Date: 14-11-2024
Location: ಬೆಂಗಳೂರು
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನೇ// ಎಂಬ ಲಾವಣ್ಯ ಭಾವ ಉಕ್ಕಿಸುವ ಜೀವಸಂವೇದನೆಯ ಆಲಾಪನೆಗಳು. ಇಂತಹ ಜೇನುಪ್ರೀತಿಯ ದ್ಯಾಸಗಡಲಿನಲಿ ನನ್ನನ್ನು ತೇಲಿಸಿ, ಮುಳುಗಿಸಿ ಬಿಟ್ಟವು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ‘ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ’ ಲೇಖನ ನಿಮ್ಮ ಓದಿಗಾಗಿ.
ನನ್ನ ನೆನಪುಗಳು ಮೂರು ದಶಕಗಳಷ್ಟು ಹಿಂದಕ್ಕೆ ಓಡಿದವು.
ಹಂದಿಗನೂರು ರವೀಂದ್ರ ಎಂಬ ಗಝಲ್ ಕಾಕಾನ ತತ್ವಪದಗಳ ಸಿರಿಕಂಠದ ಸವಿ ನೆನಹು. ಅಂದಿನ ರಂಗಸಂಘಟನೆ ಸಮುದಾಯದ ಸಂಗಾತಿ, ನನ್ನ ವಾರಗೆಯ ಹರೆಯದ ಯುವಗಾಯಕಿ, ನಮ‌್ಮ ಹೈದ್ರಾಬಾದ ಕರ್ನಾಟಕದ ಶಾಂತಾ ಕುಲಕರ್ಣಿ. ಆಕೆ ಹಾಡುತ್ತಿದ್ದ ಪಯಣದ ಹಾದಿಯು ಬಲುದೂರ/ ಹೋಗಿ ಬಾರಯ್ಯ ಸರದಾರ// ಎಂಬ ಹೋರಾಟದ ಮಧುರ ಹಾಡು. ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನೇ// ಎಂಬ ಲಾವಣ್ಯ ಭಾವ ಉಕ್ಕಿಸುವ ಜೀವಸಂವೇದನೆಯ ಆಲಾಪನೆಗಳು. ಇಂತಹ ಜೇನುಪ್ರೀತಿಯ ದ್ಯಾಸಗಡಲಿನಲಿ ನನ್ನನ್ನು ತೇಲಿಸಿ, ಮುಳುಗಿಸಿ ಬಿಟ್ಟವು.
ನಾನು ದಾವಣಗೆರೆ ರಂಗಾಯಣದ ನಿರ್ದೇಶಕನಾಗಿ ಹಮ್ಮಿಕೊಂಡ "ನಟನಮಯ ರಂಗಗೀತೆ ಕಲಿಕೆ ಅರ್ಥಾತ್ ಅಭಿನಯ ಸಂಗೀತ" ಎಂಬ ಹದಿನೇಳು ದಿನಗಳ ರಂಗಸಂಗೀತ ಕಮ್ಮಟ ಸಂಪನ್ನಗೊಂಡು ಇವತ್ತಿಗೆ ಮೂರು ದಿನಗಳು ಮುಗಿದಿವೆ. ನಲವತ್ತು ವರುಷಗಳ ಹಿಂದಿನ ನೆನಪುಗಳ ರಂಗವಲ್ಲಿ ಹೀಗೆ ಮನದ ತುಂಬಾ ತಳಕು ಹಾಕಿಕೊಂಡಿತು. ನಾಡಿನಾದ್ಯಂತ ಸಂದರ್ಶನಕ್ಕೆ ಆಗಮಿಸಿದ್ದವರಲ್ಲಿ ಹದಿನೆಂಟು ಮಂದಿ ಯುವಕ ಯುವತಿಯರು ಆಯ್ಕೆಗೊಂಡು ಮೂರೇ ದಿನಕ್ಕೆ ಮೈ ಚಳಿ ಬಿಟ್ಟು ಹಾಡ ತೊಡಗಿದರು. ನನಗಂತೂ ಹಂಡೆ ಹಾಲು ಕುಡಿದ ಖಂಡುಗ ಖುಷಿ. ಅವರೆಲ್ಲರೊಳಗಿನ ಸ್ವರಸಿರಿ, ಶೃತಿ, ತಾಳ ಜ್ಞಾನದ ನಾಡಿಮಿಡಿತ ಹುಡುಕಿಕೊಡುವ ದಿವ್ಯತೆಯ "ನಾದಸ್ಪರ್ಶ" ಮಾಡಿಸಿದವರು ನಾದ ಚಿಂತಾಮಣಿಯಂತಹ ತರುಣ ಗಾಯಕ ರಾಘವ ಕಮ್ಮಾರ. ಆತ ತನ್ನ ಅತ್ಯಾಕರ್ಷಕ ಶರೀರ ಮತ್ತು ಗಡ್ಡ ನೇವರಿಸುವ ಶಾರೀರದ ಮೂಲಕ ಅಗತ್ಯದ ಗೆಲುವು ಸಾಧಿಸಿದ್ದು ಮಾತ್ರ ಖರೇವಂದ್ರ ಖರೇವು. ರಾಘವ ರಾಗಾಲಾಪನೆಯಂತು ನಾಭಿಯಿಂದ ಅವತರಿಸಿ ಬರುವಂತಹದ್ದು. ಅಷ್ಟೇ ಅಲ್ಲ ಅದು ವಿಫಲ ಪ್ರೇಮದ ಮನೋನ್ಮಣಿ ಸ್ವರಾಲಾಪದ ಸುದೀಪ್ತ ಸಂವೇದನೆಗಳನ್ನು ಸಂಗೋಪನಗೊಳಿಸುವಂತಹದ್ದು.
