ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ಬೆಂಕಿಸುಳಿ(ಕಾದಂಬರಿ) ಕೃತಿಗಳನ್ನು ಪ್ರಕಟಿಸಿದ್ದಾರೆ.