ಹಣ ಏನಿದು ನಿನ್ನ ವಿಚಿತ್ರ ಗುಣ

Author : ರಂಗಸ್ವಾಮಿ ಮೂಕನಹಳ್ಳಿ

Pages 152

₹ 180.00




Year of Publication: 2023
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

‘ಹಣ ಏನಿದು ನಿನ್ನ ವಿಚಿತ್ರ ಗುಣ’ ರಂಗಸ್ವಾಮಿ ಮೂಕನಹಳ್ಳಿ ಅವರ ರಚನೆಯ ಕೃತಿಯಾಗಿದೆ. ಹಣ ಏನಿದು ನಿನ್ನ ವಿಚಿತ್ರ ಗುಣ ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ. ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ. ಆನೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು. ಆದರೂ ಅದು ಏನೂ ಮಾಡದೆ ಸರಪಳಿ ಕಟ್ಟನ್ನು ಒಪ್ಪಿಕೊಂಡು ಬಂಧಿಯಾಗಿದೆ. ಈ ಕಥೆಯನ್ನು ನಾವೆಲ್ಲರೂ ಸ್ವಲ್ಪ ನಮ್ಮ ಬದುಕಿಗೆ, ವೆಲ್ತ್ ಕ್ರಿಯೇಷನ್ ಬಗ್ಗೆ ತಳುಕು ಹಾಕಿ ನೋಡೋಣವೇ? ನಮ್ಮಲ್ಲಿನ ವ್ಯವಸ್ಥೆ, ಹಣಕಾಸು ಬಗೆಗಿನ ಭಾವನೆಗಳು ಸದಾ ನಮ್ಮನ್ನು ಬಡತನದಲ್ಲಿರಿಸುವ ಅಂಶಗಳನ್ನು ಹೊಂದಿವೆ.

ನಮ್ಮನ್ನು ಬಡವರನ್ನಾಗೇ ಉಳಿಸಲು ನಡೆದಿದೆ ಹುನ್ನಾರ! ಶ್ರೀಮಂತರಾಗಲು ಈ ಪುಸ್ತಕದಲ್ಲಿದೆ ಪರಿಹಾರ ಹೌದು, ನೀವು ನಿಜಕ್ಕೂ ಇಲ್ಲಿನ ಅಂಶಗಳನ್ನು ಓದಿ, ಅಳವಡಿಸಿಕೊಂಡಿದ್ದೇ ಆದರೆ, ಚಿಂತನೆಗಳನ್ನು ಬದಲಿಸಿಕೊಂಡಿದ್ದೇ ಆದರೆ, ನಮ್ಮ ಹಣೆಬರಹವನ್ನು ಕೂಡ ಬದಲಿಸಿಕೊಳ್ಳಬಹುದು. ಆನೆಗೆ ಮರವನ್ನು ಕಿತ್ತೊಗೆಯುವ ಶಕ್ತಿ ಇದ್ದರೂ ಅದು ತನ್ನ ಶಕ್ತಿಯನ್ನು ಬಳಸಿಕೊಳ್ಳದ ಹಾಗೆ ನಾವು ಕೂಡ ಬಡತನವನ್ನು ಕಿತ್ತೋಡಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಪ್ರಯತ್ನ ಬೇಕು ಅಷ್ಟೇ. ಜಗತ್ತಿನಲ್ಲಿ ಹೆಚ್ಚು ಜನರು ಬಡವರಾಗೇ ಉಳಿಯಲು ಇನ್ನೊಂದು ಪ್ರಮುಖ ಕಾರಣವೇನು ಗೊತ್ತೇ? ಹಣವನ್ನು ನಾವು ಸಬ್ ಜೀರೋ ಸಂ ಗೇಮ್ ಎನ್ನುವಂತೆ ನೋಡುತ್ತೇವೆ. ಅಂದರೆ ಒಬ್ಬ ಲಾಭಗಳಿಸಲು, ಇನ್ನೊಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವುದು ಸಬ್ ಜೀರೋ ಸಂ ಗೇಮ್ ಎನ್ನಿಸಿಕೊಳ್ಳುತ್ತದೆ. ವಾಣಿಜ್ಯ ಕಲಿತವರಲ್ಲೂ ಇದರ ಬಗ್ಗೆ ನಿಖರತೆ, ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಹಣ, ವೆಲ್ತ್ ನಾವು ಸೃಷ್ಟಿಸಬಹುದು. ಅದಕ್ಕೆ ಒಬ್ಬ ನಷ್ಟ ಮಾಡಿಕೊಳ್ಳಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ ಎಳವೆಯಿಂದ ನಮ್ಮಲ್ಲಿ ಈ ಅಂಶವನ್ನು ತುಂಬಲಾಗಿದೆ. ಅದರಿಂದ ನಾವು ಪ್ರಜ್ಞಾಪೂರ್ವಕವಾಗಿ ಹೊರಬರಬೇಕಿದೆ. ನೆನಪಿರಲಿ: ಹಣವೆನ್ನುವುದು ಸಬ್ ಜೀರೋ ಸಂ ಗೇಮ್ ಅಲ್ಲವೇ ಅಲ್ಲ. ಹಣ, ವೆಲ್ತ್ ಸೃಷ್ಟಿಸಬಹುದು.

About the Author

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...

READ MORE

Related Books