ಅಂದಹಾಗೆ ರಾಘವ ಕಮ್ಮಾರ ಗದಗಿನ ವೀರೇಶ್ವರ ಪುಣ್ಯಾಶ್ರಮದ ದಿವಿನಾದ ಪ್ರತಿಭೆ. ಊರು ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ. ಇದು ಕನ್ನಡದ ಹೆಸರಾಂತ ವಿಮರ್ಶಕ, ರಂಗವಿದ್ವಾಂಸ ಪ್ರೊ. ಗಿರಡ್ಡಿ ಗೋವಿಂದರಾಜ ಅವರ ಹುಟ್ಟೂರು. ರಾಘವ ಆರಂಭಕ್ಕೆ ಅಪೂರ್ಣ ಮಾಡಿದ್ದು ಎಂಜಿನಿಯರಿಂಗ್ ಡಿಪ್ಲೊಮಾ. ತದನಂತರ ಬಹುಪಾಲು ಪ್ರಚಲಿತ ಸಂಗೀತ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಕಮ್ಮಾರ ಹಿಂದುಸ್ತಾನಿ ಸಂಗೀತ ಶಾಸ್ತ್ರ ವಿದ್ಯೆಯ ಸ್ನಾತಕೋತ್ತರ ಪದವೀಧರ. ಭಾರತ ತಂತ್ರಜ್ಞಾನ (ಐಐಟಿ) ಸಂಸ್ಥೆಯ ಅತಿಥಿ ಉಪನ್ಯಾಸಕ. ಎಂಟ್ಹತ್ತು ವರ್ಷಗಳ ಕಾಲ ಧಾರವಾಡ, ಮೈಸೂರು ರಂಗಾಯಣ ಹಾಗೂ ರಾಷ್ಟ್ರೀಯ ನಾಟಕ (NSDಬೆಂಗಳೂರು) ಶಾಲೆಯಲ್ಲಿ ರಂಗಸಂಗೀತ ಬೋಧನೆ ಮಾಡಿದ ಪುಳಕದಾಯಕ ಅನುಭವ.
ಹತ್ತಾರು ವಾದ್ಯಗಳನ್ನು ಅಭಿಜಾತ ಶೈಲಿಯಲ್ಲಿ ನುಡಿಸಬಲ್ಲ ನುಡಿನಿಪುಣ. ಶಾಸ್ತ್ರೀಯ ಸಂಗೀತದ ಪ್ರಖರ ಅಭ್ಯಾಸಿ ರಾಘವ ರಂಗಸಂಗೀತದ ಪ್ರವೀಣ. ಉತ್ತರಾದಿ, ದಕ್ಷಿಣಾದಿ ಮತ್ತು ಸಮಗ್ರ ಕರ್ನಾಟಕದ ರಂಗಗೀತೆಗಳ ಲಯ, ಸ್ವರಗಳಿಗೆ ಕೊರಳಾಗುವ ಸಿರಿ ಸಂಪನ್ನತೆ. ತತ್ಸಂಬಂಧದ ಅಭಿನಯ ಸಂಗೀತದ ಸುಂದರ ರೂಪಕಗಳನ್ನು ನಮ್ಮ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ರೂಪಿಸಿ ಕೊಟ್ಟಿದ್ದಾನೆ. ಪ್ರಸ್ತುತ ಇವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟ್ಯಸಂಗೀತದ ಪ್ರಾತಿನಿಧಿಕ ಮತ್ತು ಧೇನಸ್ಥ ಪ್ರೀತಿಯ ದಿಕ್ಸೂಚಿ ಪ್ರಯೋಗಗಳು.
ರಂಗಗೀತೆಗಳ ಕಲಿಕಾ ಕಾರ್ಯಾಗಾರದ ಮತ್ತೊಂದು ವಿಶೇಷವೆಂದರೆ ಅಭಿನಯ. ಅದನ್ನು ಆಗು ಮಾಡಿದವರು ಸನ್ಮಿತ್ರ ಡಾ. ಪ್ರಕಾಶ ಗರುಡ. ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರಾದ ಗರುಡ ಸದಾಶಿವರಾಯರ ಮೊಮ್ಮಗ ನಮ್ಮ ಪ್ರಕಾಶ ಗರುಡ. ಆತ ಆಧುನಿಕ ರಂಗಭೂಮಿಯ ಹಿರಿಯ ರಂಗನಿರ್ದೇಶಕರು. ಅವರು ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದಾಗ ತಮ್ಮ ತಾತನ "ಶ್ರೀರಾಮ ಪಾದೂಕಾ ಪಟ್ಟಾಭಿಷೇಕ" ನಾಟಕವನ್ನು ವಿನೂತನ ಶೈಲಿಯಲ್ಲಿ ರಂಗಕ್ಕೆ ತಂದವರು. ನೀನಾಸಂ ತಿರುಗಾಟ, ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ನಿರ್ದೇಶಕರಾಗಿ ರಂಗಸೇವೆಗೈಯ್ದ ಅನುಭವ. ಪ್ರಸ್ತುತ ಅವರು ನಮ್ಮ ಶಿಬಿರಾರ್ಥಿಗಳಿಗೆ ಅಭಿನಯ ತರಬೇತಿಯ ಶಿಸ್ತನ್ನು ಕಲಿಸಿಕೊಟ್ಟರು.
ಒಟ್ಟಾರೆ ರಂಗಸಂಗೀತ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ಜರುಗಿ ಪ್ರದರ್ಶನವಂತೂ ನಿರೀಕ್ಷೆ ಮೀರಿ ಗೆಲುವು ಸಾಧಿಸಿತು. ಅಭಿನಯ ಸಂಗೀತ ಕಾರ್ಯಕ್ರಮ ಹೊಸದೊಂದು ರಂಗಪ್ರವೇಶಕ್ಕೆ ಸುಂದರ ನಾಂದಿ ಹಾಡಿತು. ಕಲಿಸಿದ ಈ ಇಬ್ಬರಿಗೂ ದಾವಣಗೆರೆ ರಂಗಾಯಣದ ಕೃತಜ್ಞತೆಗಳು ಸಲ್ಲಬೇಕು. ಒರಿಜಿನಲ್ ದೇಶಭಕ್ತಿ, ಅವಿಭಜಿತ ಕುಟುಂಬ ಪ್ರೀತಿ, ಜಾತಿ ನಿರಸನ ಪ್ರೀತಿಯನ್ನು ನಿರ್ವಚಿಸಿದ್ದು ವೃತ್ತಿ ರಂಗಭೂಮಿ. ಅಂತಹ ಪರಂಪರಾಗತ ಪ್ರಕಾರವೊಂದು ರಂಗಗೀತೆಗಳ ಮಹತ್ತನ್ನು ಮೆರೆದ ಐತಿಹ್ಯ ನೆನಪಿಸುವ ಇದು ಅಕ್ಷರಶಃ ಹಳವಂಡವೇನಲ್ಲ. ಆದರೆ ದಾವಣಗೆರೆ ರಂಗಾಯಣ ಕಂಡುಕೊಳ್ಳಬೇಕಾದ 'ಸ್ವರೂಪ ಪ್ರಜ್ಞೆಗೆ' ದಕ್ಕಿದ ಅತ್ಯಗತ್ಯದ ಆವಿಷ್ಕಾರವೆಂದು ನಿರ್ದೇಶಕನಾಗಿ ನಾನಂತೂ ಭಾವಿಸಿದ್ದೇನೆ.
