ಲೇಖಕಿ ಗೀತಾ ಪಾಟೀಲ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಕೊಪ್ಪಳ ಜಿಲ್ಲೆಯ ವಾಸ್ತು-ಶಿಲ್ಪ-ಸಂಸ್ಕೃತಿʼ. ತಿರುಳುಗನ್ನಡ ನಾಡು ಎಂದೇ ಹೆಸರಾದ ಕೊಪ್ಪಳ ಜಿಲ್ಲಾ ಪ್ರದೇಶ ಭೌಗೋಳಿಕವಾಗಿ ನದಿ, ಬೆಟ್ಟಗಳಿಂದ ಕೂಡಿದ್ದು ಸಮೃದ್ಧ ಇತಿಹಾಸವನ್ನು ಹೊಂದಿದೆ. ಇಲ್ಲಿ ಆಳಿದ ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕುಮ್ಮಟ, ವಿಜಯನಗರ ಮುಂತಾದ ಅರಸು ಮನೆತನಗಳು ತಮ್ಮ ಕಾಲಾವಧಿಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಿ ಇತಿಹಾಸವನ್ನು ಶ್ರೀಮಂತಗೊಳಿಸಿದವರು. ಹೀಗೆ ಕೊಪ್ಪಳ ಪ್ರದೇಶದ ಸ್ಮಾರಕ ಹಾಗೂ ಶಿಲ್ಪಗಳ ಕುರಿತು ನಾನು ಅಧ್ಯಯನ ನಡೆಸಿ ರಚಿಸಿದ ಲೇಖನಗಳನ್ನು ಗೀತಾ ಪಾಟೀಲ ಅವರು ಸಂಕಲಿಸಿ ಪ್ರಸ್ತುತ ಪುಸ್ತಕವನ್ನು ಹೊರತಂದಿದ್ದಾರೆ.
©2024 Book Brahma Private Limited.