Date: 25-12-2024
Location: ಬೆಂಗಳೂರು
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂತೆ ಕನಿಷ್ಠ ಪ್ರಮಾಣದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಹನ್ನೆರಡು ಮತ್ತು ಹದಿನಾಲ್ಕು ಫೂಟು ಅಳತೆಯ ದಾವಣಗೆರೆ ಜಿಲ್ಲಾಡಳಿತ ಭವನದ ಕೊಠಡಿಯೊಂದೇ ನನಗಿರುವ ರಂಗಾಯಣದ ಪೂರ್ಣ ಕ್ಯಾಂಪಸ್," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ನಾಟಕ ಕರ್ನಾಟಕ' ಪುಸ್ತಕದ ಬಗೆಗಿನ ಅವರ ಮಾತುಗಳು...
ನಾಟಕ - ಕರ್ನಾಟಕ, ಇದು ನನ್ನ ಹೊಸ ಪುಸ್ತಕ. ರಂಗಭೂಮಿ ಕುರಿತು ಪ್ರಕಟಿಸುತ್ತಿರುವ ಇದು ನನ್ನ ಆರನೇ ಕೃತಿ. ಕಳೆದ ಕೆಲವು ವರುಷಗಳಲ್ಲಿ ಬೇರೆ ಬೇರೆ ಮುದ್ರಣ ಪತ್ರಿಕೆಗಳು ಮತ್ತು ವೆಬ್ ಸೈಟ್ ನಿಯತಕಾಲಿಕಗಳಿಗೆ ನಾನು ಬರೆದ ಆಯ್ದ ಇಪ್ಪತ್ತಾರು ವಸ್ತುನಿಷ್ಠ ಬರಹಗಳು ಈ ಕೃತಿಯಲ್ಲಿವೆ. ಕಲಬುರ್ಗಿಯ ಕರ್ನಾಟಕ ಸಂಧ್ಯಾಕಾಲ ಸಂಜೆ ದೈನಿಕದ "ಮುಖಾಬಿಲೆ" ಅಂಕಣ, ಬುಕ್ ಬ್ರಹ್ಮ ಡಿಜಿಟಲ್ ಪತ್ರಿಕೆಯ "ರೊಟ್ಟಿಬುತ್ತಿ" ಅಂಕಣ ಸೇರಿದಂತೆ ಪ್ರಜಾವಾಣಿ, ವಿಜಯವಾಣಿ, ಈದಿನ ಮೊದಲಾದ ಪತ್ರಿಕೆಗಳಲ್ಲಿ ನಾನು ಆಗಾಗ ಬರೆದ ರಂಗಸಂಸ್ಕೃತಿಗಳ ಕುರಿತಾದ ಬರಹಗಳ ಗುಚ್ಛವೇ 'ನಾಟಕ - ಕರ್ನಾಟಕ' ಪುಸ್ತಕ. ಸರ್ಕಾರ ಮತ್ತು ಸಂಬಂಧಿತ ಇಲಾಖೆ, ಸರ್ಕಾರಿ ಅಂಗಸಂಸ್ಥೆಗಳು ಆಚರಣೆಗೆ ತರುತ್ತಿರುವ ಸಾಂಸ್ಕೃತಿಕೇತರ ನೀತಿ ಮತ್ತು ಅಪಸವ್ಯಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಜೀವಚೈತನ್ಯಗಳ ಸೂಕ್ಷ್ಮಶೋಧವೇ ಈ ಬರಹಗಳ ಬಹುಪಾಲು ಒಳಹೇತು. ಹಾಗೆಯೇ ಕೆಲವು ವಿಪರೀತ ವಿನ್ಯಾಸಗಳ ಅನಾವರಣ.
