Story

 ಸುಧಾರಸ

ಲೇಖಕ ಗೌರೀಶ್ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು. ಇವರ ಕಾವ್ಯನಾಮ-ಗೌರೀಶ್ ಅಬ್ಳಿಮನೆ. ಅವರು ಡಿಜಿಟಲ್ ಮಾಧ್ಯಮದಲ್ಲಿ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಚಿಸಿ‌ ಪ್ರಕಟಿಸಿದ್ದು, ಅವರ ‘ಸುಧಾರಸ’ ಕತೆ ನಿಮ್ಮ ಓದಿಗಾಗಿ...

"ಅಂದಹಾಗೆ ತಮ್ಮ ಹೆಸರೇನು?"

ಇಂದಿನ ಮಳೆಗಾಲದ ಮಳೆಯಂತೆ ಇವನ ಮಾತು. ಎದುರಿಗಿರುವವರು 'ಧೋ..' ಎಂದು ಸುರಿಯುತ್ತಿರುವ ಮಳೆಯ ಹಾಗೆ ಉಸಿರು ನಿಲ್ಲಿಸದೆ ಮಾತನಾಡುತ್ತಿದ್ದರೆ ಇವನು ಅವರ ರ‍್ಧವೂ ಮಾತನಾಡುವುದಿಲ್ಲ. ಇಡೀ ಸಂಭಾಷಣೆಯಲ್ಲಿ ಇವನ ಮಾತುಗಳು ಎಂದಿರುವುದು ಒಂದು, ಎರಡು, ಮೂರು, ನಾಲ್ಕು...ಹೀಗೆ ಬೆರಳಣಿಕಗಳಷ್ಟು ಮಾತ್ರ. ಅದೂ ಪರಿಚಿತರು, ಸ್ನೇಹಿತರ ಜೊತೆ. ಇನ್ನು ಅಪರಿಚಿತರ ಜೊತೆ ಕೇಳಬೇಕೆ? ಒಮ್ಮೊಮ್ಮೆ ಮಾತನಾಡಿದ. ಕೆಲವೊಮ್ಮೆ ಮೌನವೇ ಇವನ ರಕ್ಷಾಕವಚ.

"ನಾಳೆ ಕೆಲಸಕ್ಕೆ ಅಂತ ಹೊರಗ್ಹೋದ್ರೆ ಇರೋರೆಲ್ಲ ಅಪರಿಚಿತರೇ. ನೀನು ಅವರ ನಡುವೆ ಹೀಗೆ ಗುಮ್ಮನಾಗಿದ್ರೆ ಏನೂ ಪ್ರಯೋಜನ ಆಗಲ್ಲ. ಮಾತಾಡ್ಬೇಕು. ಮಾತು ಆಡಿದ್ರೆ ಮಾತ್ರ ನಿನ್ನ ಜೀವನ." -ಇವನ ಅಮ್ಮ ಯಾವಾಗಲೂ ಬೈಯುತ್ತ ಬುದ್ಧಿ ಹೇಳುತ್ತಿದ್ದಳು. ಆದರೆ ಇವನು ಚಿಕ್ಕಂದಿನಿಂದಲೂ ಅಮ್ಮನ ಮಾತು ಕೇಳದೇ ಹಾಗೆಯೇ ಬೆಳೆದುಬಿಟ್ಟ.

"ಅಲ್ಲಾ,ನಾಳೆ ಹೆಂಡತಿ ಹತ್ರ ಏನ್ಮಾತಾಡ್ತಿಯ? ನೀನು ಅವಳ‌ ಜೊತೆ ಮಾತಾಡ್ದೆ ಸುಮ್ನೆ ಇದ್ರೆ ಅವಳು ಬೇರೆ ದಾರಿ ನೋಡ್ಕೊಳ್ಬಹುದು. ಹುಷಾರು!" -ಸ್ನೇಹಿತರು ಆಗಾಗ ಹೀಗೆ ಕಾಲೆಳೆದರೂ ಇವನು ಮೌನಿಯಾಗಿಯೇ ಉಳಿದುಬಿಟ್ಟ.
"ಮಾತನಾಡಿ."
"ಒಮ್ಮೆ ಮಾತನಾಡು." -ಹೀಗೆ ಎಲ್ಲರಿಂದಲೂ ಮಾತನಾಡುವುದರ ಬಗ್ಗೆ, ಮಾತುಗಳ ಬಗ್ಗೆ ಉಪದೇಶ-ಉಪನ್ಯಾಸಗಳನ್ನು ಸ್ವೀಕರಿಸಿದ ಇವನು ಆರಿಸಿಕೊಂಡದ್ದೂ ಅಂತಹುದ್ದೇ ಕೆಲಸ.

ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ.
ಮಾತನಾಡಲೇ ಬೇಕು, ಕಾಲೇಜು ಹುಡುಗ-ಹುಡುಗಿಯರ ಜೊತೆ ಗಂಟೆ ಕಾಲ ಒಮ್ಮೆ ಕೂಡ ಮೌನಿಯಾಗದೆ ಮಾತನಾಡಲೇ ಬೇಕು. ತನ್ನ ಸಹೋದ್ಯೋಗಿಗಳ ಜೊತೆ ಮಾತನಾಡಲೇ ಬೇಕು, ರ‍್ಚೆ ಮಾಡಲೇ ಬೇಕು. ಕೆಲವೊಮ್ಮೆ ಕರ‍್ಯಕ್ರಮಗಳಲ್ಲಿ ಭಾಷಣವನ್ನೂ ಮಾಡಬೇಕು.

ಮೊದಲೇ ವಿಷಯ ಕನ್ನಡ, ಮೌನಿಯಾಗಿ ಇರಲಂತೂ ಸಾಧ್ಯವಿಲ್ಲ.

ಹಾಗೆಂದು ಇವನು ಒಮ್ಮೆಯೂ ಮೌನಿಯಾಗಿ ಉಳಿಯಲಿಲ್ಲ. ಇವನ ಸ್ನೇಹಿತರಿಗೆ, ಇವನ ಪರಿಚಿತರಿಗೆ-ನೆಂಟರಿಗೆ, ಮುಖ್ಯವಾಗಿ ಅಮ್ಮನಿಗೆ ಕುತೂಹಲ. ಯಾವಾಗಲೂ ಮಾತೇ ಆಡದೆ ಮೌನಿಯಾಗಿರುವ ಈತ ಕಾಲೇಜಿನಲ್ಲಿ ಮಕ್ಕಳೆದುರು ಗಂಟೆಗಳ ಕಾಲ ಒಮ್ಮೆ ಕೂಡ ಮೌನಿಯಾಗದೆ ಹೇಗೆ ಮಾತನಾಡಬಲ್ಲ? ಸ್ನೇಹಿತರು ಇವನ ಹಿಂದೆ ಬಿದ್ದರು. ಅಮ್ಮ ಇವನ ಸ್ನೇಹಿತರ ಹಿಂದೆ ಬಿದ್ದಳು.

ಇಲ್ಲಿ ಅವರು ಅಚ್ಚರಿ ಪಡುವಂಥದ್ದೇನೂ ಇರಲಿಲ್ಲವಾದರೂ ಮಾತನಾಡಲು ಕೆಲವೊಮ್ಮೆ ದುಡ್ಡಿನ ಆಮಿಷ ತೋರಿಸಿದರೂ ಮಾತನಾಡದೆ ಮೌನವನ್ನು ಪುಕ್ಕಟೆಯಾಗಿ ಹಂಚಿದವ ಕಾಲೇಜಿನ ತರಗತಿಯಲ್ಲಿ ಹೇಗೆ ಮಾತನಾಡಬಲ್ಲ? ಎಂಬ ಕುತೂಹಲ ತಣಿಯಿತಷ್ಟೆ.

ಹರೆಯಕ್ಕೆ ಕಾಲಿಟ್ಟಿರುವ ಅಪರಿಚಿತ ಹುಡುಗ-ಹುಡುಗಿಯರೆದುರು ಇವನು ಒಬ್ಬ ಉಪನ್ಯಾಸಕನಾಗಿ ಏನು ಮಾಡಬೇಕು? ಅದನ್ನು ಮಾಡಿದ. ಮೊದಲು ತರಗತಿಗೆ ಹೋದ, ಬರ‍್ಡಿನ ಮೇಲೆ ಕನ್ನಡ ಎಂದು ವಿಷಯದ ಹೆಸರು ಬರೆದ. ಆನಂತರ ತನ್ನ ಪರಿಚಯ ಮಾಡಿಕೊಂಡ. ಮೊದಲು ಹಾಜರಿ ಹಾಕಿದ. ಆನಂತರ ಕನ್ನಡ ಭಾಷೆಯ ಇತಿಹಾಸ-ಸಂಸ್ಕೃತಿಯ ಕುರಿತು ಸಣ್ಣದಾಗಿ ಮಾತನಾಡಿ ನೇರವಾಗಿ ಪಠ್ಯದಲ್ಲಿರುವ ವಿಷಯಕ್ಕೆ ಹೋಗಿ ಪಾಠ ಮಾಡಿದ.

ಎಲ್ಲರೂ ಮಾಡುವುದೇ.

ಜೀವನವೂ ಬದಲಾಗಲಿಲ್ಲ, ಮಾತೂ ಹೆಚ್ಚಾಗಲಿಲ್ಲ. ಎಲ್ಲವೂ ಮೊದಲಿನಂತೆಯೇ ಇತ್ತು.
ಜೀವನ ಹೀಗೆ ಸಾಗುತ್ತಿರುವಾಗ ಅದೊಂದು ದಿನ ಇವನಮ್ಮ ಒಂದು ನರ‍್ಧಾರ ತೆಗೆದುಕೊಂಡಳು.

ಮಗನಿಗೆ ಮದುವೆ ಮಾಡಬೇಕು.
"ಮದ್ವೆನ? ಅವ ಮಾತೇ ಆಡೋದಿಲ್ಲ. ಅವನನ್ನ ಯಾವ ಹೆಣ್ಣು ಇಷ್ಟಪಡ್ತಾಳೆ?" ಅವಳ ಆಪ್ತರೊಬ್ಬರು ಅವಳ ನರ‍್ಧಾರವನ್ನು ಜಾರಿಗೆ ತರಲು ಮೊದಲು ಹಿಂದೇಟು ಹಾಕಿದರಾದರೂ ಆನಂತರದಲ್ಲಿ ಒಪ್ಪಿಕೊಂಡು ಇವನಿಗೆ ಹುಡುಗಿ ಹುಡುಕಲು ಪ್ರಾರಂಭಿಸಿದರು.

ಇಂತಹ ಸಂರ‍್ಭದಲ್ಲಿ ಇವನಿಗೊಬ್ಬರ ಪರಿಚಯವಾಯಿತು.
ಯಾವತ್ತೂ ಅಪರಿಚಿತರ ಜೊತೆ ಮಾತುಗಳನ್ನಾಡಲು ಅನುಮಾನಿಸುವವ ಆ ದಿನ ಅಪರಿಚಿತನ ಕಾಡುಹರಟೆ ಕೇಳುತ್ತ ಅವರ ಹೆಸರು ಕೇಳಿದ.

"ಅಂದಹಾಗೆ ತಮ್ಮ ಹೆಸರೇನು?"
ಅವರು ತಕ್ಷಣ ಅವರು ಹೇಳುತ್ತಿದ್ದ ಕತೆಗೊಂದು ವಿರಾಮ ಹಾಕಿ ತಮ್ಮ ಹೆಸರು ಹೇಳಿ ಕತೆ ಮುಂದುವರೆಸಿದರು.

ಶಂಕರಮರ‍್ತಿ!
ಪ್ರತಿದಿನ ಸಂಜೆ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸವನ್ನಿಟ್ಟುಕೊಂಡಿರುವ ಇವನು ಇಷ್ಟು ರ‍್ಷಗಳಲ್ಲಿ ಒಮ್ಮೆಯೂ ಗ್ರಂಥಾಲಯಕ್ಕೆ ಬರುವವರ ಜೊತೆ ಸ್ನೇಹ ಮಾಡಿದವನಲ್ಲ. ಕೆಲವರು ಈತ ನಮ್ಮ ರಸ್ತೆಯವನೇ, ನಮ್ಮ ಸ್ನೇಹಿತರ ಮನೆಯವನು, ನಮ್ಮ ಕಾಲೇಜ್ ಹುಡುಗ ಎಂದೆಲ್ಲ ಬಂದು ಮಾತನಾಡಿಸಿದರೆ ಒಮ್ಮೆ ಹ್ಞೂ..ಇನ್ನೊಮ್ಮೆ ಹ್ಞಾ...ಎಂದು ಮಾತುಕತೆಯನ್ನು ಅಷ್ಟಕ್ಕೇ ಮುಗಿಸಿಬಿಡುತ್ತಿದ್ದ ಇವನು ಅಂದು ಶಂಕರಮರ‍್ತಿಗಳ ಪರಿಚಯ ಮಾಡಿಕೊಂಡು ಸ್ನೇಹ ಮಾಡಿದ.

ಮೊದಲು ಮಾತ‌ನಾಡಿಸಿದ್ದು ಶಂಕರಮರ‍್ತಿಗಳೇ.

"ನೀವು ಯಾರು ಅಂತ ಗೊತ್ತಿಲ್ಲ. ಆದ್ರೆ ನೀವು ಓದ್ತ ಇದ್ರಲ್ಲ? ಕಾರಂತರ ಪುಸ್ತಕ. ಅದಂತೂ ತುಂಬಾ ಇಷ್ಟ ನಂಗೆ. ನಾನೀಗಾಗ್ಲೇ ಅದನ್ನ ಹತ್ತು ಬಾರಿ ಓದಿದ್ದೇನೆ." ಎನ್ನುತ್ತ ಗ್ರಂಥಾಲಯದಿಂದ ಹೊರಬೀಳುವಾಗ ಇವನನ್ನು ಮಾತನಾಡಿಸಿದ ಶಂಕರಮರ‍್ತಿಗಳು ವಯಸ್ಸಿನಲ್ಲಿ ಇವನಿಗಿಂತ ಮೂವತ್ತು ರ‍್ಷ ಹಿರಿಯರಾಗಿದ್ದರು.

ಅವರು ಬಂದು ಮಾತನಾಡಿಸಿದಾಗ ಇವನೊಮ್ಮೆ ಬೆಚ್ಚಿದನಾದರೂ ಆನಂತರ ಸಾವರಿಸಿಕೊಂಡು ಅವರ ಮಾತುಗಳು ಮುಂದುವರೆದ ಹಾಗೆ ಆಸಕ್ತಿಯಿಂದ ಇವನೂ ಅವರ ಜೊತೆ ಮಾತು ಆರಂಭಿಸಿ ನಡುವೆ ಹೆಸರು ಕೇಳಿದ.
ಯಾರೋ? ಏನೋ? ಅಪರೂಪಕ್ಕೆ ಗ್ರಂಥಾಲಯಕ್ಕೆ ಬಂದಿದ್ದಾರೆ. ಹಿರಿಯರು ಬೇರೆ. ಆದ್ದರಿಂದ ಅವರ ಮನಸ್ಸು ನೋಯಿಸುವುದು ಬೇಡ ಎಂದು ಮಾತನಾಡಿದನೇನೋ?
ಇವನ ಕೆಲವು ಪರಿಚಿತರು ಈ ದೃಶ್ಯವನ್ನು ನೋಡಿ ಅಂದುಕೊಂಡರು. ಮನೆಗೆ ಹೋಗಿ ಹೇಳಿದರು.
"ಇವತ್ತೊಂದ್ ಅದ್ಭುತ ನೋಡ್ದೆ. ನಮ್ಮ ಸಾವಿತ್ರಮ್ಮನೋರ ಮಗ ಲೈಬ್ರರಿಲಿ ಒಬ್ಬರ ಜೊತೆ ಮಾತಾಡ್ದ."

ಅಚ್ಚರಿಯ ವಿಷಯವೇ!
ಹೆಚ್ಚು ಮಾತೇ ಆಡದೆ ಒಮ್ಮೆಯೂ ಅಪರಿಚಿತರ ಸ್ನೇಹ ಮಾಡದೆ ಬಾಲ್ಯದಿಂದಲೂ ಇರುವ ತನ್ನ ಸ್ನೇಹ ಬಳಗದ ಜೊತೆಯಲ್ಲೇ ಎಂದೂ ಕಾಲ ಕಳೆಯುತ್ತಿದ್ದ ಇವನಂದು ಹೊರಗಿನವನೊಬ್ಬನ ಜೊತೆ ಮಾತನಾಡಿ ಪರಿಚಯ ಮಾಡಿಕೊಂಡು ಸ್ನೇಹ ಮಾಡಿದ.

"ಯಾರೋ ಅವರು?" ವಿಷಯ ಕೇಳಿದ ಅಮ್ಮನಿಗೂ ಅಚ್ಚರಿ.
"ಶಂಕರಮರ‍್ತಿ ಅಂತ. ಸುಮಾರು ನಿನ್ನಷ್ಟೇ ವಯಸ್ಸಾಯ್ತು. ಲೈಬ್ರರಿಗೆ ಬಂದಿದ್ರು." ಎಂದವನು ಅವರ ಕುರಿತು ಮತ್ತೊಂದು ಮಾತು ಅಮ್ಮನೊಡನೆಯೂ ಆಡಲಿಲ್ಲ, ಗೆಳೆಯರಿಗೂ ಹೇಳಲಿಲ್ಲ.
ದಿನಾಲೂ ಗ್ರಂಥಾಲಯಕ್ಕೆ ಹೋಗುವುದು, ಪುಸ್ತಕ ಓದುವುದು, ಆನಂತರ ಹೊರಗಡೆ ಬರುವಾಗ ಶಂಕರಮರ‍್ತಿಗಳ ಜೊತೆ ಮಾತನಾಡುತ್ತ ಮನೆಗೆ ವಾಪಾಸ್ಸಾಗುವುದು.

ದಿನಗಳು ಕಳೆದ ಹಾಗೆ ಇದೇ ಇವನ ದಿನಚರಿಯಾಯಿತು.
ಅಮ್ಮ ಮತ್ತು ಸ್ನೇಹಿತರು ಗಮನಿಸುತ್ತಿದ್ದರು. ಗಮನಿಸುತ್ತಿದ್ದರು ಎನ್ನುವುದಕ್ಕಿಂತ ಎಲ್ಲರ ಕಣ್ಣಿಗೆ ಅವರಿಬ್ಬರ ಸ್ನೇಹ‌ ಕಾಣಿಸುತ್ತಿತ್ತು.

ಶಂಕರಮರ‍್ತಿಗಳು ಮತ್ತು ಇವನು.
ಅಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಒಂದು ದಿನ ತನ್ನ ಕುತೂಹಲಗಳನ್ನು ತಣಿಸಿಕೊಳ್ಳುವ ದೃಷ್ಟಿಯಿಂದ ಹೇಳಿಯೇ ಬಿಟ್ಟಳು.
"ಅಲ್ವೊ? ದಿನಾ ಅವರ ಜೊತೆ ಮಾತಾಡ್ತ ರ‍್ತಿಯಲ್ಲ? ಹೀಗೊಂದ್ಸಾರಿ ಅರ‍್ನ ಮನೆಗೆ ರ‍್ಕೊಂಡ್ಬಾ. ನಾನು ಸ್ವಲ್ಪ ಅವರ ಪರಿಚಯ ಮಾಡ್ಕೊಳ್ತೇನೆ. "
ಇವನಿಗೆ ಇಷ್ಟವಾಗಲಿಲ್ಲ. ಕಾರಣ ಇವನಿಗೆ ಗೊತ್ತಿದೆ. ಅಮ್ಮ ತನ್ನ ಕುತೂಹಲಗಳನ್ನು ತಣಿಸಿಕೊಳ್ಳಲು ಶಂಕರಮರ‍್ತಿಗಳನ್ನು ಮನೆಗೆ ಆಹ್ವಾನಿಸುತ್ತಿದ್ದಾಳೆಂದು.

ಕೂಡಲೇ ಆಗುವುದಿಲ್ಲ ಎಂದು ಅಮ್ಮನ ಜೊತೆ ಜಗಳವಾಡಿ ಎಂದಿನಂತೆ ಗ್ರಂಥಾಲಯಕ್ಕೆ ಹೋದ.
ಸಾವಿತ್ರಮ್ಮನಿಗೆ ಆಶ್ರ‍್ಯ!
ಎಂದೂ ಅಮ್ಮನ ಜೊತೆ ಜಗಳ ಮಾಡದೆ ಹೆಚ್ಚಾಗಿ ಎಲ್ಲವನ್ನೂ ಮೌನದಲ್ಲಿಯೇ ವ್ಯಕ್ತಪಡಿಸಿ ಹೋಗುವ ಮಗ ಇಂದು ಮಾತುಗಳನ್ನು ಬಳಸಿದ್ದ. ಮಗ ಜಗಳ ಮಾಡಿದನೆಂದು ಬೇಸರವಾದರೂ ಜಗಳಕ್ಕಾಗಿ ಮಾತುಗಳನ್ನು ಉಪಯೋಗಿಸಿದನೆಂದು ಸಂತೋಷವೂ ಆಯಿತು.

ಎಲ್ಲವೂ ಶಂಕರಮರ‍್ತಿಗಳ ಸ್ನೇಹದ ಫಲ. ಒಮ್ಮೆ ಅವರ ಜೊತೆ ಮಾತನಾಡಲೇ ಬೇಕು. ಹೀಗೆ ಸಾವಿತ್ರಮ್ಮ ತನ್ನ ಮಗನನ್ನು ಬದಲಾಯಿಸುತ್ತಿರುವ ಹಿರಿಯ ಶಂಕರಮರ‍್ತಿಗಳನ್ನು ದೇವರನ್ನು ನೆನೆದಂತೆ ನೆನೆಯುತ್ತ ದಿನಗಳನ್ನು ಕಳೆಯುತ್ತಿದ್ದರೆ ಅವಳ ಮಗನಿಗೊಂದು ಸಂಬಂಧ ಬಂದಿತು.

"ಹುಡುಗಿ ಎಷ್ಟು ಚೆನ್ನಾಗಿದ್ದಾಳೆ. ಅಲ್ವೆನೋ?" ಸಾವಿತ್ರಮ್ಮ ಹುಡುಗಿಯ ಫೋಟೋ ನೋಡುತ್ತ ಮಗನನ್ನು ಕೇಳಿದಳು. ಮಗ ಫೋಟೋ ನೋಡಿ,"ಬರಿ ಚಂದ ಒಂದಿದ್ರೆ ಆಯ್ತ? ಗುಣ-ಸ್ವಭಾವ, ಮನೆತನ ಎಲ್ಲ ನೋಡೋದ್ಬೇಡ್ವ?" ಎಂದು ಕೇಳಿದ.

ಸಾವಿತ್ರಮ್ಮ ಈ ವಿಷಯಗಳಿಂದ ಅಪರಿಚಿತಳೇನಲ್ಲ. ಆದರೂ ಒಮ್ಮೆ ಹುಡುಗಿಯ ಅಂದ ಅವಳನ್ನು ಕಳೆದುಹೋಗುವಂತೆ ಮಾಡಿತಷ್ಟೆ. "ಅಂದ್ಹಾಗೆ ಹುಡುಗಿ ಏನ್ಮಾಡ್ಕೊಂಡಿದ್ದಾಳೆ?" ನಿಮಿಷಗಳ ನಂತರ ಕೇಳಿದ.
"ಎಮ್ ಕಾಮ್ ಮುಗಿಸಿ ಪ್ರೈವೇಟ್ ಕಂಪನಿಲಿ ಕೆಲಸ ಮಾಡ್ತಿದ್ದಾಳಂತೆ." ಎಂದ ಅಮ್ಮ,"ನಿಂಗೆ ಓಕೆ ಆದ್ರೆ ಹೇಳು. ಜಾತಕ ತೋರಿಸ್ತೇನೆ." ಎಂದಳು.

ಇವನು ಒಂದು ರಾತ್ರಿ ಸಮಯ ಪಡೆದು ಮಾರನೆಯ ದಿವಸ,"ಜಾತಕ ತರ‍್ಸು. ನೋಡೋಣ." ಎಂದು ಹುಡುಗಿಯನ್ನು ನೋಡಲು ಒಪ್ಪಿಕೊಂಡ.

ಸಾವಿತ್ರಮ್ಮನಿಗೆ ಸ್ರ‍್ಗ ಅಂಗೈಗೆ ಬಂದಷ್ಟು ಖುಷಿಯಾಗಿ ಹೋಯಿತು.

"ಮಗ ಮದುವೆಗೆ ಒಪ್ಪಿದ್ದಲ್ಲದೆ ಈಗ ಹುಡುಗಿಯನ್ನು ನೋಡಲೂ ಕೂಡ ಒಪ್ಪಿಕೊಂಡ." ಎಂದು ಖುಷಿಯಿಂದ ಜಾಸ್ತಿ ಸಮಯ ವ್ರ‍್ಥ ಮಾಡದೆ ಎರಡು ದಿನಗಳಲ್ಲಿ ಜಾತಕ ತೋರಿಸಿ ಒಳ್ಳೆಯ ಭಾವದಿಂದ ಮನೆಗೆ ಬಂದು,"ಜಾತಕ ಓಕೆ." ಎಂದಳು.

ಮಗನಿಗೀಗ ಎರಡು ಮನಸ್ಸು.

"ಅದ್ಕೆ?"

ಕೇಳುವಾಗಲೇ ನಿರಾಸಕ್ತಿ.

