'ಜರ್ಮನ್ ರೈತ ಯುದ್ಧ' ನಾ. ದಿವಾಕರ ಅವರ ಅನುವಾದಿತ ಕೃತಿಯಾಗಿದೆ. ಕಾರ್ಮಿಕ-ರೈತ ವರ್ಗ ಸಖ್ಯತೆಯ ಮೂಲಕ ಪಾಳೆಯಗಾರಿಕೆ-ಬಂಡವಾಳಶಾಹಿ ಸಖ್ಯತೆಯ ವಿರುದ್ಧ ಜಂಟಿಯೇಟು ಕೊಡುವ ಅಗತ್ಯ - ಇಂದಿನ ರೈತ ಚಳುವಳಿ ಜರ್ಮನ್ ರೈತ ಯುದ್ಧದಿಂದ ಕಲಿಯಬೇಕಾದ ಪಾಠಗಳು. ಈ ಅನುವಾದವು Www.marxists.org ವೆಬ್ ಸೈಟಿನಲ್ಲಿರುವ Marxists Internet Archive ನಲ್ಲಿರುವ ಏಂಗೆಲ್ಸ್ ಕೃತಿಯ ಇಂಗ್ಲಿಷ್ ಅನುವಾದದ ಮೇಲೆ ಆಧರಿಸಿದೆ. ಇದನ್ನು ಮೂಲ ಜರ್ಮನ್‌ನಿಂದ ಮೊಯಿಸಾಯೆ ಜೆ. ಒಲ್ಲಿನ್ ಇಂಗ್ಲಿಷ್‌ಗೆ ಅನುವಾದಿಸಿ, 1926ರಲ್ಲಿ ಇಂಟರ್‌ನ್ಯಾಷಶನಲ್ ಪಬ್ಲಿಷರ್ ಪ್ರಕಟಿಸಿದ್ದರು. ಇಲ್ಲಿ ಕೊಡಲಾಗಿರುವ ಏಂಗೆಲ್ ಅವರ ಎರಡು ಪ್ರವೇಶಿಕೆಗಳು (1870, 1874), ಏಳು ಅಧ್ಯಾಯಗಳು ಮತ್ತು ರೈತರ ಹನ್ನೆರಡು ಕಟ್ಟಳೆಗಳು ಏಂಗೆಲ್ಸ್ ಅವರ ಮೂಲ ಕೃತಿಯಲ್ಲಿ ಇದ್ದವು. ಟಿಪ್ಪಣಿಗಳು 1926ರಲ್ಲಿ ಪ್ರಕಟವಾದ ಮೊದಲ ರಶ್ಯನ್ ಆವೃತ್ತಿಯಿಂದ ತೆಗೆದುಕೊಂಡವು. ಇದೇ ಆವೃತ್ತಿಯಲ್ಲಿ ಪ್ರಕಟವಾದ ರಿಯಾಝನೊವ ಅವರ ಮುನ್ನುಡಿ ರೈತ ಯುದ್ಧದ 400 ವರ್ಷಗಳ ಮತ್ತು ಏಂಗೆಲ್ಸ್ ಅವರ ವಿಶ್ಲೇಷಣೆ ಪ್ರಕಟಣೆಯ 125 ವರ್ಷಗಳ ನಂತರ ಕೃತಿಯ ಪ್ರಸ್ತುತತೆ, ಮಹತ್ವ ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. ಎಂದು ನಾ. ದಿವಾಕರ ಅವರು ಪುಸ್ತಕದ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.