‘ಪ್ರಾಣಿ ಪರಿಸರ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರಾಣಿ ಪ್ರಪಂಚ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿ 13 ಅಧ್ಯಾಯಗಳಿದ್ದು, ಪ್ರಾಣಿ ವಿಕಾಸ, ಜೀವೋತ್ಪತ್ತಿ, ಶರೀರ ರಚನೆ, ಪ್ರಾಣಿ ಮತ್ತು ಪರಿಸರ, ಸಹಜೀವನ, ಚಲನವನ, ಸಾಮಾಜಿಕ ಸಂಘಟನೆ, ನಾದ ಲೋಲರು, ನಾಮಕರಣ, ಕುಟುಂಬಯೋಜನೆ, ಗಂಡು ಹೆಣ್ಣು, ಮರುಬೆಳವಣಿಗೆ, ಸರ್ವವ್ಯಾಪಿಗಳನ್ನು ಒಳಗೊಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಹಿಂದೆಂದೂ ಇಲ್ಲದಷ್ಟು ಇಂದು ಮಾನವನು ಸಂಕುಚಿತ ದೃಷ್ಟಿಯವ ಮತ್ತು ಸ್ವಾರ್ಥಿಯಾಗುತ್ತಿದ್ದಾನೆ. ಅಂತೆಯೇ, ತನ್ನ ಸಂತತಿಯಿಂದ ಜಗತ್ತೆಲ್ಲವನ್ನು ಅನ್ನ ಬಟ್ಟೆಗಾಗಿ ಪರಿಸರವನ್ನೆಲ್ಲ ಕಲುಷಿತವನ್ನಾಗಿ ಮಾಡಿದ್ದಾನೆ. ಅವನ ಯಂತ್ರಗಳು, ವಾಹನಗಳು, ಕಾರ್ಖಾನೆ ಗಳು ಎಡಬಿಡದ ಹೊಗೆ ಕಾರುತ್ತಿದ್ದರೆ, ಆತನ ಧಾನ್ಯ, ಹಣ್ಣು-ಹಂಪಲಗಳ ರಕ್ಷಣೆಗಾಗಿ ಅತ್ಯಂತ ವಿಷಕಾರಿ ರಸಾಯನಗಳು ಭೂಜಲಗಳಲ್ಲಿ ಹರಡುತ್ತಿವೆ. ತೊಗಲು, ಮಾಂಸಗಳಿಗಾಗಿ ಕೊಂದು ನಿರ್ನಾಮ ಮಾಡುತ್ತಿರುವ ಪ್ರಾಣಿಗಳಿಗಂತೂ ಲೆಕ್ಕವಿಲ್ಲ. ಇದೇ ಸ್ಥಿತಿ ಮುಂದುವರಿದರೆ ನಮ್ಮ ಪರಿಸರದ ಪ್ರಾಣಿಗಳು ಹೆಚ್ಚು ಕಾಲ ನಮ್ಮೊಂದಿಗೆ ಇರಲಾರವು ಎಂದು ವಿಜ್ಞಾನಿಗಳು ತಳಮಳಗೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.