ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ. ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು.