ಪ್ರತಿ ಮುಂಜಾವು ಬೆಳಗಷ್ಟೇ ಅಲ್ಲ, ಹೊಸಹುಟ್ಟು
ಹೊಸ ಉಲ್ಲಾಸ ನವ ಚೈತನ್ಯದಿಂದ
ಕಂಡ ಕನಸನ್ನು ನನಸಾಗಿಸಲು ಇರುವ ಬೆಳಕದು ನಿರೀಕ್ಷೆಯೊಂದಿಗೆ ದಿನ ಪ್ರಾರಂಭಿಸುವ ಶುಭ ಗಳಿಗೆ
ಪ್ರತಿ ಮುಂಜಾವು ಬೆಳಗಷ್ಟೇ ಅಲ್ಲ, ಹೊಸಹುಟ್ಟು..
ತಂದೆ ತಾಯಿಗಳು ಮಕ್ಕಳ ಭವಿಷ್ಯಕ್ಕೆ
ದುಡಿಯಲು ಹೊರಡುವ ಸಮಯವದು
ಮಕ್ಕಳಿಗೆ ಪುಸ್ತಕದಿಂದ ಹೊಸ ವಿಷಯವನ್ನು
ಗ್ರಹಿಸಲು ಇರುವ ಸರಿಯಾದ ವೇಳೆ
ಪ್ರತಿ ಮುಂಜಾವು ಬೆಳಗಷ್ಟೇ ಅಲ್ಲ, ಹೊಸಹುಟ್ಟು..
ಬಂಧುಗಳ ಬರುವಿಕೆಗೆ ಕಾತುರದಿಂದ
ಕಾಯುವ ಬಾಂಧವ್ಯದ ಮುಂಜಾವು
ಶುಭ ಸಮಾರಂಭ ಮಾಡಲು
ದೇವಾನುದೇವತೆಗಳು ಅಸ್ತು ಅಂದ ಸಮಯವದು
ಪ್ರತಿ ಮುಂಜಾವು ಬೆಳಗಷ್ಟೇ ಅಲ್ಲ, ಹೊಸಹುಟ್ಟು..
ಸಕಲ ಜೀವಿಗಳ ಪಾಲಿಗೆ
ಬದುಕು ಕಟ್ಟಿಕೊಳ್ಳುವ ಸಮಯ
ಮುಂಜಾವನ್ನು ಆನಂದದಿಂದ ಸಂಭ್ರಮಿಸುತ್ತಾ
ನವ ಚೈತನ್ಯದಿಂದ ದಿನ ಪ್ರಾರಂಭಿಸೋಣ
ಪ್ರತಿ ಮುಂಜಾವು ಬೆಳಗಷ್ಟೇ ಅಲ್ಲ, ಹೊಸಹುಟ್ಟು..
✍️-ರಾಜೇಸಾಬ ಕೆ.ರಾಟಿ, ಬೆದವಟ್ಟಿ
ರಾಜೇಸಾಬ ಕೆ. ರಾಟಿ
ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್. ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.
ಕೃತಿ: ನೆನಪುಗಳ ಮೆರವಣಿಗೆ.
More About Author