Date: 02-12-2024
Location: ಬೆಂಗಳೂರು
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲಲಿತ ಸರಳ್ಗನ್ನಡದ ಸವಿಸತ್ಯದ ಮೂಲಕ ಮೋಕ್ಷ ಪಡಕೊಂಡ ಅನುಭಾವಿ ಕವಿ ಎಂಬುದು ತಿಳಿದಿರಲಿಕ್ಕಿಲ್ಲ. ನಾನೇನಾದರೂ "ಮಹಾಲಿಂಗ ರಂಗ" ಪ್ರಶಸ್ತಿ ಸಾಹಿತ್ಯ ಸೇವೆಗೆ ಸಲ್ಲುವ ಗೌರವ ಎಂದು ಹೇಳ ಹೊರಟರೆ ಮತ್ತೆ ಯಡವಟ್ಟು ಚರ್ಚೆಗಳೆಂದು ಸುಮ್ಮನಾದೆ," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ‘ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?’ ಲೇಖನ ನಿಮ್ಮ ಓದಿಗಾಗಿ.
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ಮೇಲ್ಕಂಡ ಈ ಪ್ರಶ್ನೆಯನ್ನು ಕೆಲವರು ನನಗೆ ನೇರವಾಗಿ ಕೇಳದೇ ಸುತ್ತೀ ಬಳಸಿ ಕೇಳುತ್ತಿರುತ್ತಾರೆ. ನಾನು ದಾವಣಗೆರೆ ರಂಗಾಯಣದ ನಿರ್ದೇಶಕನಾಗಿ ಬಂದು ಮೂರು ತಿಂಗಳು ಮುಗಿಯುವ ಮೊದಲೇ ವೃತ್ತಿ ರಂಗಭೂಮಿಯ ನಾವೀನ್ಯತೆ ಕುರಿತು ಮೂರ್ನಾಲ್ಕು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಿದ ಮೇಲೆ ಕೆಲವು ಕುಹಕಿಗಳು, ಮೂರ್ನಾಲ್ಕು ಮಂದಿ ಮೂಲಕ ಹೀಗೆ ಕೇಳಿಸುವ ಸಾಹಸ ಮಾಡುತ್ತಿದ್ದಾರೆ. ಒಬ್ಬ ಮೂಲಕ ಮಹಾಶಯನಂತು ರಂಗಸಂಗೀತ ಕಲಿಕಾ ಕಾರ್ಯಕ್ರಮ ಶಿಬಿರದ ಉದ್ಘಾಟನಾ ಸಭೆಯಲ್ಲಿ ಕ್ಯಾತೆ ತೆಗೆದು ಬಿಟ್ಟಿದ್ದ. ತಾನೊಬ್ಬ ಕಲಾವಿದನೆಂತಲೂ ಆರೋಪಿಸಿಕೊಂಡವನಂತೆ, ಮೇಲಾಗಿ ತಾನು ಮಾಧ್ಯಮದವನೆಂಬ ಫೋಸು ಕೊಡುತ್ತಾ ದಿಗ್ವಿಜಯದ ಧ್ವನಿಯಲ್ಲಿ ಎದ್ದುನಿಂತು ಕೇಳಿಬಿಟ್ಟ. ಅವನ ಪ್ರಶ್ನೆ ಇದ್ದುದು "ನಾನು ಪಾತ್ರ ಮಾಡಿದ ನಾಟಕ ಕಂಪನಿ ಹೆಸರು ಮತ್ತು ಎಷ್ಟು ವರ್ಷ ಕಂಪನಿ ಸರ್ವೀಸ್" ಹೇಳಬೇಕು ಎಂಬುದು.
