ಲೇಖಕ ಪ್ರೊ. ನೀ. ಗಿರಿಗೌಡ ಅವರ ರಚಿಸಿದ ಕೃತಿ-ಕನ್ನಡ ಛಂದಸ್ಸಿನ ಪ್ರವೇಶಿಕೆ. ಕನ್ನಡ ವ್ಯಾಕರಣ ಕುರಿತಂತೆ ಈಗಾಗಲೇ ಕೃತಿ ಬರೆದಿರುವ ಲೇಖಕರು ಈಗ ಕನ್ನಡ ಛಂದಸ್ಸಿನ ಕುರಿತು ವಿಸ್ತೃತ ಮಾಹಿತಿ ನೀಡಿದ್ದಾರೆ. ಕನ್ನಡ ಛಂದಸ್ಸಿನ ಪ್ರಕಾರಗಳು, ವೈವಿಧ್ಯತೆ, ಅವುಗಳ ಸ್ವರೂಪ, ವಾಕ್ಯಗಳಲ್ಲಿ ಬಳಕೆಯಾಗುವ ರೀತಿ ಎಲ್ಲವನ್ನೂ ಉದಾಹರಣೆ ಸಮೇತವಾಗಿ ವಿವರಿಸಿರುವ ಕೃತಿ ಇದು. ಕನ್ನಡ ಛಂದಸ್ಸುಗಳನ್ನು ಅರಿತುಕೊಳ್ಳುವ ಆಸಕ್ತ ವಿದ್ಯಾರ್ಥಿಗಳಿಗೆ ಈ ಕೃತಿಯೊಂದು ಉತ್ತಮ ಪ್ರವೇಶವನ್ನು ನೀಡುತ್ತದೆ.
©2025 Book Brahma Private Limited.