ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ.
ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ, ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ಮಿತ್ರರು (2010) ರಲ್ಲಿ ಪ್ರಕಟಿಸಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. “ಅರಳದ ಮೊಗ್ಗುಗಳು' ಎಂಬ ಸೀರಿಯಲ್ ದೂರದರ್ಶನದಲ್ಲಿ (ಮಕ್ಕಳ ರಿಮ್ಯಾಂಡ್ ಹೋಂ ಕೇಸ್ ಹಿಸ್ಟರಿಗಳ ಕಥಾ ರೂಪ). ದೂರದರ್ಶನ ಧಾರವಾಹಿಗೆ ಚಿತ್ರಕತೆ, ಸಂಭಾಷಣೆ, ಕರಿಮಾಯಿ, ಲಕ್ಷಪತಿರಾಜನ ಕತೆ, ವೈಶಾಖ ಮುಂತಾದ ನಾಟಕಗಳಲ್ಲಿ ಮುಖ್ಯಪಾತ್ರ, 'ಕನ್ನಡ ಮಹಿಳೆ' ಡಾಟ್‌ಕಾಮ್ ವೆಬ್‌ಸೆಟ್. ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರಗಳು (14 ವರ್ಷ), ಮಕ್ಕಳಿಗಾಗಿ ವಾರಾಂತ್ಯ ರಂಗಶಾಲೆ, ಅಚಲ ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.