‘ಸುರಂಗದ ಕತ್ತಲೆ’ ಕೃತಿಯು ಪದ್ಮರಾಜ ದಂಡಾವತಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳು ಇದಾಗಿದ್ದು, ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಶಿಕ್ಷಣದ ಕುರಿತ ವಿಚಾರಗಳನ್ನು ಇಲ್ಲಿ ಕಾಣಬಹುದು. ಪತ್ರಕರ್ತನಲ್ಲಿರುವ ಖಚಿತ ನಿಲುವು ಪುಸ್ತಕದ ಬರಹಗಳಲ್ಲಿ ಕಾಣುವ ಗುಣ. ಓದುಗನ ಮೇಲೆ ವಿಚಾರ 'ಹೇರದ', ವಿಷಯ 'ಹೇಳುವ' ವಿನ್ಯಾಸದಲ್ಲಿವೆ ಇಲ್ಲಿನ ಬರವಣಿಗೆಗಳು. ಇದನ್ನು ವಿಶೇಷವಾಗಿ, ರಾಜಕೀಯ ಸಂಸ್ಕೃತಿಯ ಆಸಕ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮಗಾಗೇ ಬರೆದ ಕೃತಿಯೆಂಬಂತೆ ಓದಿಕೊಳ್ಳಬಹುದು.
©2025 Book Brahma Private Limited.