"ಅದ್ಕೆ ಅಂದ್ರೆ ಜಾತಕ ಎಲ್ಲ ಕೂಡ್ಬರುತ್ತೆ. ಹುಡುಗಿದೂ ಒಳ್ಳೆ ಜಾತಕ. ಎಲ್ಲಾ ಸರಿಹೊಂದಿದ್ರೆ ಮದುವೆ ಮಾಡ್ಕೊಳ್ಬಹುದು ಅಂದ್ರು ಪುರೋಹಿತರು." ಎಂದು ಅಮ್ಮ ಆಸಕ್ತಿಯಿಂದ ಹೇಳುತ್ತಿದ್ದರೆ ಮಗ,"ಈ ಹುಡುಗಿ ಬೇಡ. ಬೇರೆ ಯರ‍್ನಾದ್ರೂ ನೋಡು" ಎಂದುಬಿಟ್ಟ.

ಅಚ್ಚರಿಯೂ ಆಯಿತು, ಕೋಪವೂ ಬಂದಿತು.

ನೀನು ಸರಿಯೆಂದೆಯೆಂದು ಜಾತಕ ತೋರಿಸಿದೆ. ನೀನೇ ತಾನೇ ಒಂದು ರಾತ್ರಿ ಯೋಚನೆ ಮಾಡಿ ನರ‍್ಧಾರ ಹೇಳಿದ್ದು? ಈಗೇನಾಯಿತು? ಈ ಬದಲಾವಣೆ ಏಕೆ? ಎಂದು ಮಗನನ್ನು ವಿಚಾರಿಸಿಕೊಂಡಳು.

ಇದಕ್ಕೆ ಮಗ ದೊಡ್ಡ ಕಾರಣವನ್ನೇನೂ ನೀಡಲಿಲ್ಲ.

"ಅವಳು ಪ್ರೈವೇಟ್ ಕಂಪನಿಲಿ ಕೆಲಸ ಮಾಡೋದು. ನಾನು ಕಾಲೇಜಲ್ಲಿ ಕೆಲಸ ಮಾಡೋದು. ಸರಿಯಾಗಲ್ಲ. ನಾಳೆ ಸಮಸ್ಯೆ ಆಗುತ್ತೆ." ಎಂದು ಎಲ್ಲರೂ ಹೇಳುವಂತಹ ಕಾರಣವನ್ನೇ ನೀಡಿ ಗ್ರಂಥಾಲಯಕ್ಕೆ ಹೋದ.

ಶಂಕರಮರ‍್ತಿಗಳು ಗಮನಿಸುತ್ತಿದ್ದರು.

ಯಾವಾಗೂ ಆಸಕ್ತಿಯಿಂದ ಗ್ರಂಥಾಲಯಕ್ಕೆ ಬಂದು ತನಗಿಷ್ಟವಾದ ಪುಸ್ತಕಗಳನ್ನು ತೆಗೆದುಕೊಂಡು ಓದುವವನು ಮೊನ್ನೆಯಿಂದೇಕೆ ಓದುವುದರಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ? ಮನೆಯಲ್ಲಿ ಏನಾದರೂ ನಡೆಯಿತೆ? ಅಮ್ಮ ಮದುವೆಗೆ ಹುಡುಗಿ ಹುಡುಕುತ್ತಿದ್ದಾಳೆಂದು ಹೇಳುತ್ತಿದ್ದ. ಆ ವಿಷಯದಲ್ಲೇನಾದರೂ ಗಲಾಟೆಯಾಯಿತೆ? ಅಮ್ಮ ಇವನಿಗಿಷ್ಟವಿಲ್ಲದ ಹುಡುಗಿಯ ಜೊತೆ ಮದುವೆಯನ್ನು ನಿಶ್ಚಯಿಸಿಬಿಟ್ಟಳೆ?

ತಲೆಯೊಳಗೆ ಹುಳ ಬಿಟ್ಟುಕೊಂಡ ಶಂಕರಮರ‍್ತಿಗಳು ಗ್ರಂಥಾಲಯದಿಂದ ಹೊರಬೀಳುವಾಗ ಕೇಳಿದರು.

"ಏನಾದ್ರೂ ಸಮಸ್ಯೆನ?"

ಇವನಿಂದ ಮರೆಮಾಚುವುದು ಕಷ್ಟವಾಯಿತು. ಮೊದಲು ಅಂಥದ್ದೇನೂ ಇಲ್ಲ ಎಂದನಾದರೂ ಆನಂತರ ಅವರು ಬಿಡದೆ ಒತ್ತಾಯ ಮಾಡಲಾರಂಭಿಸಿದ ನಂತರ ಹೇಳಲೇ ಬೇಕಾಯಿತು.

"ಒಂದು ಸಂಬಂಧ ಬಂದಿದೆ. ಹುಡುಗಿ ನೋಡೋಕೆ ಚೆನ್ನಾಗಿದ್ದಾಳೆ. ಒಳ್ಳೆ ಕೆಲಸದಲ್ಲೂ ಇದ್ದಾಳೆ. ಜಾತಕಾನೂ ಹೊಂದುತ್ತೆ. ಪುರೋಹಿತರು ಮದ್ವೆ ಮಾಡ್ಕೊಳ್ಬಹುದು ಅಂತಾನೂ ಹೇಳಿದ್ದಾರೆ. ಆದ್ರೆ ಒಂದು ಸಮಸ್ಯೆ ಇದೆ."

"ಏನದು?"

"ನಂಗೆ ಅವಳು ತುಂಬಾ ಚೆನ್ನಾಗ್ಗೊತ್ತು."

ಇಷ್ಟು ಹೊತ್ತು ಸಮಸ್ಯೆ ಏನಪ್ಪ? ಎಂದು ತಲೆಕೆಡಿಸಿಕೊಂಡು ಗಂಟೆಗಳನ್ನು ಹಾಳು ಮಾಡಿದ ಶಂಕರಮರ‍್ತಿಗಳು ಅಚ್ಚರಿಗೊಂಡರು.

"ಅದು ಸಮಸ್ಯೆ ಹೇಗಾಗುತ್ತೆ? ಒಳ್ಳೆ ವಿಷಯಾನೇ ಅಲ್ವ? ನಿಂಗೆ ಹುಡುಗಿ ಚೆನ್ನಾಗ್ಗೊತ್ತು ಅಂದ್ಮೇಲೆ ಅವಳಿಗೂ ನಿನ್ನ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಅದೂ ಅಲ್ದೆ ಈಗಿನ ಕಾಲದ ಹುಡುಗಿರು ಹಾಗೆಲ್ಲ ಹುಡುಗನ ಮುಖ-ಮೂತಿ ನೋಡ್ದೆ ಮಾತು ಮುಂದುವರೆಸೋಕೆ ಒಪ್ಕೊಳಲ್ಲ."

ಶಂಕರಮರ‍್ತಿಗಳ ಮಾತೂ ಸತ್ಯವೇ. ಹುಡುಗಿಯರು ಹುಡುಗನನ್ನು, ಅವನ ಹಿನ್ನೆಲೆಯನ್ನು ನೋಡದೆ ಮದುವೆಯಾಗುವ ಕಾಲ ಎಂದೋ ಮುಗಿದು ಹೋಗಿದೆ. ಹಾಗಾದರೆ, ಅವಳು ಇಷ್ಟಪಟ್ಟೇ ಒಪ್ಪಿಕೊಂಡಳೆ?

ಇವನಿಗೆ ಸಮಸ್ಯೆಯಾಯಿತು.

ಹೇಳುವ ಹಾಗಿಲ್ಲ, ಕೇಳುವ ಹಾಗಿಲ್ಲ. ಇವನ ರ‍್ಯಾದೆಯ ಪ್ರಶ್ನೆ.

ಸಂಜೆ ಗ್ರಂಥಾಲಯದಿಂದ ಮನೆಗೆ ಬಂದವನು ಅಮ್ಮನಿಗೆ, "ಅಮ್ಮ, ಮಾತುಕತೆ ಮುಂದುವರೆಸ್ಬಹುದು." ಎಂದ.

ಮತ್ತೆ ಆಶ್ರ‍್ಯ, ಮತ್ತೆ ಕೋಪ!

ಮದುವೆಯೆಂದರೇನು ಆಟವ ನಿನಗೆ? ಎಂದು ಕೇಳುತ್ತ ಮತ್ತೊಮ್ಮೆ ವಿಚಾರಿಸಿಕೊಂಡವಳು ಮಗನ ಕೊನೆಯ ಮಾತಿಗೆ ಹ್ಞೂ ಎಂದಳು.

