ಪ್ರೇಮದ ಆಖ್ಯಾನ ಚಿದಂಬರ ನರೇಂದ್ರ ಅವರ ಅನುವಾದಿತ ಕೃತಿಯಾಗಿದೆ. ಇಬ್ಬರು ವ್ಯಕ್ತಿಗಳು ತಮ್ಮ ಅಸ್ತಿತ್ವದ ಕೇಂದ್ರದಿಂದ ಪರಸ್ಪರ ಸಂಹವನ ಸಾಧಿಸಿದಾಗ, ತಮ್ಮನ್ನು ತಾವು ಅನುಭವಿಸಿದಾಗ ಮಾತ್ರ, ಅವರಿಬ್ಬರ ನಡುವೆ ಪ್ರೀತಿ ಸಾಧ್ಯ. ಕೇವಲ ಈ "ಕೇಂದ್ರ - ಅನುಭವದಲ್ಲಿ” ಮಾತ್ರ ಅಡಗಿದೆ ಮನುಷ್ಯ ವಾಸ್ತವ, ಇಲ್ಲಿ ಮಾತ್ರ ಇದೆ ಜೀವಂತಿಕೆ, ಇಲ್ಲಿ ಮಾತ್ರ ಇದೆ ಪ್ರೀತಿಯ ನೆಲೆ. ಹೀಗೆ ಅನುಭವಕ್ಕೆ ಬಂದ ಪ್ರೀತಿ, ನಿರಂತರ ಸವಾಲಿನ ರೀತಿಯದು; ಇದು ವಿಶ್ರಾಂತಿಯ ತಾಣವಲ್ಲ, ಇದು ಚಲನೆಯ, ಬೆಳವಣಿಗೆಯ, ಸಹಯೋಗದ ರೀತಿಯದು. ಈ ರೀತಿಯ ಪ್ರೀತಿಯಲ್ಲಿನ ಸಾಮರಸ್ಯ ಅಥವಾ ಸಂಘರ್ಷ, ಖುಶಿ ಅಥವಾ ದುಗುಡ, ಇಬ್ಬರು ವ್ಯಕ್ತಿಗಳು ತಮ್ಮ ಅಸ್ತಿತ್ವದ ತಿರುಳಿನಿಂದ ಪರಸ್ಪರರನ್ನ ಅನುಭವಿಸುತ್ತಿದ್ದಾರೆ ಮತ್ತು ಅವರು ತಮ್ಮಿಂದ ತಾವು ಪಲಾಯನ ಮಾಡದೇ, ತಮ್ಮೊಳಗೆ ತಾವು ಒಂದಾಗುವುದರ ಮೂಲಕ ಪರಸ್ಪರರಲ್ಲೂ ಒಂದಾಗಿದ್ದಾರೆ ಎನ್ನುವ ನಿಜಕ್ಕೆ ಸೆಕಂಡರಿಯಾದದ್ದು. ಪ್ರೀತಿಯ ಉಪಸ್ಥಿತಿಗೆ ಇರುವ ಸಾಕ್ಷ್ಯ ಒಂದೇ : ಸಂಬಂಧದಲ್ಲಿ ಕಂಡುಬರುವ ಆಳ ಮತ್ತು ಅಗಲ, ಹಾಗೂ ಪ್ರತಿ ಸಂಬಂಧಿತ ವ್ಯಕ್ತಿಗಳಲ್ಲಿ ನಮಗೆ ಕಂಡುಬರುವ ಅಪಾರ ಜೀವಂತಿಕೆ ಮತ್ತು ಸಾಮರ್ಥ್ಯ; ಪ್ರೀತಿ ಗುರುತಿಸಲ್ಪಡುವುದು ಈ ಫಲದ ಕಾರಣವಾಗಿದೆ ಎಂದು ಕೃತಿಯ ಮೂಲ ಲೇಖಕ ಎರಿಕ್ ಫ್ರಾಂ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.