ಏಕೆಂದರೆ ದಾವಣಗೆರೆ ರಂಗಾಯಣದ ನಿರ್ದೇಶಕನಾಗಿ ಬರುವ ಮೊದಲ ನಾನು ಕಂಡುಂಡ ಅದರ ಸುಂದರ ಮತ್ತು ವಿಮುಕ್ತ ಕನಸುಗಳ ಪೈಕಿ ರಂಗಸಂಗೀತ ಪರಂಪರೆಯ ವಿನ್ಯಾಸ ಪ್ರಮುಖವಾಗಿತ್ತು. ಇದಕ್ಕೆ ಮೊದಲು ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನಾಕೇಂದ್ರ ಎಂಬ ಟ್ಯಾಗ್ ಲೈನ್ ಹೊತ್ತ "ವೃತ್ತಿ ರಂಗಭೂಮಿ ಕೇಂದ್ರ" ಎಂದು ಮಂಜೂರಾತಿ ಪಡೆದಿತ್ತು. ಅದುವೇ "ವೃತ್ತಿ ರಂಗಭೂಮಿ ರಂಗಾಯಣ" ಎಂದು ಚಾಲತಿಗೆ ಬಂದು ಇದೀಗ ಎರಡನೇ ಅವಧಿ. ಮೈಸೂರು ಮಾದರಿಯ ಇತರೆ ರಂಗಾಯಣಗಳಿಗಿಂತ ದಾವಣಗೆರೆಯದು ತುಸು ಭಿನ್ನ ಮಾದರಿ. ಅದಕ್ಕೆ ತನ್ನ ಸ್ವಸ್ವರೂಪ ಕಂಡುಕೊಳ್ಳುವ ಮತ್ತು ಹಲವು ಹೊಸ ಸವಾಲುಗಳಿಗೆ ಸಂವಾದಿಯಾಗುವ ಪರೀಕ್ಷಕ ಕಾಲಘಟ್ಟ. ಮುಖ್ಯವಾಗಿ ಸದಭಿರುಚಿ ರಂಗ ಪರಂಪರೆಯ ಒಳನೋಟ ಮತ್ತು ಪ್ರಯೋಗಶೀಲತೆ, ಈ ಎರಡರ ಆನುಷಂಗಿಕ ಸಮನ್ವಯತೆಯ ಹುಡುಕಾಟ.
ಹಾಗೆ ನೋಡಿದರೆ ಅದೇನು ಹೊಸ ಸವಾಲು ಆಗಿರದು. ವೃತ್ತಿ ನಾಟಕಗಳು 'ಪ್ರಯೋಗ' ಬಾಹುಳ್ಯದಿಂದಲೇ ಲೋಕ ಮೀಮಾಂಸೆಯ ಪ್ರಸಿದ್ಧಿ ಪಡೆದಿವೆ. ಆದರೆ ಹೊಸತು ಸ್ವೀಕೃತ ಆಗುವಾಗ ಹಳತು ನಿರಾಕೃತವಲ್ಲ. ತಾಯಿಬೇರು ಇಲ್ಲದೇ ಅಭಿವೃದ್ಧಿ ದುಃಸಾಧ್ಯ. ಮುಖ್ಯವಾಗಿ ನಟ ನಟಿ ಪ್ರಣೀತ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ, ರಂಗಸಜ್ಜಿಕೆ ಪರಂಪರೆ. ಹೀಗೆ ಮೂರು ಪ್ರಮುಖ ಪರಂಪರೆಗಳ ಆಡುಂಬೊಲವೇ ವೃತ್ತಿ ರಂಗಭೂಮಿ. ಅದು ಜನಸಾಮಾನ್ಯರ ಲೋಕೋಪಯೋಗಿ ಸಮಾಹಿತದ ರಂಗಭೂಮಿ. ಅರಮನೆ, ಗುರುಮನೆಗಳಿಗೆ ಸೀಮಿತವಾಗಿದ್ದ ಶಾಸ್ತ್ರೀಯ ಸಂಗೀತ, ನಾಟ್ಯ ಕಲೆಗಳನ್ನು ಜನಸಾಮಾನ್ಯರ ಬಳಿಗೆ ತಂದು ಜನಸಂಸ್ಕೃತಿಯಾಗಿಸಿದ್ದು ವೃತ್ತಿ ರಂಗಭೂಮಿ. ಕಂಪನಿಗಳ ಹೆಸರಲ್ಲೇ 'ನಾಟ್ಯಸಂಗೀತ'ದ ಭವ್ಯತೆ ಇತ್ತು.