"ಅವರಿಗೆ ಒಪ್ಗೆ ಇದ್ರೆ ಅವರು ಫೋನ್ ಮಾಡಿ ಏನಾಯ್ತು? ಅಂತ ತಿಳ್ಕೊಳ್ತಾರೆ. ನೀ ಇದ್ಕೆಲ್ಲ ಇಷ್ಟು ಸಿಟ್ಮಾಡ್ಕೊಂಡ್ರೆ ಹೇಗೆ?"

ಸಾವಿತ್ರಮ್ಮ ಒಮ್ಮೆ ಆಲೋಚನೆ ಮಾಡಿ ಸರಿಯೆಂದು ಹುಡುಗಿಯ ಮನೆಯವರ ಫೋನಿಗಾಗಿ ಕಾಯಲು ಆರಂಭಿಸಿದಳು. ಆದರೆ ಇವನಿಂದ ಕಾಯಲಾಗುತ್ತಿರಲಿಲ್ಲ.

ನಮ್ಮಿಬ್ಬರ ನಡುವೆ ಅಷ್ಟು ನಡೆದ ಮೇಲೂ ಅವಳು ನನ್ನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ ಎಂದರೆ ಅವನಿಂದ ನಂಬಲಾಗುತ್ತಿರಲಿಲ್ಲ.

ಆ ದಿನ ರಾತ್ರಿ ಹನ್ನೆರಡರ ತನಕ ಏನು ಮಾಡಲಿ? ಎಂದು ಚಡಪಡಿಸುತ್ತ ಹೊತ್ತು ಕಳೆದವನು ಆನಂತರ ತಡೆಯಲಾರದೆ ವರುಷಗಳಿಂದ ಧೂಳು ಹಿಡಿದುಕೊಂಡಿದ್ದ ಅವಳ ಮೊಬೈಲಿಗೆ ಕಾಲ್ ಮಾಡಿದ.

"ಹಲೋ ನವ್ಯ..."

ಅವಳಿಗೂ ನಿದ್ರೆಯಿರಲಿಲ್ಲ. ಯಾವಾಗ ಈ ಆಸಾಮಿ ಕಾಲ್ ಮಾಡುತ್ತಾನೆ? ಯಾವಾಗ ರ‍್ಷಗಳ ಹಿಂದೆ ನಡೆದುದನ್ನು ರ‍್ಚಿಸುತ್ತಾನೆ? ಯಾವಾಗ ಮದುವೆಯ ಮಾತುಕತೆಯನ್ನು ಮುಂದುವರೆಸುತ್ತಾನೆ? ಎಂದು ದಿನಗಳಿಂದ ನಿದ್ರೆಯಿಲ್ಲದೆ ಇವನ ಫೋನಿಗಾಗಿ ಕಾಯುತ್ತಿದ್ದ ನವ್ಯ ಇವನು ಕಾಲ್ ಮಾಡಿದ ಕೂಡಲೇ ಪಿಕ್ ಮಾಡಿ,"ಏನು ಮಹಾರಾಜರು, ನಿಮಗೆ ಮಹಾರಾಣಿ ಈಗ ನೆನಪಾದ್ಳೊ?" ಎಂದು ಛೇಡಿಸುತ್ತ ಕೇಳಿದಳು.

ಮೊದಲೇ ಇಷ್ಟವೋ? ಕಷ್ಟವೋ? ಎಂಬುದನ್ನು ತಿಳಿಯಲಾಗದೆ ಒದ್ದಾಡುತ್ತಿದ್ದ ಇವನಿಗೆ ಅವಳ ಮಾತೇ ಎಲ್ಲವನ್ನೂ ಹೇಳಿತು.

ಆದರೂ ಏನೇನೂ ಅರಿಯದವನಂತೆ,"ಒಂದು ವಿಷಯ ಕನ್ರ‍್ಮ್ ಮಾಡು. ನೀನು ನಮ್ಮಿಬ್ಬರ ವಿಷಯಾನ, ಆ ಘಟನೆನ ಮನೆಯವರಿಗೆ ಹೇಳಿಲ್ಲ ತಾನೆ?" ಎಂದು ಕೇಳಿದ.

ಅವಳೂ ಅಷ್ಟೆ, ರ‍್ಷಗಳ ಹಿಂದೆ ಕಾಡಿಸಿದವನನ್ನು ಸ್ವಲ್ಪ ಕಾಡಿಸೋಣವೆಂದು,"ಎಲ್ಲಾ ಹೇಳಿದ್ದೇನೆ. ಅದ್ಕೆ ನಮ್ಮನೆಯವರು ನಿಮ್ಮನೆಗೆ ಜಾತಕ ಕಳ್ಸಿದ್ದು." ಎಂದು ಸುಳ್ಳೊಂದನ್ನು ಜಾರಿಸಿದಳು.

ಇಷ್ಟು ರ‍್ಷಗಳ ಕಾಲ ತನ್ನ ಘನತೆಗೆ ಚ್ಯುತಿ ಬಾರದಂತೆ ಕಾಪಾಡಿಕೊಂಡು ಬಂದಿದ್ದ ತನ್ನ ಪ್ರೇಮಕಥೆಯನ್ನು ಅ ಕಥೆಯ ನಾಯಕಿಯೇ ಬಯಲು ಮಾಡಿ ತನ್ನ ಘನತೆಗೆ ಕಪ್ಪು ಮಸಿ ಅಂಟಿಸಿಬಿಟ್ಟಿದ್ದಾಳೆ ಎಂಬುದನ್ನು ಕೇಳುತ್ತಿದ್ದಂತೆ ಸಿಟ್ಟಾದ ಅವನು,"ನೀನು ಇಂಥವಳು ಅಂತ ಗೊತ್ತಿರೋದಿಕ್ಕೆ ಅವತ್ತು ನಿನ್ಜೊತೆ ಹಾಗ್ನಡ್ಕೊಂಡಿದ್ದು...." ಎನ್ನುತ್ತ ಮತ್ತೊಮ್ಮೆ ತಾನು ಉಪಯೋಗಿಸಿದ ಹಳೆಯ ಕೆಟ್ಟ ಶಬ್ದಗಳನ್ನು ಉಪಯೋಗಿಸಲು ಪ್ರಾರಂಭಿಸಿದ.

ರ‍್ಷಗಳ ಹಿಂದೆ ಹೇಗೆ ಅಚ್ಚರಿಯಿಂದ ಅವನ ಬಾಯಿಯಲ್ಲಿ ಬಂದ ವಿಷದಂತಹ ಶಬ್ದಗಳನ್ನು ಕೇಳಿಸಿಕೊಂಡು ಅತ್ತಂತೆ ನಾಟಕ ಮಾಡಿದಳೋ? ಇಂದೂ ಹಾಗೆಯೇ ನಾಟಕ ಮಾಡಿದಳು.

ಇವನಿಗಿದು ಸಮಸ್ಯೆಯಾಯಿತು.

ಆಗಾದರೆ ಕಾಲೇಜಿನಲ್ಲಿದ್ದೆವು. ಅವಳು ಮನೆಯವರಿಂದ‌ ತನ್ನನ್ನು ಕಾಪಾಡಿಕೊಳ್ಳಲು ನಮ್ಮಿಬ್ಬರ ಪ್ರೇಮಕಥೆಯನ್ನು ಮುಚ್ಚಿಟ್ಟಳು. ಈಗ ಹಾಗಾಗುವುದಿಲ್ಲ ನಾನಾಡುವ ಮಾತಿನಲ್ಲಿ ಸ್ವಲ್ಪ ಆಚೆಈಚೆಯಾದರೂ ಎಲ್ಲರೆದುರು ನನ್ನ ಘನತೆ ಮಣ್ಣಾಗಿಬಿಡುತ್ತದೆ. ಹಾಗಾಗಲು ನಾನು ಬಿಡಬಾರದು. ಏನಾದರಾಗಲಿ, ಈಗಲೇ ಸಾರಿ ಕೇಳಿ ಪ್ಯಾಚಪ್ ಮಾಡಿಕೊಂಡುಬಿಡಬೇಕು.

"ಲೇ ಯಾಕೇ ಇದ್ಕೆಲ್ಲ ಅಳ್ತಿಯ? ನಿಂಗೆ ನನ್ಬಗ್ಗೆ ಗೊತ್ತಿದೆ ತಾನೆ? ಹೀಗಿರುವಾಗ ಇಷ್ಟಕ್ಕೆಲ್ಲ ಅಳ್ತಾರ ಹೇಳು...." ಎನ್ನುತ್ತ ಅವಳನ್ನು ಸಮಾಧಾನ ಮಾಡಲು ಆರಂಭಿಸಿದವನು ಕೊನೆಯಲ್ಲಿ,"ಬೇಕಿದ್ರೆ ಸಾರಿ ಹೇಳ್ತೇನೆ. ಓಕೆನ ಚಿನ್ನ?" ಎಂದು ಮುದ್ದಾಗಿ ಕೇಳಿದ.