ಅದನ್ನು ಆಗಾಗ ಆಯಾಚಿತವಾಗಿ ಬಯಲುಗೊಳಿಸುತ್ತಾ, ಬೆಂಗಳೂರು ಕೇಂದ್ರಿತ ಅಘೋಷಿತ 'ಹೈ ಕಮಾಂಡ್' ಮಾದರಿ ಸಾಂಸ್ಕೃತಿಕ ಲೋಕದ ಮೇಲೆ ಚಿಕಿತ್ಸಕ ಚುರುಕು ಚೆಲ್ಲುವ ಕೆಲವು ಬರಹಗಳು ಸಹಿತ ಇಲ್ಲಿವೆ. ಈ ಎಲ್ಲ ಬರಹಗಳನ್ನು ಓದಿ "ವರ್ತಮಾನದ ಕನ್ನಡಿಯಲ್ಲಿ ಕನ್ನಡ ರಂಗಸಂಸ್ಕೃತಿ" ಎಂಬ ಮಹತ್ವದ ಮುನ್ನುಡಿ ಬರೆದ ಸನ್ಮಿತ್ರರಾದ ಡಾ. ಕೆ. ವೈ. ನಾರಾಯಣಸ್ವಾಮಿ ಅವರಿಗೆ ಮೊದಲಿಗೇ ಮನದುಂಬಿ ಆಭಾರಿಯಾಗಿದ್ದೇನೆ. ಅವರು ಬರೆದ ಮುನ್ನುಡಿಯಲ್ಲಿ ನನಗೆ ಅಗ್ನಿಪರೀಕ್ಷೆಯ ಮಾತೊಂದನ್ನು ಹೇಳಿದ್ದಾರೆ. ಅದೇನಪಾಂದ್ರೆ, ನಾನೀಗ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕನೆಂದು ಕರ್ನಾಟಕ ಸರ್ಕಾರ ನನ್ನನ್ನು ನೇಮಿಸಿದೆ. ಹೊರಗಡೆ ನಿಂತು ವ್ಯವಸ್ಥೆಯನ್ನು ನಿಕಷಕ್ಕೊಡ್ಡುವ ನನಗೀಗ ವ್ಯವಸ್ಥೆಯ ಭಾಗವಾಗಿ ಸತ್ವ ಪರೀಕ್ಷೆಯ ಕಾಲವೆಂದು ಅವರು ಎಚ್ಚರಿಸಿದ್ದಾರೆ. ಇದು ಸ್ವಾಗತಾರ್ಹ ಎಚ್ಚರಿಕೆ.
ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂತೆ ಕನಿಷ್ಠ ಪ್ರಮಾಣದ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಹನ್ನೆರಡು ಮತ್ತು ಹದಿನಾಲ್ಕು ಫೂಟು ಅಳತೆಯ ದಾವಣಗೆರೆ ಜಿಲ್ಲಾಡಳಿತ ಭವನದ ಕೊಠಡಿಯೊಂದೇ ನನಗಿರುವ ರಂಗಾಯಣದ ಪೂರ್ಣ ಕ್ಯಾಂಪಸ್. ಈ ಕೊರತೆ ನೀಗಲು ಕೂಡಲೇ 'ಇನ್ ಫ್ರಾಸ್ಟ್ರಕ್ಚರ್' ಅಭಿವೃದ್ಧಿಗೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರೆ ನಾನು ಕಂಡ ಅದಮ್ಯ ರಂಗಕನಸುಗಳ ಸಾಕಾರಕ್ಕೆ ಅವಕಾಶ ಕಮ್ಮಿಯಾದೀತೆಂಬ ಚುಳುಕಾದ ಆತಂಕ. ಅಷ್ಟೇ ಯಾಕೆ ಅನುದಾನದ ಕೊರತೆಯಿಂದಾಗಿ ನಾಲ್ಕು ತಿಂಗಳು ಕಳೆದರೂ ಓಡಾಡಲು ಕಾರನ್ನು ಸಹಿತ ಹೊಂದಲು ಹಿಂದೇಟು ಹಾಕುತ್ತಿರುವೆ. ಆ ಹಣದಲ್ಲಿ ಪುಟ್ಟ ರಂಗ ಚಟುವಟಿಕೆ ಮಾಡಬಹುದೆಂಬ ಹುಚ್ಚು ಉಮೇದು.
