ಜೀವಂತ ಪಳೆಯುಳಿಕೆಗಳ ಕುರಿತು ಲಲಿತ ಕೆ.ಪಿ ಅವರ ಕೃತಿಯಾಗಿದೆ. ಸ್ಥಳನಾಮಗಳು ಜೀವಂತ ಪಳೆಯುಳಿಕೆಗಳು", ಹೌದು. ವಿದ್ವಾಂಸರ ಈ ಮಾತು ಅಕ್ಷರಶಃ ನಿಜವೆಂಬ ಅರಿವು ಸ್ಥಳನಾಮಗಳ ಕುರಿತ ಅಧ್ಯಯನಕ್ಕೆ ತೊಡಗಿದವರೆಲ್ಲರಿಗೂ ಬಹಳ ಬೇಗ ಅನುಭವಕ್ಕೆ ಬರುವಂಥದ್ದು. ಒಂದು ಪ್ರದೇಶದ ಸಾಂಸ್ಕೃತಿಕ, ಭೌತಿಕ, ಐತಿಹಾಸಿಕ, ಇವೇ ಮೊದಲಾದ ವಸ್ತುನಿಷ್ಟ ಮೌಲ್ಯಗಳ ಜಾನಾಂಗಿಕ ಇವೇ ಹಿನ್ನೆಲೆಯಿಂದ ಆವಿರ್ಭವಿಸುವ ಪುರಾತನ ಸ್ಥಳನಾಮಗಳು ಆಯಾಯ ಪ್ರದೇಶಗಳ ಕುರಿತ ಮಾಹಿತಿಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡಿಡುತ್ತವೆ. ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆದು ಮೂಲ ಬೇರನ್ನು ತಲುಪಿದಾಗ ಅಂದರೆ ತಲಸ್ಪರ್ಷಿಯಾದ ಸಂಶೋಧನಾ ಕಾರ್ಯ ನಡೆದಾಗ ಅಲ್ಲಿ ಗೋಚರಿಸುವ ಸತ್ಯಾಸತ್ಯತೆಗಳು ಸಂಶೋಧಕರನ್ನು ಮೂಗಿನ ಮೇಲೆ ಬೆರಳನ್ನಿಡುವಂತೆ ಮಾಡುತ್ತದೆ ಎಂದು ಲೇಖಕಿ ಕೃತಿಯ ಕುರಿತು ತಿಳಿಸಿದ್ದಾರೆ.
©2024 Book Brahma Private Limited.