ಮುಂದುವರೆದ ಅವನ ತಕರಾರು ಏನೆಂದರೆ ನಾನು ನಾಟಕ ಕಂಪನಿಯೊಂದರಲ್ಲಿ ಸರ್ವಿಸ್ ಮಾಡಿದ ಅನುಭವಿ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ರಂಗಾಯಣ ನಿರ್ದೇಶಕನಾಗಿ ಬಂದಿರುವೆನೆಂಬ ವೃಥಾರೋಪ ಮತ್ತು ತರಕಲಾಂಡಿ ವಿತಂಡವಾದ. ರಂಗ ಸಂಘಟನೆಯೊಂದರ 'ಪಟ್ಟಭದ್ರ' ಮುಖಂಡನೊಬ್ಬ ತನ್ನ ವಾಟ್ಸ್ಯಾಪ್ ಮೂಲಕ "ಕಡಕೋಳ ವೃತ್ತಿ ರಂಗಭೂಮಿಯ ಕಪ್ಪು ಚುಕ್ಕೆ" ಎಂದು ಬರಕೊಂಡು ಸಮರ ಗೆದ್ದ ಸೇನಾನಿಯಂತೆ ಆತ್ಮರತಿಯಲಿ ಸಂಭ್ರಮಿಸಿದ್ದ. ಈಗಲೂ ಆತ ಅದೇ ಗುಂಗಿನಲ್ಲಿದ್ದು ಏನಾದರೂ ತಪ್ಪುಗಳನ್ನು ನಾನು ಎಸಗಲೆಂದು ಹಗಲಿರಳು ಶಪಥದಂತೆ ಕಾಯುತ್ತಿರುವಂತಿದೆ. ಇದೇ ಸಮಯದಲ್ಲಿ ನನ್ನ ಜೀವಮಾನ ಸಾಧನೆ ಗುರುತಿಸಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ "ಮಹಾಲಿಂಗ ರಂಗ" ಹೆಸರಿನ ಪ್ರತಿಷ್ಠಿತ ಪ್ರಶಸ್ತಿಯನ್ನು ನನಗೆ ಘೋಷಣೆ ಮಾಡಿತು.
ಸಹಜವಾಗಿ ಅವನಂತಹ ಒಂದೆರಡು ಅಸಹಿಷ್ಣಾವತಾರಿಗಳ ಎಸಿಡಿಟಿ ತಾರಕಕೇರಿಸಿತು. ಅದಕ್ಕೆ ಓರ್ವ ಮಹಾನುಭಾವನದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತದೆ ಹಳಸಲು ಪ್ರಶ್ನೆ. ನಾನು ಯಾವ ನಾಟಕ ಕಂಪನಿಯ ಯಾವ ನಾಟಕದ ನನ್ನದು ಫೇಮಸ್ ಪಾತ್ರ ಯಾವುದು.? ಅವರಿಗೆ ನನ್ನ ಉತ್ತರವೆಂದರೆ ನನ್ನದು ವೃತ್ತಿ ರಂಗಭೂಮಿ ರಂಗಾಯಣವೇ ನನ್ನ ನಾಟಕ ಕಂಪನಿ, ನನ್ನದು ನಿರ್ದೇಶಕ ಎಂಬ ಪ್ರಮುಖ ಪಾತ್ರ. ನಂಜುಭರಿತ ಅಂಥವರ ದೃಷ್ಟಿಯಲ್ಲಿ ಮಹಾಲಿಂಗ ರಂಗ ಎಂಬುದು ರಂಗಭೂಮಿಗೆ ಮೀಸಲಾದ ಪ್ರಶಸ್ತಿ ಎಂಬ ಸಂದೇಹಿತ ತಿಳಿವಳಿಕೆ. ಏಕೆಂದರೆ ಹೆಸರಲ್ಲಿ 'ರಂಗ' ಇದೆಯಲ್ಲ ಅದಕ್ಕೆ.
ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲಲಿತ ಸರಳ್ಗನ್ನಡದ ಸವಿಸತ್ಯದ ಮೂಲಕ ಮೋಕ್ಷ ಪಡಕೊಂಡ ಅನುಭಾವಿ ಕವಿ ಎಂಬುದು ತಿಳಿದಿರಲಿಕ್ಕಿಲ್ಲ. ನಾನೇನಾದರೂ "ಮಹಾಲಿಂಗ ರಂಗ" ಪ್ರಶಸ್ತಿ ಸಾಹಿತ್ಯ ಸೇವೆಗೆ ಸಲ್ಲುವ ಗೌರವ ಎಂದು ಹೇಳ ಹೊರಟರೆ ಮತ್ತೆ ಯಡವಟ್ಟು ಚರ್ಚೆಗಳೆಂದು ಸುಮ್ಮನಾದೆ. ಅಷ್ಟಕ್ಕೂ ಒಂದಿಬ್ಬರು ಆ ಕುರಿತು ಸ್ಪಷ್ಟೀಕರಣ ನೀಡಿದ್ದಾಯಿತು. ರಂಗಭೂಮಿ ಎಂದರೆ ರಂಗಾಯಣ ಎಂದರೆ ಪ್ರೊಸಿನಿಯಂ ನಾಟಕಗಳ ಪ್ರದರ್ಶನ ಮಾತ್ರ ಎಂಬುದನ್ನು ವೃತ್ತ ನಿರ್ಮಿಸಿಕೊಳ್ಳುವುದಲ್ಲ ಅದರಾಚೆ ಅದರ ಸಾಧ್ಯತೆಯ ಕ್ಷಿತಿಜ ವಿಸ್ತ್ರತ ಮಾಡಿಕೊಂಡು ವ್ಯಾಖ್ಯಾನಿಸುವುದೆಂಬ ಪರಮ ರಂಗಸತ್ಯ ಅರ್ಥೈಸದಿದ್ದರೆ ಇಂತಹ ಕೂಪತ್ವದ ಕಪೋಲಕಲ್ಪಿತ ಯಡವಟ್ಟು ಪ್ರಶ್ನೆಗಳು ಸೃಷ್ಟಿಗೊಳ್ಳಬಲ್ಲವು.
ಇದು ಮೇಲ್ನೋಟಕ್ಕೆ ಸರಳ ಸುಲಭದ ಪ್ರಶ್ನೆಯಾಗಿ ಕಂಡೂ ಕಾಣದಿರಬಹುದು. ಇಲ್ಲವೇ ಅದು ವಯಾ ಮೀಡಿಯಾ ಪ್ರಶ್ನೆ ಎಂತಲೂ ಕಾಣಿಸಿರಬಹುದು. ಇಂತಹ ಪ್ರಶ್ನೆ ಈ ಹಿಂದೆ ಭಾರತದ ಪ್ರಧಾನಮಂತ್ರಿ ರಾಜೀವಗಾಂಧಿ ತೀರಿಕೊಂಡಾಗ ನಾಟಕ ಕಂಪನಿ ವಲಯದ ಕಲಾವಿದ ಮಹಾಶಯರಲ್ಲಿ ಕೇಳಿಬಂದಿತ್ತು ಎಂಬ ಸೋಜಿಗ ಮಾತ್ರ ಸೋಳಾಣೆ ಸುಳ್ಳಲ್ಲ. ಅದೇನೆಂದರೆ ರಾಜೀವಗಾಂಧಿ ಕೊಲೆಯಾದಾಗ ನಾಟಕ ಕಂಪನಿಯೊಂದು ಅವರ ಗೌರವಾರ್ಥ ಆ ದಿನದ ನಾಟಕ ಪ್ರದರ್ಶನ ರದ್ದುಗೊಳಿಸಿತ್ತು. ಹೀಗಿರುವಾಗ ಓರ್ವ ನಟ ಭಯಂಕರ ಎಂದಿನಂತೆ ಪಾತ್ರ ಮಾಡಲು ಮುಗುಮ್ಮಾಗಿ ನಾಟಕ ಕಂಪನಿಗೆ ಆಗಮಿಸುತ್ತಾನೆ. ಅಲ್ಲಿ ರಂಗಪಾರ್ಟಿಯಲ್ಲಿ ಯಾರ ಸುಳಿವೇ ಇರೋದಿಲ್ಲ. ಅವನಿಗೆ ಅಚ್ಚರಿಯೆಂದರೆ ಪರಮ ಅಚ್ಚರಿ. ಅವನ ಸಹನಟನೊಬ್ಬ ಆಯಾಚಿತವಾಗಿ ಅಲ್ಲಿಗೆ ಬರುತ್ತಾನೆ. ಯಾಕಿವತ್ತು ಯಾರೂ ಕಾಣಿಸ್ತಾನೆ ಇಲ್ವಲ್ಲ. ? ನಾಟಕ ಪ್ರದರ್ಶನ ಇಲ್ಲವೇನೆಂದು ಅವರಿಬ್ಬರ ಸಂವಾದ ಶುರುವಾಗುತ್ತದೆ. "ಇಲ್ಲ ಇವತ್ತು ನಾಟಕ ಪ್ರದರ್ಶನ ಇಲ್ಲ. ರಾಜೀವಗಾಂಧಿ ತೀರಿಕೊಂಡ ಪ್ರಯುಕ್ತ ಕಂಪನಿ ಮಾಲೀಕರು ನಾಟಕ ಪ್ರದರ್ಶನ ರದ್ದು ಮಾಡಿದ್ದಾರೆಂದು" ಇನ್ನೊರ್ವ ಹೇಳುತ್ತಾನೆ. ಅದಕ್ಕವನು ಈ ರಾಜೀವ ಯಾರು.? ಯಾವ ಕಂಪನಿಯ ಕಲಾವಿದ ಯಾವ ಪಾತ್ರ ಮಾಡುತ್ತಿದ್ದ.? ಅವನು ಯಾಕ ಸತ್ತ ಏನಾಗಿತ್ತು.? ಎಂಬ ಬೃಹತ್ ಪ್ರಶ್ನೆ ಧುತ್ತೆಂದು ಝಳಪಿಸುತ್ತದೆ.
ನಿಜಕ್ಕೂ ಗತಿಸಿಹೋದ ಈ ದುರಿತ ಘಟನೆ ನೆನಪಾಗಿ ನನಗೆ ನಾನೇ ಸಣ್ಣದೊಂದು ಸಾಂತ್ವನಯುತ ಸಮಾಧಾನ ಮಾಡಿಕೊಂಡೆ. ದೇಶಕ್ಕಾಗಿ ಪ್ರಾಣವನ್ನೇ ತೆತ್ತ ದೇಶದ ಪ್ರಧಾನಮಂತ್ರಿ ರಾಜೀವಗಾಂಧಿ ಕುರಿತು ಅಂಥವರಿಗೇ ಇಂತಹ ಪ್ರಶ್ನೆ ಕೇಳಿದ ಪ್ರಭೃತಿಗಳನ್ನು ಹೊಂದಿದ ವರ್ಗಪ್ರಜ್ಞೆಯೊಂದಿಗೆ ಅನುಚರಿಸಬೇಕಾದ ನನಗೆ ಅಂಥವರು 'ಕಡಕೋಳ ಯಾವ ಕಂಪನಿ ಕಲಾವಿದ!? ನನ್ನ ಪ್ರಮುಖ ಪಾತ್ರ ಯಾವುದೆಂದು' ಕೇಳುವುದರಲ್ಲಿ ಯಾವ ಯತಾರ್ಥ ಮತ್ತು ಅಪಾರ್ಥದ ದುರುದ್ದೇಶ ಇದ್ದೀತೆಂಬ ಕೂದಲು ಸೀಳುವ ಕೆಲಸಕ್ಕಿಳಿಯಲಾರೆ. ಅಂತಹ ಋಣಾತ್ಮಕ ಕೆಲಸಗಳ ಹಿಂದೆ ಬಿದ್ದರೆ ನಾನು ಮಾಡಬೇಕಾದ ಮತ್ತು ಗುಣಾತ್ಮಕ ರಂಗಕೈಂಕರ್ಯಗಳಿಗೆ ಹಿನ್ನಡೆ ಉಂಟಾಗುತ್ತದೆಂಬ ಕಟ್ಟೆಚ್ಚರದಿಂದ ನನ್ನ ಪಾಡಿಗೆ ನಾನು ಕಾರ್ಯಪ್ರವೃತ್ತನಾಗುತ್ತೇನೆ. ದೊಡ್ಡ ದೊಡ್ಡ ಕನಸುಗಳನ್ನು ತುಂಬಿಕೊಂಡು ಮುನ್ನಡೆಯುವಾಗ ಸಣ್ಣ ಸಣ್ಣ ಅಡ್ಡಿಗಳಿಗೆ ಸೆಡ್ಡು ಹೊಡೆಯಬಾರದು. "ಬೇಕಾದರೆ ಬೆಳಕಿಲ್ಲದ ಹಾದಿಯಲ್ಲಿ ಸಾಗಬಲ್ಲೆ ಆದರೆ ಕನಸುಗಳಿಲ್ಲದ ಹಾದಿಯಲ್ಲಿ ಸಾಗಲಾರೆನೆಂಬ" ಗಿರೀಶ್ ಕಾರ್ನಾಡರ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ.