ಅಂದಹಾಗೆ ದಾವಣಗೆರೆಯ ಹೊಸ ರಂಗಾಯಣಕ್ಕೆ ತನ್ನ ಸ್ವರೂಪ ರೂಪಿಸಿಕೊಳ್ಳುವ ಮೊಟ್ಟ ಮೊದಲ ಅಗತ್ಯ. ಅದು ರೆಪರ್ಟರಿ ಆಗಿ ಕ್ರಿಯಾಶೀಲಗೊಳ್ಳುವುದಾದರೆ ಕಲಾವಿದರ ಆಯ್ಕೆ ಮತ್ತು ಅವಧಿ ಕುರಿತು, ಅಭಿನಯ ಮಾದರಿ ಕುರಿತು ತೀಕ್ಷ್ಣನಿರ್ಧಾರಗಳ ಅಗತ್ಯವಿದೆ. ರಂಗಶಿಕ್ಷಣದ ರಂಗಪಠ್ಯ ಕಲಿಕೆ ವಿಧಾನದ ಬಗ್ಗೆ ಸಾಕಷ್ಟು ತಯಾರಿಗಳು ಬೇಕಿದೆ. ಏಕೆಂದರೆ ಮೈಸೂರು ರಂಗಾಯಣ ಮಾದರಿಯನ್ನೇ ಇತರೆ ರಂಗಾಯಣಗಳು ಅನುಕರಿಸುತ್ತಿರುವಾಗ ವೃತ್ತಿ ರಂಗಭೂಮಿ ರಂಗಭೂಮಿ ರಂಗಾಯಣವೂ ಅದನ್ನೇ ಅನುಕರಿಸಬೇಕೆ.,? ಈಗ ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದ ಸವಾಲಿನ ಸಮಯ. ಅದು ಬಹುಪಾಲು ಸವಾಲುಗಳಿಗೆ ಪರಿಶೋಧದ ಉತ್ತರವೂ ಆದೀತು. ಇನ್ನುಳಿದ ಐದು ರಂಗಾಯಣಗಳ ಸಾಲಲ್ಲಿ ಇದರ ಗುರುತಿಲ್ಲ. ದಾವಣಗೆರೆ ರಂಗಾಯಣದ ಅಸ್ಮಿತೆಯನ್ನು ಕಾಯಕಲ್ಪ ಯೋಜನೆಯಲ್ಲಿ ಗುರುತಿಸಿ ಸರ್ಕಾರ ಕೇವಲ ಇಪ್ಪತ್ತೈದು ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಿದೆ. ಆ ಮೂಲಕ ನಾಟಕ ಕಂಪನಿಗಳ ಅನ್ನದ ಜೋಳಿಗೆಗೆ ಕೈ ಹಾಕಿದೆವೇನೋ ಎಂಬ ಪಾಪಪ್ರಜ್ಞೆ ನನ್ನದು. ಇನ್ನುಳಿದಂತೆ ರಂಗಾಭ್ಯುದಯ ಮಾಡಬೇಕೆನ್ನುವುದಾದರೆ ವರ್ತಮಾನದ ನಾಟಕ ಕಂಪನಿಗಳನ್ನು ಬದಿ ಮಾದರಿಯಾಗಿಸಿಕೊಳ್ಳುವುದು ಸೇರಿದಂತೆ ಸಾಮಾನ್ಯ ಸಮುದಾಯ ಪ್ರಜ್ಞೆಯುಳ್ಳ ಪ್ರೇಕ್ಷಕ ಪರಂಪರೆಯ ಜನಪ್ರಿಯ ರಂಗಮಾದರಿಗಳು ಕೂಡಾ ಬೇಕಿದೆ.
ಮತ್ತೊಂದು ಕಡೆ ಅದಕ್ಕೆ ಹೊಯ್ ಕೈಯಾದಂತೆ ವೈಚಾರಿಕ ನಿಲುವಿನ ಪ್ರಯೋಗಶೀಲತೆಯ ಆಧುನಿಕ ಮಾದರಿ ಮತ್ತು ಪರಂಪರಾಗತ ರಂಗಮೌಲ್ಯಗಳು ನನ್ನನ್ನು ಕಾಡುತ್ತಲಿವೆ. ಇವೆಲ್ಲವುಗಳ ಸಂಕೀರ್ಣ ಸಂವೇದನೆಗಳಿಂದ ಸೇರಿಸಿಯೇ ದಾವಣಗೆರೆ ರಂಗಾಯಣದ ಸ್ವರೂಪ ಸೃಷ್ಟಿಗೊಳ್ಳಬೇಕಿದೆ. ಹೌದು ರಂಗಭೂಮಿ ಎಂಬುದೇ ಸಮೂಹ ಕಲೆ. ಸಮೂಹ ಪ್ರಜ್ಞೆಯಿಂದಲೇ ಅದರ ಸೃಷ್ಟಿಕ್ರಿಯೆ ರೂಪುಗೊಳ್ಳುವುದು ಹೆಚ್ಚು ಅರ್ಥಪೂರ್ಣ.
