ಬೆಲೆ ಏರಿಕೆಗೆ ಕಾರಣ ಮತ್ತು ನಿಯಂತ್ರಣ

Author : ಬಿ.ಆರ್. ಅಣ್ಣಾಸಾಗರ

Pages 48

₹ 48.00




Year of Publication: 2012
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ.

Synopsys

ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರ ಕೃತಿ-ಬೆಲೆ ಏರಿಕೆಗೆ ಕಾರಣ ಮತ್ತು ನಿಯಂತ್ರಣ. ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಚಾರೋಪನ್ಯಾಸ ಮಾಲೆಯಡಿ ಪ್ರಕಟವಾಗಿದೆ. 'ಬೆಲೆ ಏರಿಕೆ ಕಾರಣ ಮತ್ತು ನಿಯಂತ್ರಣ' ಕೃತಿಯು (22/03/2011ರಂದು) ಹುಮನಾಬಾದಿನಲ್ಲಿ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮಾಲೆಯ ಭಾಗವಾಗಿ ಲೇಖಕರು ನೀಡಿದ ಉಪನ್ಯಾಸದ ಬರಹವನ್ನು ಒಳಗೊಂಡಿದೆ. ಅರ್ಥ ವ್ಯವಸ್ಥೆಯಲ್ಲಿನ ಬೆಲೆಗಳ ಹೆಚ್ಚಳಕ್ಕೆ ಕಾರಣ,ಪರಿಣಾಮ ಮತ್ತು ನಿಯಂತ್ರಣದ ವಿವಿಧ ಪ್ರಕಾರಗಳು ಹೀಗೆ ವಿಷಯ ವೈವಿಧ್ಯತೆಯನ್ನು ಒಳಗೊಂಡಿದೆ.

About the Author

ಬಿ.ಆರ್. ಅಣ್ಣಾಸಾಗರ

ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಮೂಲತಃ  ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿ. ಅಲ್ಲಿಯೇ ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ್ದಾರೆ. ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್,  ಆಂಧ್ರಪ್ರದೇಶದ ಕುಪ್ಪಂನಲ್ಲಿಯ ದ್ರಾವಿಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಹಾಗೂ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯನಿಂದ ಬಿ.ಸಿ.ಜೆ; ಪಿ.ಜಿ.ಡಿ.ಇ.ಇ.ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಸೇಡಂ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು, ದೂರದರ್ಶನದಲ್ಲೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಹಲವು ಚಿಂತನ, ...

READ MORE

Related Books