ಪ್ರಾಚೀನ ಸಾಹಿತ್ಯ ಸಂದರ್ಭದ ಮೇರು ಕವಿಗಳಾದ ಪಂಪ, ರನ್ನ, ದುರ್ಗಸಿಂಹ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರ ಜೀವನ, ಕೃತಿಗಳು, ಅವರ ಚಾರಿತ್ರಿಕ ನೆಲೆ, ಸಾಮಾಜಿಕ ಪ್ರಜ್ಞೆ, ಕೃತಿಗಳ ವಸ್ತುವಿಮರ್ಶೆ, ಬಸವಾದಿ ಶರಣರ ಕವಿತ್ವ ಮತ್ತು ವಿಚಾರವಾದ, ದಾಸರ ಕೀರ್ತನೆಗಳ ವಿವೇಚನೆ, ಸರ್ವಜ್ಞ ಕವಿಯ ಕರ್ತೃತ್ವ ವೈವಿಧ್ಯತೆ ಹೀಗೆ ಹಲವು ಕಾವ್ಯಘಟ್ಟದ ಸಮಗ್ರ ಒಳನೋಟವನ್ನು ಈ ಕೃತಿಯೂ ಕಟ್ಟಿಕೊಟ್ಟಿದೆ. ಕನ್ನಡದ ಪ್ರಾಚೀನ ಕಾವ್ಯಗಳ ಬಗ್ಗೆ ವಿವಿಧ ಕಾಲ ಗಟ್ಟಗಳಲ್ಲಿ ಡಾ. ರಾಗೌರವರು ಬರೆದ ಚಿಂತನಾತ್ಮಕ ಲೇಖನಗಳನ್ನು ಸಂಗ್ರಹಿಸಿ ಈ ಕೃತಿಯಲ್ಲಿ ಕೊಡಲಾಗಿದೆ.
©2024 Book Brahma Private Limited.