ಹೇಳಲೇ ಬೇಕಾದ ಸಂಗತಿಯೊಂದಿದೆ. ಅದೇನೆಂದರೆ "ವೃತ್ತಿ ರಂಗಭೂಮಿ ವರ್ತಮಾನದ ಸವಾಲುಗಳು" ವಿಷಯದ ಮೇಲೆ ಫೆಲೋಶಿಪ್ ಸಂಶೋಧನೆಗೆಂದು ನಾನು ಕರ್ನಾಟಕದ ತುಂಬಾ ತಿರುಗಾಡಿದೆ. ಕ್ಷೇತ್ರ ಕಾರ್ಯದ ಅಧ್ಯಯನ ಮಾಡುವಾಗ ನನಗೆ ಎದುರಾದ ಸಂಗತಿಗಳು ಹತ್ತು ಹಲವು. ಅಂದಹಾಗೆ ಅವುಗಳಿಂದ ದಕ್ಕಿಸಿಕೊಂಡ ಅನುಭವದ ಕೆಲವು ಆಕರ ವಸ್ತುಗಳು ಇಲ್ಲಿವೆ. ಅಂತಹ ಕೆಲವು ಅನುಭವಜನ್ಯ ಕಟುಸತ್ಯಗಳನ್ನು ಈ ಕೃತಿಯಲ್ಲಿ ದಿಟ್ಟವಾಗಿಯೇ ಕಟ್ಟಿಕೊಟ್ಟಿದ್ದೇನೆಂದು ಮುನ್ನುಡಿಕಾರರೇ ಮುಲಾಜಿಲ್ಲದಂತೆ ಹೇಳಿದ್ದಾರೆ. ಅಷ್ಟಕ್ಕೂ ಅಸಹಿಷ್ಣುಕೋರರ ದಾಳಿ ಎದುರಿಸುವ ರೋಗನಿರೋಧಕತೆ ಬಲಗೊಂಡಿದ್ದು ಅಂತಹ ಪ್ರತಿರೋಧಕ ಅನುಭವಗಳಿಂದ ಗಟ್ಟಿಗೊಂಡಿದ್ದೇನೆ. ಏಕೆಂದರೆ ಮನಸಾಕ್ಷಿಯಾಗಿ ಅಭಿವ್ಯಕ್ತಿಸದೇ ಹೋದರೆ ಅದು ರಂಗಭೂಮಿಗೆ ಬಗೆಯುವ ದ್ರೋಹವೂ ಆದೀತೆಂಬ ಕಟ್ಟೆಚ್ಚರ ಕಾಡುತ್ತಲಿದೆ.
ಮುಂದುವರೆದು ಹೇಳುವುದಾದರೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ರಂಗ ಸಮಾಜದ ಸದಸ್ಯನಾಗಿ ಕೆಲಸ ಮಾಡುವಾಗ ನಿರುಕಿದ ಅನುಭವಗಳು ಸಹಿತ ಇಲ್ಲಿನ ಬರಹದ ವಸ್ತುಗಳಾಗಿವೆ. ವೃತ್ತಿ ರಂಗಭೂಮಿ ಮಾತ್ರವಲ್ಲದೆ ಆಧುನಿಕ ರಂಗಭೂಮಿಯ ಅನೇಕ ವಿಸಂಗತಿಗಳು ಕೂಡಾ ಇಲ್ಲಿ ಚರ್ಚೆಗೆ ವಸ್ತುವಾಗಿವೆ. ಅಷ್ಟೇ ಏನು ಜಾನಪದ ರಂಗಭೂಮಿಯ ಮೂಡಲಪಾಯ, ಯಕ್ಷಗಾನ, ದೊಡ್ಡಾಟ, ಬಯಲಾಟಗಳು ನನ್ನ ರಂಗಸಂವೇದನೆಗಳನ್ನು ಜಾಗರಗೊಳಿಸಿವೆ. ಕ್ಷಮೆ ಇರಲಿ, "ನಾಟಕ - ಕರ್ನಾಟಕ" ಕೃತಿ ಪ್ರವೇಶಿಕೆ ಸಂದರ್ಭದಲ್ಲಿ ಇಷ್ಟೆಲ್ಲ ಆನುಷಂಗಿಕವಾಗಿ ಎಂಬಂತೆ ಪ್ರಾಂಜಲ ಮನಸಿನಿಂದ ಹೇಳಬೇಕಾಯಿತು.
