ಲೇಖಕ ಮಾಧವ ಐತಾಳ್ ಅವರ ಅನುವಾದ ಲೇಖನ ಕೃತಿ ʻವಿಜಯದ ಹಾದಿʼ. ಓ.ಪಿ. ಶರ್ಮಾ ಅವರು ಮೂಲ ಕೃತಿಯ ಲೇಖಕರಾಗಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ, “ವಿಜಯದ ಜೀವನವೆಂಬುದು ಏಳು-ಬೀಳಿನ ಹಾದಿ. ಗೆದ್ದಾಗ ಖುಷಿ ಪಡುತ್ತೇವೆ, ಸೋತಾಗ ದುಃಖಿಸುತ್ತೇವೆ. ಹಲವು ಅಡೆತಡೆಗಳಿಂದಾಗಿ ಜೀವನ ಕಷ್ಟ ಎನಿಸಿದಾಗ ಕೈ ಹಿಡಿದು ನಡೆಸುವುದು, ಅವನ್ನೆಲ್ಲ ಎದುರಿಸಿ ವಿಜಯಶಾಲಿಯಾಗುವುದು ಹೇಗೆ ಎಂಬುದನ್ನು ತಿಳಿಸಿಕೊಡುವುದು ಈ ಪುಸ್ತಕದ ಉದ್ದೇಶ. ಪ್ರತಿದಿನವೂ ಹೊಸ ಆರಂಭ. ಅದನ್ನು ಆಶಾಭಾವನೆಯಿಂದ ಹಾಗೂ ಉತ್ಸಾಹದಿಂದ ಎದುರುಗೊಳ್ಳಬೇಕು. ನಿನ್ನೆ ಎಂಬುದು ಭೂತಕಾಲ. ಪರಿಸ್ಥಿತಿ ಎಷ್ಟೇ ಹದಗೆಟ್ಟಿರಲಿ, ಸೂಕ್ತ ಕಾರ್ಯ ಚಿಂತನೆ ಮೂಲಕ ಅದನ್ನು ಸರಿಪಡಿಸಬಹುದು. ಸಾಮಾಜಿಕ, ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸುವುದು ಹೇಗೆ, ಅವುಗಳನ್ನು ನಿಭಾಯಿಸಿ ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಈ ಹೊತ್ತಗೆ ವಿವರಿಸುತ್ತದೆ. ಅಬ್ರಹಾಂ ಲಿಂಕನ್ ಅವರಿಂದ ಹಿಡಿದು ಮುನ್ಷಿ ಪ್ರೇಮ್ ಚಂದ್, ಗಾಂಧಿಯಿಂದ ಹಿಡಿದು ಚರ್ಚಿಲ್, ನೆಪೋಲಿಯನ್‌ನಿಂದ ಹಿಡಿದು ಮೇರಿ ಕ್ಯೂರಿಯವರೆಗೆ ಹಲವು ಉದಾತ್ತ ಜೀವನಗಳ ದೃಷ್ಟಾಂತಗಳು ಇಲ್ಲಿವೆ” ಎಂದು ಹೇಳಲಾಗಿದೆ. ತಪ್ಪುಗಳ ಬಗ್ಗೆ ಹೆದರಿಕೆ ಬೇಡ, ಭಾವನೆಗಳ ನಿಯಂತ್ರಣ ಹೇಗೆ?, ಕೆಲಸವನ್ನು ಪ್ರೀತಿಸುವುದು, ಟೀಕೆಗಳಿಗೆ ಎದೆಗುಂದದಿರಿ, ಸೋಲನ್ನು ಜಯವಾಗಿ ಪರಿವರ್ತಿಸಿ, ಕಲ್ಪನೆಯ ಪವಾಡ ಶಕ್ತಿ, ಸೇರಿ 31 ಲೇಖನಗಳಿವೆ.
©2024 Book Brahma Private Limited.