ಚಿಂತಕ ಎಸ್. ಜಿ. ನರಸಿಂಹಾಚಾರ್ ಅವರು ರಚಿಸಿದ ಶ್ರೀ ಕೃಷ್ಣ ರಾಜಸೂಕ್ತಿ ಮುಕ್ತಾವಳಿ ಗ್ರಂಥದೊಳ್ ವತ್ಸರಾಜನ ಕಥೆ (ಪ್ರಥಮ ಭಾಗ, ಅಧ್ಯಾಯ 1ರಿಂದ 20) ಒಳಗೊಂಡ ಕೃತಿ ಇದು. ಕೃತಿಯಲ್ಲಿ ವತ್ಸರಾಜನ ದೇಶದ ವರ್ಣನೆ, ಯೌಗಂಧರಾಯಣನೆಂಬ ಮಂತ್ರಿ, ಕೌಶಾಂಬಿನಗರದ ವಿಕ್ರಮಬಾಹುರಾಯ, ರತ್ನಾವಳಿಯ ಮದುವೆ ಪ್ರಸ್ತಾವ, ಸಮುದ್ರದಲ್ಲಿ ಹಡಗು ಅಪಘಾತದಿಂದ ರತ್ನಾವಳಿ ಪಾರು, ಸಾಗರಿಕೆಯನ್ನು ಸೆರೆಮನೆಯಲ್ಲಿರಿಸಿದ ವೃತ್ತಾಂತ, ರತ್ನಾವಳಿಯ ಬಂಧ ವಿಮೋಚನೆ, ಸಿಂಹಳ ದೇಶಕ್ಕೆ ವತ್ಸರಾಜನ ಆಗಮನ ಹಾಗೂ ರತ್ನಾವಳಿಯ ಪಾಣಿಗ್ರಹಣ ಹೀಗೆ ವಿವಿಧ ಅಧ್ಯಾಯಗಳಡಿ ವತ್ಸರಾಜನ ಕಥೆಯನ್ನು 20 ಅಧ್ಯಾಯಗಳವರೆಗೆ ವಿವರಿಸಿದ ಕಥಾಕೃತಿ ಇದು.
©2024 Book Brahma Private Limited.