ಹೌದು ಸಮಗ್ರ ರಂಗಭೂಮಿಯ ಹಲವು ಸವಾಲುಗಳೊಂದಿಗೆ ನಿಕಟವಾಗಿ ಒಡನಾಡುತ್ತಿರುವ ಇದು ನನಗೆ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ. ಕಳೆದ ಕೆಲವು ವರುಷಗಳಿಂದ ನಾನು ಇವುಗಳನ್ನು ವಿವಿಧ ಮಾಧ್ಯಮಗಳಿಗೆ ಬರೆಯುವಾಗ ಸಹಿತ ಸಾಕಷ್ಟು ಚಿಂತನೆಗೈಯ್ದೇ ಬರೆದ ದಟ್ಟ ನಂಬುಗೆ ನನ್ನದು. ಆಗ ಬಂದಿರುವ ಕೆಲವು ಪ್ರತಿಕ್ರಿಯೆಗಳು ನನಗೀಗಲೂ ಬರಬಹುದು. ಅದೇನೇ ಇರಲಿ, ದಾವಣಗೆರೆ ರಂಗಾಯಣದ ನಿರ್ದೇಶಕ ಆಗುವ ಮೊದಲೇ ಬರೆದ ಇವುಗಳು ನನಗೀಗ ಸವಾಲಿನಂತೆ ಭಾಸವಾಗುತ್ತಲಿವೆ. ಸವಾಲುಗಳಿಗೆ ಮುಖಾಮುಖಿಯಾದಾಗಲೇ ಪರಿಹಾರದ ದಾರಿಗಳು ಸರಳ ಮತ್ತು ಸುಲಭ ಆಗಬಲ್ಲವು ಎಂಬ ಬಲಾಢ್ಯ ನಂಬುಗೆಯು ನನ್ನದಾಗಿದೆ.
ಈ ಲೇಖನಗಳನ್ನು ಪ್ರಕಟಿಸಿದ ವಿವಿಧ ಪತ್ರಿಕೆಗಳಿಗೆ ಋಣಿಯಾಗಿದ್ದೇನೆ. ನನ್ನ ಬರಹಗಳನ್ನು ಆಸ್ಥೆಯಿಂದ ಓದುವ ಮತ್ತು ಆರೋಗ್ಯಪೂರ್ಣ ಪ್ರತಿಕ್ರಿಯೆ ತೋರುವ ಸಹೃದಯ ಬಳಗಕ್ಕೆ ಪ್ರೀತಿಯ ನಲ್ವರಕೆಗಳು. ಎಂದಿನಂತೆ ನನ್ನ ರಂಗ ಬರಹಗಳ ಪ್ರೀತಿಗರು ಮತ್ತು ಜಿಜ್ಞಾಸುಗಳಿಗೆ ಶರಣು ಶರಣಾರ್ಥಿಗಳು. ಈ ಕೃತಿಯನ್ನು ಸಾಣೇಹಳ್ಳಿಯ ರಂಗಜಂಗಮ ಡಾ. ಪಂಡಿತಾರಾಧ್ಯ ಶಿವಾಚಾರ್ಯರಿಗೆ ಅಂತಃಕರಣಪೂರ್ವಕವಾಗಿ ಸಮರ್ಪಿಸಿರುವೆ. ಎಂದಿನಂತೆ ನನ್ನ ಪುಸ್ತಕಗಳನ್ನು ಪ್ರಕಟಿಸುವ ಬೆಂಗಳೂರಿನ ಉಷಾ ಗ್ರಾಫಿಕ್ಸ್ ಸನ್ಮಿತ್ರ ಡಿ.ವಿ. ಧನಂಜಯ, ಚೆಂದದ ಹೊದಿಕೆ ಪುಟ ತಯಾರಿಸಿಕೊಟ್ಟ ಬೆಂಗಳೂರಿನ ಮತ್ತೊಬ್ಬ ಸನ್ಮಿತ್ರ ಸುಧಾಕರ ದರ್ಬೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಇದೀಗ ಈ ಕೃತಿ 'ನಾಟಕ - ಕರ್ನಾಟಕ' ಓದುವ ತಮಗೆ ಹೃನ್ಮನದ ನಮನಗಳು.
- ಮಲ್ಲಿಕಾರ್ಜುನ ಕಡಕೋಳ
ಈ ಅಂಕಣದ ಹಿಂದಿನ ಬರಹಗಳು:
ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?
ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ
ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ
ಇತರೆ ರಂಗಾಯಣಗಳಿಗೆ 'ಕಾರಂತ' ಮಾದರಿ ಇದೆ, ದಾವಣಗೆರೆ ರಂಗಾಯಣಕೆ ಮಾದರಿ ಬೇಕಿದೆ..
ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು
ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ
ಬರಗೂರು: ಸಂಭ್ರಮದ ಸ್ನೇಹ ಗೌರವದ ಸಾಂಸ್ಕೃತಿಕ ಹಬ್ಬ
ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ
ಮುವತ್ತು ವರ್ಷ ಕಳೆದರೂ ಮುಗಿಯದ ಮಲ್ಲಾಬಾದಿ ಏತ ನೀರಾವರಿ ಕಾಮಗಾರಿ
ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು
ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
©2024 Book Brahma Private Limited.