ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಬ್ಯಾಂಕಿಂಗ್ ಉದ್ದಿಮೆ ಕುರಿತು ಬರೆದ ಕೃತಿ ಇದು. ಗುಲಬಗಾ ವಿ.ವಿ. ಪ್ರಸಾರಾಂಗದ ಪ್ರಚಾರೋಪನ್ಯಾಸ ಮಾಲೆ ಅಡಿ ಪ್ರಕಟವಾಗಿದ್ದು, ಲೇಖಕರು ಯಾದಗಿರಿ ತಾಲ್ಲೂಕಿನ ಬಾಡಿಯಾಲ ಗ್ರಾಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಮಾಲೆಯಡಿ ನೀಡಿರುವ ಉಪನ್ಯಾಸಗಳ ಮುದ್ರಿತ ಆವೃತ್ತಿಯೇ ಈ ಕೃತಿ. "ಬ್ಯಾಂಕಿಂಗ್ ಉದ್ದಿಮೆ" ಕೃತಿಯು ಭಾರತ ದೇಶದ ಬ್ಯಾಂಕಿಂಗ್ ವಲಯದ ಉಗಮ, ಉದ್ದೇಶ, ಗುರಿ ಮತ್ತು ಸಾಧನೆ ಕುರಿತ ಸಮಗ್ರ ಮಾಹಿತಿಯನ್ನು ನೀಡುತ್ತದೆ.
©2025 Book Brahma Private Limited.