ಅವಳೇನು ಬಯಸಿದ್ದಳು? ಆದರೇನು ಸಿಗುತ್ತಿದೆ? ನವ್ಯಾಗೆ ಹುಚ್ಚೆದ್ದು ಕುಣಿಯುವಷ್ಟು ಖುಷಿಯಾದರೂ ಸಾರಿಯನ್ನು ಕೇಳಬೇಕೆಂಬ ಆಸೆಯಾಗಿ,"ನೀನು ಸಾರಿ ಕೇಳ್ಬೇಕು. ಆದ್ರೆ ಹೀಗಲ್ಲ. ನನ್ನೆದುರಿಗೆ ನಿಂತು ಸಾರಿ ಕೇಳ್ಬೇಕು." ಎಂದಳು.

"ಆಯ್ತು. ಯಾವಾಗ ಕೇಳ್ಲಿ? ನೀನೇ ಟೈಮ್-ಪ್ಲೇಸ್ ಎರಡೂ ಹೇಳು." ಇವನಿಗೆ ಅವಳ ಮೇಲೆ ಸಿಟ್ಟು ಬರುತ್ತಿದ್ದರೂ ತನ್ನ ಘನತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅವಳು ಹೇಳಿದ್ದಕ್ಕೆಲ್ಲ ಹ್ಞೂ ಹಾಕಿ ಅವಳು ಹೇಳಲಿರುವ ಸಮಯ ಮತ್ತು ಸ್ಥಳಕ್ಕೆ ಕಾಯಲಾರಂಭಿಸಿದ.

ದಿನಗಳು ಕಳೆದವು.
ಅವಳಿಂದ ಯಾವುದೇ ಕಾಲ್ ಬರಲಿಲ್ಲ. ಇವನೂ ಕಾಲ್ ಮಾಡಲಿಲ್ಲ. ಅವಳಿಗೇ ತಾನೆ ಸಾರಿ ಬೇಕಿರೋದು. ಬೇಕಿದ್ರೆ ಮಾಡ್ತಾಳೆ ಎಂದುಕೊಳ್ಳುತ್ತ ತನ್ನ ದಿನಚರಿ ಮುಂದುವರೆಸಿದ. ಹೀಗಿರುವಾಗ ಅದೊಂದು ದಿನ‌ ರವಿವಾರ ಶಂಕರಮರ‍್ತಿಗಳು ಇವನಿಗೆ ಸೂಚನೆ ನೀಡದೆ ಹಾಡುಹಗಲೇ ಇವನ ಮನೆಯೆದುರು ಪ್ರತ್ಯಕ್ಷರಾದರು.

"ಸಾವಿತ್ರಮ್ಮ ಅಂದ್ರೆ ನೀವೇನ?" ಅವರು ಬೇಸರಗೊಂಡಿದ್ದರು, ಸಿಟ್ಟಿನಲ್ಲಿದ್ದರು. ಅವರಿವರಿಂದ ಶಂಕರಮರ‍್ತಿಗಳ ಬಗ್ಗೆ ಕೇಳಿ, ದೂರದಿಂದ ಒಂದೆರಡು ಬಾರಿ ನೋಡಿದ್ದ ಸಾವಿತ್ರಮ್ಮನಿಗೆ ಮನೆಬಾಗಿಲಿಗೆ ಬಂದವರು ಯಾರೆಂದು ಹೇಳುವುದು ಬೇಕಾಗಿರಲಿಲ್ಲ.

ಶಂಕರಮರ‍್ತಿಗಳು!
ಮೊದಲು ಅವರನ್ನು ಮನೆ ಬಾಗಿಲಲ್ಲಿ ನೋಡಿ ಖುಷಿಯಾದರೂ ಅವರ ಮುಖದಲ್ಲಿದ್ದ ಕೋಪ ಮತ್ತು ಅವರ ಮಾತಿನ ಧಾಟಿ ಅವಳನ್ನು ಯೋಚಿಸುವಂತೆ ಮಾಡಿತು. "ಬನ್ನಿ. ನಾನೇ ಸಾವಿತ್ರಮ್ಮ." ಎನ್ನುತ್ತ ಅವರನ್ನು ಒಳಬರಮಾಡಿಕೊಂಡ ಅವಳು ಬಂದ ಕಾರಣ ಕೇಳಿದಳು. "ನಿಮ್ಮ ಮಗ ನಮ್ಮನೆ ಹುಡುಗಿ ಜೊತೆ ಕೆಟ್ಟದಾಗಿ ನಡ್ಕೊಂಡಿದ್ದಾನೆ. ಅದ್ಕೆ ಅವನನ್ನ ಸ್ವಲ್ಪ ವಿಚಾರಿಸ್ಕೊಂಡು ಹೋಗೋಣ ಅಂತ ಬಂದೆ."

ಸಾವಿತ್ರಮ್ಮನ ಎದೆಯಲ್ಲಿ ಒಮ್ಮೆಲೆ ಕೋಲಾಹಲ.
ನನ್ನ ಮಗ ಹುಡುಗಿಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವನೆ? ಒಮ್ಮೆ ನಂಬಲು ಅಸಾಧ್ಯವಾದರೂ ಎದುರಿಗೆ ಕುಳಿತಿರುವ ಹಿರಿಯರು ಸುಳ್ಳು ಹೇಳಲಾರರು ಎಂದು ಅವರು ಹೇಳಿದ್ದನ್ನು ನಂಬಿ ಸಣ್ಣ ಕೆಲಸದ ಮೇಲೆ ಹೊರಹೋಗಿದ್ದ ಮಗನಿಗೆ ಕಾಲ್ ಮಾಡಿದಳು.

"ಬೇಗ ಮನೆಗ್ಬಾ. ಇಲ್ಲೊಬ್ರು ನೀನು ಮಾಡಿರೋ ಘನಂದಾರಿ ಕೆಲಸಾನ ಹೇಳ್ತಿದ್ದಾರೆ..."

ಇವನಿಗೆಲ್ಲವೂ ಗೊಂದಲ!
ನವ್ಯ ಕಾಲ್ ಮಾಡಲಿಲ್ಲ. ನಾನು ಕ್ಷಮೆ ಕೇಳುತ್ತೇನೆಂದು ಒಪ್ಪಿಕೊಂಡ ಮೇಲೂ ಕಾಲ್ ಮಾಡಲಿಲ್ಲ. ಈಗ ಮನೆಗೊಬ್ಬರು ಬಂದು ನನ್ನ ಘನಂದಾರಿ ಕೆಲಸದ ಬಗ್ಗೆ ಹೇಳುತ್ತಿದ್ದಾರೆ. ಅಂದರೆ? ಬಂದವರು ನವ್ಯಳ ತಂದೆಯಿರಬಹುದೆ? ಕೂಡಲೇ ಮಾಡುತ್ತಿದ್ದ ಕೆಲಸ ಬಿಟ್ಟು ಮನೆಗೋಡಿದ.

ಆಶ್ರ‍್ಯವಾಯಿತು.
ಶಂಕರಮರ‍್ತಿಗಳು ಕುಳಿತಿದ್ದರು. ಅಯ್ಯೋ! ನಾನು ಇವರಿಗೇನು ಮಾಡಿದ್ದೇನೆ? ತನ್ನಲ್ಲೇ ಕೇಳಿಕೊಳ್ಳುತ್ತ ಒಳ ಬಂದವನು, "ಮರ‍್ತಿಗಳೆ, ಏನು ವಿಷಯ?" ಎಂದು ಕೇಳಿದ.

"ನಿಮ್ಮನೆಗೆ ಬಂದಿರೋ ಸಂಬಂಧ ನಿನಗ್ಗೊತ್ತ?" ಶಂಕರಮರ‍್ತಿಗಳು ನೇರವಾಗಿ ಕೇಳಿದರು. ಈಗಾಗಲೇ ಮರ‍್ತಿಗಳ ಎದುರು ಹುಡುಗಿ ಚೆನ್ನಾಗಿಯೇ ಗೊತ್ತಿದೆಯೆಂದು ಹೇಳಿದ್ದ ಇವನು ಈಗ ಸುಳ್ಳು ಹೇಳುವ ಹಾಗಿರಲಿಲ್ಲ.

"ಗೊತ್ತಿದೆ."
"ಕಾಲೇಜಲ್ಲಿ ಇಬ್ರೂ ಲವ್ ಮಾಡ್ತಿದ್ರ?" ಅವರ ಬಾಯಿಂದ ಬಂದ ಪ್ರಶ್ನೆ ಇವನೊಬ್ಬನನ್ನೇ ಅಲ್ಲ, ಸಾವಿತ್ರಮ್ಮನನ್ನೂ ಗಾಬರಿ ಬೀಳಿಸಿತು.

