗರಾಜ ರಾಮಸ್ವಾಮಿ ವಸ್ತಾರೆ ವಿವರಿಸಿದ್ದಾರೆ. ಹೊಸ ಮಾದರಿಯಲ್ಲಿ ಈ ಪ್ರವಾಸ ಕಥೆಯನ್ನ ರಚಿಸಲಾಗಿದೆ. ಗುಡಿ ಗೋಪುರಗಳು, ಕೋಟೆ ಕೊತ್ತಲಗಳು, ಮಸೀದಿಗಳು, ಕಮಾನುಗಳಿಗೆ ವಸ್ತಾರೆ ಲೇಖನಿಯು ಮರುಜೀವ ಪಡೆದಿವೆ. ಲೇಖಕರು ಆರ್ಕಿಟೆಕ್ಟ್ ಪ್ಲಸ್ ಕತೆಗಾರ ಕಾಣುವ ಬಗೆ ಹೇಗೆ ಎನ್ನುವುದನ್ನು ಇಲ್ಲಿ ಸುಂದರವಾಗಿ ವಿವರಿಸಲಾಗಿದೆ. ಸರಳ ಸುಂದರ ಭಾಷೆ ಉಪಯುಕ್ತ.
©2024 Book Brahma Private Limited.