‘ಛಂದೋಗತಿ’ ಕೃತಿಯು ಸೇಡಿಯಾಪು ಕೃಷ್ಣಭಟ್ಟರ ಛಂದಸ್ತತ್ವಗಳ ಹಾಗೂ ಗತಿಭೇದಗಳ ವಿವೇಚನೆ ಮತ್ತು ವಿವೃತಿಯಾಗಿದೆ. ಲಯವೆಂದರೆ, ಯಾವುದೊಂದು ರಚನೆಯ ಅವಯವಗಳ ಅನ್ಯೋನ್ಯ ಕಾಲಸಮತ್ವ. ಆ ಸಮತ್ವವೇ ತಾಳದ ಆಧಾರ, ಆದುದರಿಂದ ಅದು ತಾಳದ ಅವಿಭಾಜ್ಯ ಅಂಗ. ಯಾವುದಾದರೊಂದು ಛಂದೋರಚನೆಯ ಅವಯವಗಳೊಳಗೆ ಕಾಲಸಮತ್ವವಿಲ್ಲದಿದ್ದರೆ ಅಲ್ಲಿ ತಾಳವಿಲ್ಲ : ಸಮತಾಳಕ್ಕೆ ಒಳಪಡದಿರುವ ರಚನೆಗಳಲ್ಲಿ ಲಯವಿಲ್ಲ. ಆದುದರಿಂದ ಲಯನ್ವಿತವಾದ ಛಂದೋರಚನೆ ಎಂದರೂ ತಾಳಬದ್ದವಾದ ಛಂದೋರಚನೆ ಅಂದರೂ ಅರ್ಥ ಬೇರಾಗುವಂತಿಲ್ಲ ಎಂಬುದನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಈ ಕೃತಿಯು ಒಂಭತ್ತು ಪರಿಚ್ಛೇದಗಳನ್ನು ಒಳಗೊಂಡಿದ್ದು, ಪರಿಚ್ಛೇದ ಒಂದರಲ್ಲಿ ಲಯ ಎಂಬ ಸಜ್ಞೆಯ ಅರ್ಥಸ್ವರೂಪ : ಶಬ್ಧಕೋಶದಲ್ಲಿ ನಾಟ್ಯಶಾಸ್ತ್ರದಲ್ಲಿ, ಶಿಕ್ಷಾಶಾಸ್ತ್ರದಲ್ಲಿ ಶಾಸ್ತ್ರೇತರ ಗ್ರಂಥದಲ್ಲಿ, ಸಂಗೀತಸಂಪ್ರದಾಯದಲ್ಲಿ. ಪರಿಚ್ಛೇದ ಎರಡರಲ್ಲಿ : ಛಂದಶಾಸ್ತ್ರ ಗ್ರಂಥಗಳಲ್ಲಿ ಪ್ರಯುಕ್ತವಾಗಿರುವಂತೆ ಲಯದ ಅರ್ಥ ಮತ್ತು ವ್ಯಾಪ್ತಿ, ಪರಚ್ಛೇಧ ಮೂರು : ಗತಿ ಮತ್ತು ಲಯ, ಪರಿಚ್ಚೇದ ನಾಲ್ಕು : ಛಂದಸ್ ಮತ್ತು ಗತಿ, ಪರಿಚ್ಛೇದ ಐದು : ಛಂದಪದಾರ್ಥ ವಿವೇಚನೆ, ಪರಿಚ್ಛೇದ ಆರು : ಛಂದೋಗತಿ ಭೇದಗಳು - ಆವರ್ತಗತಿಗಳ ವಿವೃತಿ, ಪರಿಚ್ಛೇದ ಎಂಟು :ವಿಷಮ ಗತಿ ಬಂಧಗಳ ದ್ವೈವಿಧ್ಯ - ವಿಷಮಗತಿವೃತ್ತಗಳು, ಪರಿಚ್ಛೇದ ಒಂಭತ್ತು : ಅಕ್ಷರ ಜಾತಿಗಳು : ಅನುಷ್ಟುಪ್ ಶೋಕದ ವಿಕಾಸ, -ಉಪಜಾತಿಗಳ ಉತ್ಪತ್ತಿ, ವೈದಿಕ ಛಂದಃಸ್ವಭಾವ ದಿಗ್ದರ್ಶನ ಇವೆಲ್ಲವುಗಳನ್ನು ಒಳಗೊಂಡಿದೆ.
©2025 Book Brahma Private Limited.