ಮಹಿಳೆ ಮತ್ತು ಮಾಧ್ಯಮ ಒಂದು ಅವಲೋಕನ

Author : ಅರುಣಕುಮಾರ ಹಬ್ಬು

Pages 203

₹ 215.00




Year of Publication: 2016
Published by: ಆದಿತ್ಯ ಪಬ್ಲಿಕೇಶನ್
Address: ಟಿ ವಿ ಟವರ್ ಬಳಿ ಬೆಳಗಾವಿ

Synopsys

ಮಹಿಳೆ ಮತ್ತು ಮಾಧ್ಯಮ ಒಂದು ಅವಲೋಕನ ಅರುಣ ಕುಮಾರ ಹಬ್ಬು ಅವರ ಕೃತಿಯಾಗಿದೆ. ಮಹಿಳೆ ಮತ್ತು ಮಾಧ್ಯಮ ಒಂದು ಅವಲೋಕನ ಎಂಬ ಪುಸ್ತಕ ಬರೆದಿದ್ದು ನಮ್ಮ ಪ್ರಕಾಶನದ ಮೂಲಕ ಪ್ರಕಟಿಸಲಾಗುತ್ತಿದೆ. ಇದು ಪ್ರತಿಕಾರಂಗದಲ್ಲಿ ಒಂದು ಹೊಸ ಪ್ರಯತ್ನ. ಇತ್ತೀಚಿನ ದಿನಗಳಲ್ಲಿ ಮಹಿಳಾ ಪತ್ರಿಕೋದ್ಯಮ ಪ್ರಚಲಿತವಾಗುತ್ತಿರುವ ಸಂದರ್ಭದಲ್ಲಿ ಇದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತವಾದೀತು ಎನ್ನುವುದು ನಮ್ಮ ಆಶಯ . ಜತೆಗೆ ಪತ್ರಿಕೋದ್ಯಮದಲ್ಲಿರುವ ವೃತ್ತಿನಿರತರಿಗೂ ಇದು ಉತ್ತಮ ಮಾಹಿತಿ ನೀಡುತ್ತದೆ. ಈ ಪುಸ್ತಕ ಪತ್ರಿಕಾರಂಗದಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಪ್ರಕಾಶಕರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಅರುಣಕುಮಾರ ಹಬ್ಬು
(04 May 1949)

ಅರುಣಕುಮಾರ ಹಬ್ಬು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು. ಪ್ರೌಢ ಶಿಕ್ಷಣವನ್ನು ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿ, ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರದಲ್ಲಿ ಪೂರ್ಣಗೊಳಿಸಿದರು. ಉಪನ್ಯಾಸಕನಾಗಿ ,ವರದಿಗಾರನಾಗಿ,ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ‘ದೃಷ್ಟಿ-ಸೃಷ್ಟಿ’ 64 ಲೇಖನಗಳ ಗ್ರಂಥ ಪ್ರಕಟನೆ, ನೀವು ಉತ್ತಮ ಸಂದರ್ಶಕರಾಗಬಯಸುವಿರಾ? , ಸುದ್ದಿ: ಜಗದಗಲ ಮುಗಿಲಗಲ, ವೈವಿಧ್ಯ ಕಲಾನಿಧಿ ಗೋಪಾಲಕೃಷ್ಣ ನಾಯಕರು: ಜೀವನ ಚರಿತ್ರೆ, ಗೌತಮ ಬುದ್ಧರ ತ್ರಿಪಿಟಕ ಅಂಗುತ್ತರ ನಿಕಾಯದ ಕನ್ನಡಾನುವಾದ ಮಹಿಳೆ ಮತ್ತು ಮಾಧ್ಯಮ ...

READ MORE

Related Books