ಅಂದ್ಹಾಂಗ ದಾವಣಗೆರೆ ರಂಗಾಯಣದ ವ್ಯಾಪ್ತಿ ಕರ್ನಾಟಕದ ತುಂಬಾ ಮುವತ್ತೊಂದು ಜಿಲ್ಲೆಗಳಿಗೆ ಹರಡಿಕೊಂಡ ರಾಜ್ಯಮಟ್ಟದ್ದು. ಅದು ಆರಂಭದಲ್ಲಿ ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ, ರಂಗಶಿಕ್ಷಣ ಕೇಂದ್ರದ ಉದ್ದೇಶದಿಂದ ಮಂಜೂರಾತಿ ಪಡೆದುಕೊಂಡು ಹುಟ್ಟಿಕೊಂಡಿತ್ತು. ಸರಕಾರಗಳು ಬದಲಾಗಿ, ಬದಲಾಗಿ ಅದೀಗ "ವೃತ್ತಿ ರಂಗಭೂಮಿ ರಂಗಾಯಣ" ಶೀರ್ಷಿಕೆಯಿಂದ ಕಾರ್ಯಗತಗೊಂಡಿದೆ. ಒಂದು ಅವಧಿ ಪೂರೈಸಿಕೊಂಡ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಯಾವುದೇ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ದಾವಣಗೆರೆ ಜಿಲ್ಲಾಡಳಿತ ಭವನದ ಹನ್ನೆರಡು ಮತ್ತು ಹದಿನಾಲ್ಕು ಅಡಿಯ ಮುವತ್ತೆಂಟನೇ ನಂಬರಿನ ಕೊಠಡಿಯೇ ನನ್ನ ರಂಗಾಯಣದ ಸಮುಚ್ಛಯ.
ಹೀಗಿರುವಾಗ ನನ್ನ ಅವಧಿಯ ಮೊದಲ ಆದ್ಯತೆ ಮೂಲಭೂತ ಸೌಕರ್ಯಗಳ ನಿರ್ಮಾಣ ಮಾಡುವುದು ಆಗಿದೆ. ಹಾಗೆಂದು ಅದರಲ್ಲೇ ಪೂರ್ಣ ಸಮಯ ವಿನಿಯೋಗಿಸಿದರೆ ಮೂರು ವರ್ಷದ ಅವಧಿಯೇ ಮುಗಿದು ಹೋಗಬಹುದು. ಹೀಗಾಗಿ ಸುಸ್ಥಿರ ಸೌಕರ್ಯಗಳ ಸಿದ್ಧತೆಗಳೊಂದಿಗೆ ಸುಶೀಲ ರಂಗ ಚಟುವಟಿಕೆಗಳನ್ನು ಮಾಡಲು ಉತ್ಸುಕನಾಗಿ ಮೂರು ತಿಂಗಳು ಮುಗಿಯುವುದರೊಳಗೆ ನಾಲ್ಕು ಚೆಂದದ ಕಾರ್ಯಕ್ರಮಗಳನ್ನು ಮಾಡಿದ ಧನ್ಯತೆಯ ಆತ್ಮತೃಪ್ತಿ ನನ್ನದು.
ಮೊದಲ ಕಾರ್ಯಕ್ರಮವೇ ವೃತ್ತಿ ರಂಗಭೂಮಿ ಕುರಿತಾದ ರಾಜ್ಯಮಟ್ಟದ ವಿಚಾರ ಸಂಕಿರಣ. ಈಗ್ಗೆ ನಾಲ್ಕು ದಶಕಗಳ ಹಿಂದೆ ರೈತಜೀವಿಯಂತಹ ಕಂಪನಿ ನಾಟಕ ಆಡಿ ಹೆಸರು ಮಾಡಿದ್ದ ಅಂದಿನ ಗಂಗರಾಜು ಎಂಬ ಇಂದಿನ ಸಿನೆಮಾ ಸಂಗೀತಲೋಕದ ಸುಪ್ರಸಿದ್ಧರೆನಿಸಿರುವ 'ಹಂಸಲೇಖ' ಆಗಮಿಸಿ ಶುಭಕೋರಿ ಹಾರೈಸಿದರು. ಮುಖ್ಯವಾಗಿ ಸಾಣೇಹಳ್ಳಿ ಶಿವಸಂಚಾರದ ರಂಗಜಂಗಮ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ರಂಗಾಶೀರ್ವಾದ ದೊರಕಿತು. ಗದಗ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಪುಟ್ಟರಾಜ ಗವಾಯಿಗಳ ಅಜ್ಜರ ಕಂಪನಿಯ ಶಿವಶರಣೆ ಅಕ್ಕ ಮಹಾದೇವಿ ನಾಟಕ ಮನೋಜ್ಞ ಪ್ರೀತಿ ಹುಟ್ಟಿಸಿತು. ಅಲ್ಲಿ ಮೂಡಿಬಂದ ವಿಚಾರ ಸಂಕಿರಣದ ವಿಷಯಗಳು ಅರ್ಥಪೂರ್ಣ ಆಗಿದ್ದವು. ಸಾಧ್ಯಮಾಡಿಕೊಂಡು ವಿಚಾರ ಸಂಕಿರಣದಲ್ಲಿ ಮಂಡನೆಯಾದ ವಿಷಯಗಳನ್ನು ಪುಸ್ತಕ ರೂಪದಲ್ಲಿ ತರುವ ಇರಾದೆ ಇದೆ.
ನಂತರದಲ್ಲಿ ನಾನು ಹಮ್ಮಿಕೊಂಡ ಮಹತ್ವದ ಕಾರ್ಯಕ್ರಮವೆಂದರೆ ರಂಗಸಂಗೀತ ಅರ್ಥಾತ್ ರಂಗಗೀತೆಗಳ ಕಲಿಕಾ ಕಾರ್ಯಕ್ರಮದ ಕಾರ್ಯಾಗಾರ. ಈ ಕಾರ್ಯಕ್ರಮ ಎಲ್ಲರ ನಿರೀಕ್ಷೆ ಮೀರಿ ಹೊಸದೊಂದು ರಂಗ ಆಯಾಮಕ್ಕೆ ನಾಂದಿ ಹಾಡಿತು. ವಿಜಯನಗರ ಜಿಲ್ಲೆ ರಾಗಿಮಸಲವಾಡದಂತಹ ಕುರಿಕಾಯುವ ಹುಡುಗನಿಂದ ಹಿಡಿದು ದೂರದ ಗಡಿನಾಡು ಚಾಮರಾಜನಗರದ ಚಂದಕವಾಡಿಯ ಕಾಂತರಾಜು ಎಂಬ ಯುವಕನವರೆಗೆ ಮತ್ತು ಡಾಕ್ಟರೇಟ್ ಪದವಿ ಪಡೆದ ದಾವಣಗೆರೆ ಶಹರದ ಡಾ. ಶೃತಿರಾಜ್ ವರೆಗಿನ ಹದಿನೆಂಟು ಮಂದಿ ತರುಣ ತರುಣಿಯರಿಗೆ ಪರಂಪರೆಯ ರಂಗಸಂಗೀತ ಕಲಿಸಿದ್ದು ಕಾರ್ಯಾಗಾರದ ಹೆಗ್ಗಳಿಕೆ. ಅದು ಕುಂತು ಹಾಡುವ ಕಚೇರಿ ಅಲ್ಲ. ಅಭಿನಯಪೂರ್ವಕವಾಗಿ ಜರುಗಿದ ನಾಟ್ಯಸಂಗೀತ ಆಗಿತ್ತು. ಕೇವಲ ಹದಿನೇಳು ದಿನಗಳಲ್ಲಿ ಮನೋಜ್ಞವಾಗಿ ಕಲಿಸಿದ ರಾಘವ ಕಮ್ಮಾರ ಮತ್ತು ಡಾ. ಪ್ರಕಾಶ ಗರುಡ ಅವರಿಗೆ ಕೃತಜ್ಞತೆಗಳು ಸಲ್ಲಬೇಕು.