ನನ್ನ ಮಗ ಎಂದರೇನು? ಅವನು ಪ್ರೀತಿಸುವುದು ಎಂದರೇನು?
ಕೂಡಲೇ ಶಂಕರಮರ‍್ತಿಗಳಿಗೆ ಮಗನ ಕುರಿತು ಹೇಳಲು ಮುಂದಾದಳು. ಆದರೆ ಅವರು ಅವಳನ್ನು ತಡೆದು,"ನಿಮ್ಮನೆಗೆ ಬಂದಿರೋ ನವ್ಯ ಅನ್ನೋ ಹುಡುಗಿ ಸಂಬಂಧ ನಮ್ಮನೆದು. ನವ್ಯ ನನ್ನ ತಂಗಿ ಮಗಳು. ಅವಳು ನಂಗೆ ಇವರಿಬ್ಬರ ಬಗ್ಗೆ ಎಲ್ಲಾನೂ ಹೇಳಿದ್ದಾಳೆ. ಅದ್ಕೆ ಒಂದ್ಸಾರಿ ಇವನನ್ನ ವಿಚಾರಿಸ್ಕೊಂಡು ಹೋಗೋಣ ಅಂತ ಬಂದೆ." ಎಂದು ತಮ್ಮ ಸಂಪರ‍್ಣ ಪರಿಚಯ ಮಾಡಿಕೊಂಡವರು ಸುಳ್ಳಿಗೆ ಅವಕಾಶವನ್ನೇ ನೀಡಲಿಲ್ಲ.

"ಹೌದು. ಲವ್ ಮಾಡ್ತಿದ್ವಿ."

"ಈಗ್ಲೂ ನಿನಗೆ ಅವಳಂದ್ರೆ ಇಷ್ಟಾನ?"

"ಹೌದು."

"ಅವಳನ್ನ ಅಷ್ಟು ಪ್ರೀತಿಸೋ ನೀನ್ಯಾಕೆ ಅವಳ ಜೊತೆ ಅಷ್ಟು ಕೆಟ್ಟದಾಗಿ ನಡ್ಕೊಂಡೆ? ಒಬ್ಬ ಸಭ್ಯ ಸಮಾಜದಿಂದ ಬಂದ ಗಂಡಸು ತನ್ನ ಮಾತಲ್ಲಿ ಅಂತಹ ಶಬ್ದಗಳನ್ನ ಉಪಯೋಗಿಸಲ್ಲ. ಗೊತ್ತ ನಿಂಗೆ?"

"ಗೊತ್ತಿದೆ. ಅದ್ಕೆ ನಾನೇ ಅವಳ್ಹತ್ರ ಸಾರಿ ಕೇಳ್ಬೇಕು ಅಂತ ಡಿಸೈಡ್ ಮಾಡಿರೋದು. ಅವಳೂ ಒಪ್ಕೊಂಡಿದ್ದಾಳೆ. ಬೇಕಿದ್ರೆ ನೀವೇ ಕೇಳ್ನೋಡಿ."

"ನೋಡು, ನಮ್ಮನೆ ಹುಡುಗಿ ಕಡೆ ಬೆರಳು ಮಾಡ್ಬೇಡ. ನೀನು ಮಾಡಿದ್ದು ತಪ್ಪ? ಸರಿಯ? ಅಷ್ಟೇ ಹೇಳು."

"ನಾನು ಮಾಡಿದ್ದು ತಪ್ಪೇ."

"ತಪ್ಪು ಅಂತ ಗೊತ್ತಿದ್ಮೇಲೂ ಯಾಕೆ ಹಾಗೆ ಮಾತಾಡ್ದೆ? ನಾಚ್ಕೆ-ಮಾನ ಅನ್ನೋ ಶಬ್ದಗಳ ಪರಿಚಯಾನೇ ಇಲ್ವ ನಿಂಗೆ?"

"ಎಲ್ಲಾ ಇದೆ. ಆದ್ರೆ ನಾನೇನ್ಮಾಡ್ಲಿ? ಅವಳು ನನ್ಜೊತೆ ಹಾಗೇನೇ ಇರೋದು. ಅದ್ಕೆ ಕೋಪ ಬಂದು ಬೈದ್ಬಿಡ್ತೇನೆ. ಆಮೇಲವಳೂ ಸುಮ್ಮನಾಗ್ತಾಳೆ."

"ಒಂದ್ವೇಳೆ ಅವಳು ನಿನ್ನ ಮಾತುಗಳಿಂದಾಗಿ ನೊಂದು ಕೆಟ್ಟ ನರ‍್ಧಾರ ಏನಾದ್ರೂ ಮಾಡಿದ್ರೆ? ಆಗೇನ್ಮಾಡ್ತಿದ್ದೆ?" ಏರುದನಿಯಲ್ಲಿ ಕೇಳಿದರು.

ಇಷ್ಟುಹೊತ್ತು ತಲೆ ತಗ್ಗಿಸಿ ಮರ‍್ತಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದ ಇವನು ಅವರು ಈ ಪ್ರಶ್ನೆ ಕೇಳಿದ ಕೂಡಲೇ ಭಯದಿಂದ ತಲೆಯೆತ್ತಿದ.

"ಅಯ್ಯೋ! ಅಂಥ ಮಾತೆಲ್ಲ ಆಡ್ಬೇಡಿ. ಅವಳು ನಿಮಗೆಷ್ಟು ಮುಖ್ಯಾನೊ? ನನಗೂ ಅಷ್ಟೇ ಮುಖ್ಯ. ಯಾವ್ದೊ ಕೆಟ್ಟ ಘಳಿಗೆಲಿ ಏನೋ ಹೇಳ್ದೆ ಅಂತ ಅದನ್ನೇ ಮನಸ್ಸಲ್ಲಿಟ್ಕೊಂಡು ನಮ್ಮನ್ನ ದೂರ ಮಾಡ್ಬೇಡಿ. ನಂಗೆ ಅವಳು ಅಂದ್ರೆ ತುಂಬಾ ಇಷ್ಟ. ಅವಳಿಗೂ ಅಷ್ಟೆ, ನನ್ಮೇಲೆ ಪ್ರಾಣಾನೇ ಇಟ್ಕೊಂಡಿದ್ದಾಳೆ. ಬೇಕಿದ್ರೆ ನಿಮ್ಮೆದುರಿಗೇ ಅವಳ್ಹತ್ರ ಸಾರಿ ಕೇಳ್ತೇನೆ." ಎಂದು ಬೇಡಿಕೊಳ್ಳಲಾರಂಭಿಸಿದ.

ಸಾವಿತ್ರಮ್ಮ ಬಿಟ್ಟ ಬಾಯಿ ಮತ್ತು ಬಿಟ್ಟ ಕಣ್ಣುಗಳಿಂದ ಮಗನ‌ ವಿಶ್ವರೂಪವನ್ನು ಕಂಡು ಆನಂದಿಸುತ್ತಿದ್ದಳು.

ಇನ್ನು ಶಂಕರಮರ‍್ತಿಗಳು ತಮ್ಮ ವಿಚಾರಣೆಯನ್ನೆಲ್ಲ ಮುಗಿಸಿ,"ಸಾವಿತ್ರಮ್ನೋರೆ, ನಾವು ನಮ್ಮ ನರ‍್ಧಾರಾನ ನಾಳೆ ತಿಳಿಸ್ತೇವೆ." ಎಂದು ಹೊರಟು ಹೋದರು.

ಸಾವಿತ್ರಮ್ಮ ಅವರ ಮಾತಿಗೆ ಗಂಭೀರಳಾಗಿ ಆಯಿತೆಂದು ಅವರು ಹೋಗುತ್ತಿದ್ದಂತೆ ಮಗನ ಪ್ರೇಮಪುರಾಣವನ್ನು ನೆನೆದು ನಗಲಾರಂಭಿಸಿದಳು.

"ಛೆ! ಕೊನೆಗೂ ಅಂದ್ಕೊಂಡಿದ್ದನ್ನ ಸಾಧ್ಸೇ ಬಿಟ್ಳು. ಕೈಗೆ ಸಿಗ್ಲಿ. ಅವಳಿಗಿದೆ!" ಎನ್ನುತ್ತ ನವ್ಯಳ‌ ಮೇಲೆ ಇನ್ನಷ್ಟು ಕೋಪಗೊಂಡವನು ದಿನಗಳ ನಂತರ ಅವಳನ್ನು ನೋಡುವ ಶಾಸ್ತ್ರಕ್ಕೆಂದು ಅವಳ ಮನೆಗೆ ಹೋದಾಗ ತನ್ನ ಕೋಪವನ್ನೆಲ್ಲ ಮರೆತು ಮಂಡಿಯೂರಿ ಕ್ಷಮೆ ಕೇಳಿದ.

