ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ.