Poem

ಅಪ್ಪು_ನಮನ

ಎಲ್ಲವೂ ಇದೆ
ಎಲ್ಲರೂ ಇದ್ದಾರೆ
ಈ ಭೂಮಿಯ ಮೇಲೆ
ನಿನ್ನ ಹೊರತು

ಆರೋಗ್ಯದಿಂದಲ್ಲೆ ಇದ್ದೆಯಲ್ಲಾ
ಇಲ್ಲಿಯವರೆಗೂ
ತಿಳಿಯದು ನನಗೆ
ನಿನ್ನ ಸಾವಿಗೆ ಕಾರಣ

ನಗುತ್ತಿದ್ದೆ ನಗಿಸುತ್ತಿದ್ದೆ
ಚಟುವಟಿಕೆಯಿಂದಲೇ ಇದ್ದೆ
ಒಮ್ಮೆಲೇ ಯಾಕೆ ಸ್ತಬ್ಧವಾದೆ
ಮೌನವನ್ನು ಮಾತ್ರ ಉಳಿಸಿ ಬಿಟ್ಟು

ಕರ್ನಾಟಕವೂ ನಿನ್ನಿಂದ
ಹೆಮ್ಮೆ ಪಡುತ್ತಿತ್ತು
ಕನ್ನಡಕ್ಕಾಗಿ ಬದುಕಿ
ಕನ್ನಡದ 'ರಾಜರತ್ನ'ವಾಗಿದ್ದೆ

ಬೇಡುವೆನು ದೇವರಲ್ಲಿ
ಮರಳಿ ಕಳುಹಿಸಿ ಬಿಡು
ನಮ್ಮ ವೀರ ಕನ್ನಡಿಗನ್ನನ್ನ
ಚಿರಂಜೀವಿ ಯಾಗಿರು ಎಂದು ಹೇಳಿ.

✍ರಾಜೇಸಾಬ ಕೆ. ರಾಟಿ, ಬೆದವಟ್ಟಿ

ರಾಜೇಸಾಬ ಕೆ. ರಾಟಿ

ಕವಿ ರಾಜೇಸಾಬ ಕೆ.ರಾಟಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆದವಟ್ಟಿಯವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆದವಟ್ಟಿ ಸರಕಾರಿ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶಿರೂರದಲ್ಲಿ ಪೂರೈಸಿದ್ದಾರೆ. ನಂತರ ಕುಕನೂರದಲ್ಲಿ ಪಿಯುಸಿ ಮುಗಿಸಿ ನಂತರ ಕೊಪ್ಪಳ ಜಿಲ್ಲೆಯ ಮಂಗಳೂರದಲ್ಲಿ ಡಿ.ಎಡ್.‌ ಮುಗಿಸಿ ಯಲಬುರಗಾದಲ್ಲಿ ತಮ್ಮ ಬಿ.ಎ ಪದವಿ ಪಡೆದರು. ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತದ್ದಾರೆ.

ಕೃತಿ: ನೆನಪುಗಳ ಮೆರವಣಿಗೆ.

More About Author