ಸಾಹಿತಿ ಕು.ಶಿ. ಹರಿದಾಸ ಭಟ್ಟರು ಬರೆದ ಕೃತಿ-ಅರ್ಥಶಾಸ್ತ್ರ. ಜನಸಾಮಾನ್ಯರ ತಿಳಿವಳಿಕೆಗಾಗಿ ಬರೆದ ಅರ್ಥಶಾಸ್ತ್ರದ ಕೃತಿ ಇದು. ಅರ್ಥಶಾಸ್ತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದರೆ, ಅದರ ಮೂಲ ಸ್ವರೂಪಗಳ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರದ ಓಘವನ್ನು ತಿಳಿಯಬಹುದು. ಜನಸಾಮಾನ್ಯರಿಗೂ ಅರ್ಥಶಾಸ್ತ್ರವನ್ನು ಹೇಗೆ ತಿಳಿಸಬೇಕು ಎಂಬ ಸೂಕ್ಷ್ಮತೆಯಿಂದ ಈ ಕೃತಿ ರಚಿಸಿದೆ ಎಂದು ಲೇಖಕರು ಹೇಳಿದ್ದಾರೆ. ನಿರುದ್ಯೋಗ, ಪೂಣೋದ್ಯೋಗ, ಹಣದ ಬೇಡಿಕೆ, ಪೂರೈಕೆ, ಗೇಣಿ, ಕೂಲಿ, ಮೌಲ್ಯ ಮೀಮಾಂಸೆ, ಉತ್ಪಾದನೆ, ಬಂಡವಾಳ, ಅನುಭೋಗ, ಜನಸಂಖ್ಯೆ ಹೀಗೆ ಮೂಲ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರದ ಪೂರ್ಣರೂಪವನ್ನು ತಿಳಿಯಪಡಿಸಲಾಗಿದೆ.
©2024 Book Brahma Private Limited.