ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ

Author : ಸಿದ್ದಲಿಂಗರೆಡ್ಡಿ

Pages 196

₹ 200.00




Year of Publication: 2019
Published by: ಟೋಟಲ್ ಕನ್ನಡ
Address: ಜಯನಗರ, 4ನೇ ಬ್ಲಾಕ್, ಬೆಂಗಳೂರು-560011
Phone: +91 92434 55672/+91 080 4146 0325

Synopsys

ಡಾ.ಸಿದ್ಧಲಿಂಗರೆಡ್ಡಿ ಅವರ ಕೃತಿ-ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ. ಮಾನವನ ಹಲವಾರು ಸಂಶೋಧನೆಗಳಲ್ಲಿ ಹಣವು ಒಂದು.  ಹಣದಿಂದ ಮತ್ತು ಹಣಕ್ಕಾಗಿ ಅನೇಕ ಚಟುವಟಿಕೆಗಳು ನಡೆಯುತ್ತವೆ. ಹಣವಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದೂ ಅಸಾದ್ಯ. ಸರಕು ಮತ್ತು ಸೇವೆಗಳನ್ನು ಹಣಕ್ಕೂ ಮತ್ತು ಹಣವನ್ನು ಸರಕು-ಸೇವೆಗಳಿಗೂ ವಿನಿಮಯ ಮಾಡುವ ಪದ್ಧತಿ ಅಸ್ತಿತ್ವದಲ್ಲಿದೆ. ಉತ್ಪಾದನೆ, ಅನುಭೋಗ, ವಿತರಣೆ, ವ್ಯಾಪಾರ, ವಿನಿಮಯ, ಉಳಿತಾಯ ಮೋದಲಾದ ಚಟುವಟಿಕೆಗಳೂ ಹಣದ ಮೂಲಕವೇ ನಡೆಯುತ್ತಿವೆ. ಇದನ್ನು ಹಣದ ಅರ್ಥವ್ಯವಸ್ಥೆ ಎಂದು ಕರೆಯುತ್ತಾರೆ. ಹಣವು ಸಾಟಿ ಪದ್ಧತಿಯಲ್ಲಿನ ಎಲ್ಲ ದೋಷಗಳನ್ನು ನಿವಾರಿಸಿದೆ. ಆದ್ದರಿಂದ, ಹಣಕ್ಕೆ ಬಹಳಷ್ಟು ಪ್ರಾಮುಖ್ಯತೆ ಉಂಟಾಗಿದೆ. ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಿನಿಮಯದ ವಿಧಾನದ ಬಗ್ಗೆ , ಹಣ ಎಂದರೇನು ? ಅದರ ಕಾರ್ಯಗಳು ಮತ್ತು ವಿವಿಧ ರೂಪಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಮತ್ತು ಹಣದ ಮೌಲ್ಯದ ಬಗ್ಗೆ , ಹಣದುಬ್ಬರ ಮತ್ತು ಹಣದ ಕುಗ್ಗುವಿಕೆಯ ಬಗ್ಗೆ ಈ ಪುಸ್ತಕದಲ್ಲಿ. ಕೂಲಂಕುಷವಾಗಿ ಚರ್ಚಿಸಲಾಗಿದೆ.

ಅದೇ ರೀತಿಯಾಗಿ ದೇಶದ ಆರ್ಥಿಕತೆಯಲ್ಲಿ,  ಉದ್ಯಮ ಮತ್ತು ವ್ಯಾಪಾರದ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅವುಗಳು ದೇಶದ ಸಂಪತ್ತಿನ ಪಾಲಕರಾಗಿ ಮಾತ್ರವಲ್ಲದೆ ದೇಶದ ಸಂಪನ್ಮೂಲಗಳಾಗಿಯೂ ಕಾರ್ಯನಿರ್ವಹಿಸುತ್ತವೆ, ಬ್ಯಾಂಕುಗಳು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾಗಿವೆ.  ಆದ್ದರಿಂದ ಆರ್ಥಿಕ ವ್ಯವಸ್ಥೆಯಲ್ಲಿ ಬ್ಯಾಂಕುಗಳ ಕಾರ್ಯಾಚರಣೆಯ ಕುರಿತ ಮಾಹಿತಿ ನೀಡಲಾಗಿದೆ. ಬ್ಯಾಂಕಿಂಗ್, ವಾಣಿಜ್ಯ, ಲೆಕ್ಕಪತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಬೋಧಕರಿಗೂ ಈ ಕೃತಿ ಉಪಯುಕ್ತವಾಗಿದೆ.  


 

About the Author

ಸಿದ್ದಲಿಂಗರೆಡ್ಡಿ

ಡಾ. ಸಿದ್ಧಲಿಂಗರೆಡ್ಡಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ರೊಟ್ನಡಗಿ ಗ್ರಾಮದವರು. ಪ್ರಸ್ತುತ ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವೀಧರರು. 2010 ರಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಿಂದ ( ಪ್ರಥಮ ಶ್ರೇಣಿ) ಎಂ.ಫಿಲ್. ಪದವೀಧರರು.  Impact of MGNREGA: An Economic Analysis in Dharwad District of Karnataka" ಮಹಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವೀಧರರು. ಇಂಡಿಯನ್ ಕೌನ್ಸಿಲ್ ಆಫ್  ಸೋಶಿಯಲ್ ಸೈನ್ಸ್ ರಿಸರ್ಚ್ ...

READ MORE

Related Books