ನಾಟಕ ಕಂಪನಿಗಳು ಸಂಗೀತದ ಗರಡಿಮನೆಗಳಂತಿದ್ದವು. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಅಮೀರಬಾಯಿ ಮತ್ತು ಗೋಹರಬಾಯಿ ಕರ್ನಾಟಕಿ ಸೋದರಿಯರು ಇಂತಹ ಸಂಗೀತ ಗರಡಿಗಳಿಂದಲೇ ಬಂದ ಗಾರುಡಿಗರು. ಮರಾಠಿಯ ವ್ಯವಸಾಯ ರಂಗಭೂಮಿಯಲ್ಲಂತೂ ರಂಗಸಂಗೀತದ ನಿತಾಂತ ಪರಂಪರೆಯೇ ಇದೆ. ಅಣ್ಣಾಸಾಹೇಬ ಕಿರ್ಲೋಸ್ಕರ್, ಖಾಡಿಲ್ಕರ್, ಹೀರಾಬಾಯಿ ಬಡೋದೇಕರ್ ಒಳಗೊಂಡ ಪ್ರಸಿದ್ಧ ಗಾಯಕ ಪರಂಪರೆಯ ಪಟ್ಟಿಯೇ ಇದೆ. ಹಿಂದೊಂದು ಕಾಲಕ್ಕೆ ಬಹುತೇಕ ನಾಟಕ ಕಂಪನಿಗಳು ಇವತ್ತಿನ ರೆಪರ್ಟರಿ, ರಂಗಾಯಣಗಳ ಸಮಾನ ಮೌಲಿಕತೆ ಮೆರೆದಿವೆ. ಅಂದಿನ ಸದಭಿರುಚಿ ರಂಗಸಂಸ್ಕೃತಿಯ ಅನನ್ಯ ಸೂಕ್ಷ್ಮತೆಗಳನ್ನು ಮರು ರೂಪಿಸುವ ಕಾಲದ ಅಗತ್ಯ ಇಂದಿನದು.
ಪ್ರಸ್ತುತ ಕಂಪನಿಗಳು ಮತ್ತು ಹವ್ಯಾಸಿಗಳ ವೃತ್ತಿ ರಂಗಭೂಮಿ ಪ್ರಕಾರ ಅಂದಿನ "ರಂಗಜೀವಸತ್ವ" ಇಂದು ಉಳಿಸಿಕೊಂಡಿಲ್ಲ. ವೃತ್ತಿರಂಗ ಪ್ರಾಕಾರಕ್ಕೆ ಆತ್ಮವಿಮರ್ಶೆಯ ಸಮಯ. ವರ್ತಮಾನದ ಹಲವು ಅಪಸವ್ಯಗಳ ನಡುವೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ತನ್ನ ಸ್ವರೂಪ ರೂಪಿಸಿಕೊಳ್ಳಲು ಬೇರು ಪರಂಪರೆಯ ಧಾರೆಗಳೊಂದಿಗೆ ಅನುಸಂಧಿಸುವ ಆಶಯ. ಆ ದೆಸೆಯಲ್ಲಿ ಪ್ರಸ್ತುತ ರಂಗಸಂಗೀತ - ರಂಗಗೀತೆಗಳ ಕಲಿಕಾ ಕಾರ್ಯಾಗಾರ. ಇದು ಅಭಿನಯ ಸಂಗೀತದ ಕಮ್ಮಟ. ಅಭಿನಯ ಪೂರ್ವಕ ರಂಗಗೀತೆ ರೂಪಕಗಳ ಪ್ರಸ್ತುತಿ. ಇವು ಕಟ್ಟಿಕೊಡುವ ಅಪ್ಡೇಟ್ಸ್ ನಮ್ಮ ಮುಂದಿನ ಹಾದಿಗೆ "ತೋರುದೀಪ" ಆಗಬಲ್ಲವೆಂಬ ಅದಮ್ಯ ಕನಸು. ಹಾಡುನಟನೆಯ ರಂಗ ರೂಪಕಗಳನ್ನು ಕಾಣುವ ಮತ್ತು ಕೇಳುವ ಸೊಗಸೇ ಬಲುಚೆಂದ. 07.11.2024 ರಂದು ಸಂಜೆ ದಾವಣಗೆರೆಯ ಜಯದೇವ ಸರ್ಕಲ್ ಬಳಿ ಇರುವ ಶಿವಯೋಗ ಮಂದಿರದಲ್ಲಿ ಜರುಗಿದ ಅಭಿನಯಪೂರ್ವಕ ರಂಗಗೀತೆಗಳ ಪ್ರದರ್ಶನ ಹೊಸದೊಂದು ರಂಗ ಆಯಾಮಕ್ಕೆ ಸಾಕ್ಷಿಯಾಯಿತು.
ಈ ಅಂಕಣದ ಹಿಂದಿನ ಬರಹಗಳು:
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ಇವರನ್ನು ಸು.ರಂ ಎಕ್ಕುಂಡಿಯವರು ಸಂಕೀರ್ಣ ಕವಿ, ಮತ್ತು ಕೆಂಪು ಕವಿ ಎಂದು ಕರೆದರೆ, ವಿಮರ್ಶಕರು ಇವರನ್ನು ಸ...
©2024 Book Brahma Private Limited.