ಷೇರು ಪೇಟೆ ವ್ಯವಹಾರಗಳ ಬರಹಗಾರ ಹಾಗೂ ಹಣಹೂಡಿಕೆಯ ತಜ್ಞ ಸಲಹೆಗಾರ ರಂಗಸ್ವಾಮಿ ಮೂಕನಹಳ್ಳಿ ಅವರ ಕೃತಿ-ಷೇರು ಸಾಮ್ರಾಜ್ಯ ಕಲಿತವನು ಅಧಿಪತಿ. ಷೇರು ಪೇಟೆಯನ್ನು ಮೊದಲ ಬಾರಿಗೆ ಪ್ರವೇಶ ಬಯಸುವ ಆಸಕ್ತರಿಗೆ ಪ್ರಾಥಮಿಕ ಮಾಹಿತಿ ನೀಡುವ ಕೃತಿ ಇದು. ಷೇರು ಪೇಟೆ ಎಂದರೇನು, ಹಣ ತೊಡಗಿಸುವ ಉಳಿದ ವಲಯಗಳಿಗಿಂತ ಷೇರು ಪೇಟೆ ಹೇಗೆ ಭಿನ್ನ, ಹಣ ತೊಡಗಿಸುವಾಗಿನ ಎಚ್ಚರಿಕೆ, ಮುಂಜಾಗ್ರತೆ ಕ್ರಮಗಳು, ಹಾನಿಯ ಅರಿವು ಆಗುತ್ತಿದ್ದಂತೆ ಷೇರು ಪೇಟೆ ವಲಯದಿಂದ ಹೊರ ಬರುವುದು ಹೇಗೆ, ಷೇರು ಪೇಟೆ ಜೂಜಾಟಕ್ಕೆ ಸಮವೇ..? ಇತ್ಯಾದಿ ಪ್ರಾಥಮಿಕ ಮಾಹಿತಿಯನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.