"ನನ್ನ ಅಪರಾಧಕ್ಕೆ ಶಿಕ್ಷೆಯಾಗಿ ನನ್ನ ಮದ್ವೆ ಆಗಿ ನಂಗೆ ಅಮ್ಮಾವ್ರ ಗಂಡ ಅನ್ನೋ ಬೇಡಿ ಹಾಕ್ತಿಯ?"

ಅಯ್ಯೋ! ನಿಂತಲ್ಲೇ ಮುದ್ದು ಬರುತ್ತಿದೆ. ಆದರೆ ನವ್ಯ ಕ್ಷಣದಲ್ಲಿ ರಾಜಿಯಾಗಲಿಲ್ಲ. ಕೋಪಿಸಿಕೊಂಡವಳಂತೆ ಮುಖ ತಿರುಗಿಸಿದಳು.

ಇವನಿಗೂ ತಾಳ್ಮೆ ಕಡಿಮೆ.
"ಓ ಇದೇ ವರಸೆನ ನಿಂದು? ಹೋಗ್ಹೋಗು. ನಾನೇನೂ ನೀ ಇಲ್ದೆ ಇದ್ರೆ ಗತಿನೇ ಇಲ್ಲ ಅಂತ ಸನ್ಯಾಸಿ ಆಗೋ ಜಾತಿನೂ ಅಲ್ಲ, ಎಣ್ಣೆ ಹಾಕೋದಿಕ್ಕೆ ಬಾರಿಗೂ ಹೋಗೋನಲ್ಲ. ನೀನಲ್ದೆ ಇದ್ರೆ ಇನ್ನೊಬ್ಳು. ಅವಳಲ್ದೆ ಇದ್ರೆ ಮತ್ತೊಬ್ಳು. ನಿನ್ನಂಥವಳು ತುಂಬಾ ಜನ ಸಿಗ್ತಾರೆ. ಹೋಗ್ಗೇ ಲ್ಲೇ...." ಎನ್ನುತ್ತ ಅವಳ ಜೊತೆ ಜಗಳಕ್ಕಿಳಿದು ಬಿಟ್ಟ.

ಇದಕ್ಕಾಗಿಯೇ ಕಾಯುತ್ತಿದ್ದಳು. ಅಮೃತದಂತಹ ಇವನ ಮಾತುಗಳನ್ನು ಎಲ್ಲರಿಗೂ ಕೇಳಿಸಲು. ಇವನು ಜೋರಾಗಿ ಅವಳ ಜೊತೆ ಜಗಳ ಮಾಡಲು ಪ್ರಾರಂಭಿಸಿದರೆ ಅವಳು ಓಡಿಬಂದು ಅವನನ್ನುತಬ್ಬಿಕೊಂಡು,"ಸಾಕು ಸಾಕು. ಸುಮ್ನಾಗು. ಎಷ್ಟು ಅಂತ ನಿನ್ನ ನೀನೇ ಬೆತ್ತಲೆ ಮಾಡ್ಕೊಳ್ತಿಯ?" ಎಂದು ಕೇಳಿದಳು.

ಅವಳ ಪ್ರೀತಿಯ ಮಾಯೆಯಲ್ಲಿ ಕಳೆದು ಹೋಗುತ್ತಿದ್ದ ಇವನಿಗೀಗ ಎಚ್ಚರವಾಯಿತು. ಒಮ್ಮೆ ಸುತ್ತಲೂ ನೋಡಿದ.

ಶಂಕರಮರ‍್ತಿಗಳು, ಸಾವಿತ್ರಮ್ಮ, ನವ್ಯಳ ಅಮ್ಮ, ಮನೆಯವರು ಮತ್ತು ಅವನ ಕೆಲವು ಸ್ನೇಹಿತರು ಅವರಿಬ್ಬರನ್ನು ನೋಡಿ ಮುಸಿ ಮುಸಿ ನಗುತ್ತಿದ್ದರು.

"ಛೆ! ಇವಳಿಂದಾಗಿ ಎಲ್ಲಾ ಹಾಳಾಗೋಯ್ತು." ಎಂದು ಮತ್ತಷ್ಟು ಸಿಟ್ಟಾದವನು ಎಲ್ಲರ ಮೇಲೆ ಕೂಗಾಡಲು ಪ್ರಾರಂಭಿಸಿದ.

ನವ್ಯ ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಂಡಳು.

ಸಾವಿತ್ರಮ್ಮ,"ಈ ಗಂಡಿಗೆ ಮೀಸೆ ಒಂದಿದ್ರೆ ಅದ್ರ ತುದಿಗೆ ಏನೇನಿರುತ್ತೆ? ಅಂತ ಹೇಳೋದೇ ಕಷ್ಟ. ಏನೇ ಆಗ್ಲಿ ಅಂತೂ ನನ್ನ ಮಗ ಎಲ್ಲರ ಹಾಗೆ ಅನ್ನೋದು ಜಗತ್ತಿಗೆ ಸಾಬೀತಾಯ್ತಲ್ಲ." ಎನ್ನುತ್ತ ಸಂಭ್ರಮಿಸಿದರೆ ಮೇಲೆ ಟೆರೆಸ್ ಮೇಲೆ ನಿಂತಿದ್ದ ಜೋಡಿಯ ಲೋಕವೇ ಬೇರೆಯಾಗಿತ್ತು.

"ಮದ್ವೆ ಆದ್ನಂತರ ಏನ್ಮಾಡ್ತಿಯ?" ಇವನು ಕೇಳಿದ.

"ನಿನ್ನ ಮಕ್ಳಿಗೆ ತಾಯಾಗ್ತೇನೆ." ಅವಳು ಹೇಳಿದಳು.

"ಏಯ್... ನಾನು ಕೇಳಿದ್ದು ಅದಲ್ಲ..."
"ನೀನು ಏನೇ ಕೇಳಿದ್ರೂ ನಾನು ಹೇಳೋದು ಮಾತ್ರ ಇದನ್ನೇ...."

 

ಗೌರೀಶ್ ಅಬ್ಳಿಮನೆ

ಲೇಖಕ ಗೌರೀಶ್ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು. ಇವರ ಕಾವ್ಯನಾಮ-ಗೌರೀಶ್ ಅಬ್ಳಿಮನೆ. (ಜನನ:  27 ಜೂನ್ 1993),  ಹೊನ್ನಾವರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಧಾರವಾಡದ  ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. ಸದ್ಯ, ಗೋಕರ್ಣದ ತದ್ರಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕಳೆದ ನಾಲ್ಕು ವರ್ಷಗಳಿಂದ ಪ್ರತಿಲಿಪಿ ಕನ್ನಡ ಎಂಬ ಡಿಜಿಟಲ್ ಮಾಧ್ಯಮದಲ್ಲಿ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಚಿಸಿ‌ ಪ್ರಕಟಿಸಿದ್ದು, ಇವರ "ಆರದ ದೀಪ" ಎಂಬುದು ಮಹಾ ಕಾದಂಬರಿ, "ಮೂಕನ ಕೋಟೆ", "ಉತ್ತರಾ" ಎಂಬ ಮಹಿಳಾ ಪ್ರಧಾನ ಸಾಮಾಜಿಕ, ‘ಸುತ್ತಜ್ಜಿ’ ಎಂಬ ಕೌಟುಂಬಿಕ‌‌ ಕಾದಂಬರಿ ಹಾಗೂ,‘ನಾನು...ನರ...ಭಕ್ಷಕ’ ಎಂಬ ನಿಗೂಢ ಕಾದಂಬರಿಯನ್ನು ಪ್ರತಿಲಿಪಿಯಲ್ಲಿ ‌ಪ್ರಕಟಿಸಿದ್ದು, ಅನೇಕ ಸಣ್ಣ ಕತೆಗಳು ಮತ್ತು ಕೆಲವು ಕವನಗಳನ್ನು ರಚಿಸಿದ್ದಾರೆ.‌  "ಕಳೆದು‌ ಹೋದ ಅಂಬೆಗಾಲು" ಕಥಾ ಸಂಕಲನ‌ ಇವರ ಮೊದಲ ಪ್ರಕಟಿತ ಪುಸ್ತಕವಾಗಿದ್ದು, ಇ-ಬುಕ್ ಮಾದರಿಯಲ್ಲಿದೆ. 

 

More About Author