ಡಾ. ಸಿದ್ಧಲಿಂಗರೆಡ್ಡಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ರೊಟ್ನಡಗಿ ಗ್ರಾಮದವರು. ಪ್ರಸ್ತುತ ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವೀಧರರು. 2010 ರಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಿಂದ ( ಪ್ರಥಮ ಶ್ರೇಣಿ) ಎಂ.ಫಿಲ್. ಪದವೀಧರರು. Impact of MGNREGA: An Economic Analysis in Dharwad District of Karnataka" ಮಹಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವೀಧರರು. ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ICSSR), ನವ ದೆಹಲಿಯಿಂದ ಕೊಡಮಾಡುವ ರಾಷ್ಟೀಯ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು. ರಾಜ್ಯ, ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಸೆಮಿನಾರ್ ಹಾಗೂ ಸಮ್ಮೇಳನಗಳಲ್ಲಿಪ್ರಬಂಧಗಳನ್ನು ಮಂಡಿಸಿದ್ದಾರೆ. ಸುಮಾರು 25ಕ್ಕೂ ಅಧಿಕ ಇವರ ಸಂಶೋಧನಾ ಪ್ರಬಂಧಗಳು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಕೃತಿಗಳು: ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ, (ಇಂಗ್ಲಿಷ್ ಕೃತಿಗಳು) Monetary Economics, Managerial Economics ಮತ್ತು Public Economics