ಅದಾದ ಮೇಲೆ ಕರ್ನಾಟಕ ನಾಟಕ ಕಂಪನಿಗಳ ಪಿತಾಮಹ ಸಕ್ಕರಿ ಬಾಳಾಚಾರ್ಯ ಅವರು ಸ್ಥಾಪಿಸಿದ ಕೃತಪುರ ನಾಟಕ ಕಂಪನಿ ದಿನಾಚರಣೆ. ಅದೇ ವಾರದಲ್ಲಿ ಶ್ರೀಕೃಷ್ಣಸಂಧಾನ ಎಂಬ ನಗೆನಾಟಕ ಲೋಕಪ್ರೇಕ್ಷಕರನ್ನು ನಗೆಗಡಲಲಿ ತೇಲಿಸಿತು. ಇದೀಗ ಗಾಂಧಿಸ್ಮರಣೆ ರಂಗನಾಟಕದ ಸಿದ್ಧತೆ. ಬೆಳಗಾವಿಯಲ್ಲಿ ಈಗ್ಗೆ ಬರೋಬ್ಬರಿ ನೂರು ವರುಷಗಳ ಹಿಂದೆ ೧೯೨೪ ರಲ್ಲಿ ಕಾಂಗ್ರೆಸ್ ಅಧಿವೇಶನವು ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸವಿನೆನಪಿಗಾಗಿ ಗಾಂಧಿ ಸ್ಮರಣೆಯ ನಾಟಕದ ನಿರ್ಮಾಣ. ಅಂದಹಾಗೆ ಕನ್ನಡದ ಹೆಸರಾಂತ ರಂಗಗೀತೆ ಗಾಯಕಿ ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆ ಬೀಳಗಿಯ ರಂಗಕೋಗಿಲೆ ಅಮೀರಬಾಯಿ ಕರ್ನಾಟಕಿ ಗಾಂಧೀಜಿಯವರ ಮುಂದೆ ಕುಂತು ಹಾಡಿದ ವೈಷ್ಣವಜನತೋ ಪ್ರಾರ್ಥನೆಯನ್ನು ಸಮರ್ಥ ಹಾಗೂ ಸಾರ್ಥಕವಾಗಿ ಬಳಸಿಕೊಂಡು ನಾಟಕ ಕಟ್ಟುವ ಸಂಕಲ್ಪ. ಈ ನಾಟಕದ ತಿರುಗಾಟವು ಐದಾರು ಜಿಲ್ಲೆಗಳಲ್ಲಿ ಜರುಗಲಿದೆ. ಸರಕಾರ ಮತ್ತು ಸಹೃದಯರ ಸಹಕಾರ ಪ್ರೀತಿಗಳಿಂದ ಇದನ್ನೆಲ್ಲಾ ಮಾಡಲು ಸಾಧ್ಯವಾಗುತ್ತಲಿದೆ. ಈ ರಂಗ ಪ್ರೀತಿಯ ಬನಿ ಹೀಗೆ ಮುಂದುವರೆಯಲಿ.
- ಮಲ್ಲಿಕಾರ್ಜುನ ಕಡಕೋಳ
ಈ ಅಂಕಣದ ಹಿಂದಿನ ಬರಹಗಳು:
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.