About the Author

ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ಸಾಂಸ್ಕೃತಿಕಯ ಹುಡುಕಾಟದಲ್ಲಿ "ಆದಿಮ" ದೊಂದಿಗೆ ಸೇರಿಕೊಂಡು ಕೆ. ರಾಮಯ್ಯನವರ ಜೊತೆಗೂಡಿ ಹೊಸ ಶಿಕ್ಷಣ ಮತ್ತು ಹೊಸ ಕಲಿಕೆಯರಿಮೆಯ ಕುರಿತಾಗಿ ಚಿಂತನೆಗಳನ್ನು, ಸಂವಾದಗಳನ್ನು,ಅಧ್ಯಯನಗಳನ್ನು ನಡೆಸಿದ್ದಾರೆ. ಎರಡು ವರ್ಷಗಳ ಕಾಲ ಕೆ. ರಾಮಯ್ಯ, ಸಿ.ಜಿ.ಲಕ್ಷ್ಮೀಪತಿ ಅವರ ಜೊತೆಗೂಡಿ "ಆದಿಮ ಲಿವಿಂಗ್ ಟೈಮ್ಸ್" ಪತ್ರಿಕೆಯನ್ನು ತರುತ್ತಿದ್ದರು. ಕಳೆದ 6 ವರ್ಷಗಳಿಂದ "ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ಸಂಘಟನೆಯ ಸಂಚಾಲಕರಾಗಿದ್ದಾರೆ. ಇದರ ಜೊತೆ ಜೊತೆಗೆ ಕಳೆದ ಆರು ವರ್ಷಗಳಿಂದ "ದಲಿತರು ಮತ್ತು ಉದ್ಯಮಶೀಲತೆ" ಯ ಕುರಿತಾಗಿ, ದಲಿತರ ಸ್ವಾವಲಂಬನೆಯ ಕುರಿತಾಗಿ ಅನೇಕ ಕಮ್ಮಟ, ಸಂವಾದ, ಶಿಬಿರಗಳನ್ನು ನಡೆಸುತ್ತಿದ್ದಾರೆ. "ಪರ್ಯಾಯ ಆರ್ಥಿಕ ಸಾಧ್ಯತೆಗಳು" ಕುರಿತು ಸಂವಾದ, ಅಧ್ಯಯನ ನಡೆಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಶ್ರೀಪಾದ ಭಟ್ ಅವರ ಕೃತಿಗಳು- ಸ್ವಂತ ಕೃತಿಗಳು-  " ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು" (ರಾಜಕೀಯ- ಸಾಂಸ್ಕೃತಿಕ) - (ಚಿಂತನ ಪ್ರಕಾಶನ),  " ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ" (ಪರ್ಯಾಯ ಸಿನಿಮಾ, ಕಲಾತ್ಮಕ ಸಿನಿಮಾ) -  (ಅಹರ್ನಿಶಿ ಪ್ರಕಾಶನ). ಅನುವಾದಿತ ಕೃತಿಗಳು- " ವಿಮೋಚಕಿಯ ಕನಸುಗಳು - ಸಾವಿತ್ರಿಬಾಯಿ ಫುಲೆ ಬದುಕು ಬರಹ"  - (ಅಹರ್ನಿಶಿ ಪ್ರಕಾಶನ)

 "ಹುಲಿಯ ನೆರಳಿನೊಳಗೆ - ನಿಮ್ಗಾಡೆಯವರ ಆತ್ಮ ಕಥನ" - (ಲಡಾಯಿ ಪ್ರಕಾಶನ), " ಬಹುಸಂಖ್ಯಾತವಾದ" - (ಕ್ರಿಯಾ ಪ್ರಕಾಶನ), "ವಿಮರ್ಶಾತ್ಮಕ ಸಿದ್ದಾಂತದ ಶಿಕ್ಷಣದೆಡೆಗಿನ ಹೆಜ್ಜೆಗಳು"  - (ಲಡಾಯಿ ಪ್ರಕಾಶನ)

ಬಿ. ಶ್ರೀಪಾದಭಟ್

BY THE AUTHOR