ಆರ್ಥಿಕತೆಯ ಎರಡು ಧ್ರುವ

Author : ಎಸ್‌.ಆರ್‌. ರಾಮಸ್ವಾಮಿ

Pages 130

₹ 60.00




Year of Publication: 1994
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಆರ್ಥಿಕತೆಯ ಎರಡು ಧ್ರುವ'  ಲೇಖನಗಳ ಈ ಸಂಗ್ರಹ ಕೃತಿಯನ್ನು ಹಿರಿಯ ಲೇಖಕ ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಜನಸಾಮಾನ್ಯರ ಕನಿಷ್ಠಾಗತ್ಯಗಳ ಪೂರೈಕೆ, ಆರೋಗ್ಯ, ಶಿಕ್ಷಣ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಅಸ್ತವ್ಯಸ್ತತೆ ತುಂಬಿರುವುದಕ್ಕೆ ಕಾರಣ ಈಗಿನ ಅಭಿವೃದ್ಧಿಯ ಮೂಲ ಕಲ್ಪನೆಯಲ್ಲೇ ಹುದುಗಿಕೊಂಡಿರುವ ದೋಷಗಳು. ನೇರವಾಗಿಯೇ ಲಕ್ಷಾಂತರ ಜನರ ಜೀವಿಕೆಗೆ ಮುಳುವಾಗುತ್ತಿರುವ ಯೋಜನೆಗಳು ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೊಳ್ಳುತ್ತಿವೆ. ಆರ್ಥಿಕವೆಂದು ಹೊರನೋಟಕ್ಕೆ ತೋರಿದರೂ ಇಂದು ನಡೆಯುತ್ತಿರುವ ಸಂಘರ್ಷ ಎರಡು ಭಿನ್ನ ಜಗದ್‌ದೃಷ್ಟಿಗಳ ನಡುವಣದ್ದು. ಆದ್ದರಿಂದಲೇ, ಸಾಮಾಜಿಕ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ಧ್ರುವೀಕರಣ ಎದ್ದುಕಾಣುತ್ತಿರುವುದು. ಈ ಭೂಮಿಕೆಯಲ್ಲಿ ಸಮಕಾಲೀನ ಆರ್ಥಿಕತೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿಯ ಪ್ರಬಂಧಗಳಲ್ಲಿ ಮಾಡಲಾಗಿದೆ; ಸ್ವದೇಶೀ ಕಾಯಾಚರಣೆಯ ಪ್ರಸ್ತುತತೆಯ ಪ್ರತಿಪಾದನೆಯೂ, ಸ್ವದೇಶಿ ಸಂಹಿತೆಯ ಹಲವು ಮುಖಗಳ ವಿವರಣೆಯೂ ಇಲ್ಲಿವೆ. ಆರ್ಥಿಕತೆಯ ನಿಜ ಸ್ವರೂಪ, ಅದನ್ನು ರೂಪಿಸುತ್ತಿರುವ ಜಾಗತಿಕ ಶಕ್ತಿಗಳ ಹಿನ್ನೆಲೆ, ಈಗಿನ ಅಭ್ಯುದಯ ಸಿದ್ಧಾಂತಗಳ ಆಧಾರ ಪ್ರತಿಜ್ಞೆಗಳೊಡಗೂಡಿದ ಮಿಥ್ಯೆಗಳು, ಇಂದಿನೆಲ್ಲ ವಿಕೃತಿಗಳ ನಿವಾರಣೆಗೆ ಸ್ವದೇಶಿ ಜೀವನಕ್ರಮದ ಅನಿವಾರ್ಯತೆ – ಈ  ವಿಷಯಗಳ ವಿಸ್ತರಿತ ಪ್ರತಿಪಾದನೆಯೇ ‘ಆರ್ಥಿಕತೆಯ ಎರಡು ಧ್ರುವ’.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books