ಲೇಖಕ ಡಾ. ಕುಮಾರಚಲ್ಯ ಅವರು ರಚಿಸಿದ ಛಂದಸ್ಸಿನ ವಿವರಗಳಿರುವ ಕೃತಿ-ಸರಳ ಛಂದಸ್ಸು. ಛಂದಸ್ಸುಗಳು ಶಬ್ದ ಹಾಗೂ ಪದಗಳ ಅಲಂಕಾರಗಳನ್ನು, ಶಿಸ್ತುಬದ್ಧತೆಯನ್ನು ಹೆಚ್ಚಿಸುತ್ತವೆ. ಛಂದಸ್ಸುಗಳಿಲ್ಲದ ಸಾಹಿತ್ಯವು ಬಿಗಿಬಂಧವಿಲ್ಲದ ನಿರಸ ವಾಕ್ಯಗಳಂತೆ. ಗುರು-ಲಘು ಗಣಗಳು ಸಾಹಿತ್ಯದ ಭಾವನೆಯ ಸಮರ್ಥವಾಗಿ ಹಿಡಿದಿಡುತ್ತವೆ. ಹೀಗಾಗಿ, ಛಂದಸ್ಸು ಎಂದರೆ ಪದಗಳನ್ನು ರಚಿಸುವ ಕಲೆ ಎಂದೂ ಹೇಳಲಾಗುತ್ತದೆ. ಈ ಛಂದಸ್ಸುಗಳಲ್ಲಿ ಪ್ರಾಸ, ಯತಿ ಹಾಗೂ ಗಣ ಎಂದು ಮೂರು ವಿಭಾಗಗಳಿವೆ. ಪ್ರಾಸಗಳಲ್ಲಿ ಆದಿ, ಮಧ್ಯ ಹಾಗೂ ಅಂತ್ಯ ಪ್ರಾಸಗಳಿರುತ್ತವೆ. ಕಾವ್ಯ ವಾಚನದಲ್ಲಿ ಆರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳುವ ತಾನವನ್ನು ಯತಿ ಎಂದು ಹೇಳಿದರೆ, ಗಣದಲ್ಲಿ, ಹ್ರಸ್ವ- ದೀರ್ಘಾಕ್ಷರಗಳನ್ನು ಕಟ್ಟುವ ಕ್ರಿಯೆ ಇರುತ್ತದೆ. ಇದನ್ನು ಮಾತ್ರಾಗಣ ಎಂದೂ ಕರೆಯಲಾಗುತ್ತದೆ. ಗುರು-ಲಘು, ಮಾತ್ರೆ, ಪ್ರಸ್ತಾರ ಎಂದೂ ವಿಂಗಡಿಸಿ, ಗುರುತಿಸಲಾಗುತ್ತದೆ. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.