ಕವಿ ಷಡಕ್ಷರದೇವ ವಿರಚಿತ ರಾಜಶೇಖರ ವಿಳಾಸಂ-ಕೃತಿಗೆ ಪಂಡಿತ ಚನ್ನಪ್ಪ ಎರೇಸೀಮೆ ಅವರು ಸರಳ ಕನ್ನಡದ ರೂಪು ನೀಡಿದ್ದಾರೆ. ಷಡಕ್ಷರ ದೇವ ಕವಿಯು ಹಳೆಗನ್ನಡ ಕಾವ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದಾನೆ. ಅದರಲ್ಲೂ ಆತನ ರಾಜಶೇಖರ ವಿಳಾಸಂ ಕೃತಿಯು ಸಾಹಿತ್ಯಕ ವಲಯದಲ್ಲಿ ಹೆಚ್ಚು ಚರ್ಚಿತ-ಪ್ರಶಂಸನಾತ್ಮಕ ಕೃತಿ.
ಹಳೆಗನ್ನಡದ ಅಮೂಲ್ಯ ಸಾಹಿತ್ಯಕ ಸಂಪತ್ತನ್ನು ಸರಳ ಕನ್ನಡಕ್ಕೆ ತರುವ ಮಹತ್ವದ ಯೋಜನೆಯಡಿ (ಪಂಚವಾರ್ಷಿಕ ಯೋಜನೆಯಡಿಯ ಪುಸ್ತಕ ಮಾಲೆ) ಕನ್ನಡ ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಗೆ ಮುನ್ನುಡಿ ಬರೆದ ಹಾಗೂ ಕೃತಿಯ ಪ್ರಧಾನ ಸಂಪಾದಕರೂ ಆದ ರಂ.ಶ್ರೀ ಮುಗಳಿ ‘ ರಾಜಶೇಖರ ವಿಳಾಸದಂತಹ ಕ್ಲಿಷ್ಟಕರ ಹಾಗೂ ಪ್ರೌಢ ಕಾವ್ಯವನ್ನು ಅರ್ಥ ಮಾಡಿಕೊಂಡು ಸುಲಭ ಕನ್ನಡದಲ್ಲಿ ವಿವರಿಸಿದ್ದಾರೆ’ ಎಂದು ಲೇಖಕರ ಶ್ರಮವನ್ನು ಪ್ರಶಂಸಿಸಿದ್ದಾರೆ.
©2024 Book Brahma Private Limited.