Date: 06-04-2025
Location: ಬೆಂಗಳೂರು
"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂದವನ್ನು ಮಾಡಿಕೊಳ್ಳಬಹುದು. ಆಯಾ ರಾಜ್ಯದಲ್ಲಿ ನೆಲೆ ನಿಂತಿರುವವರ ಶಿಕ್ಶಣದ ಜವಾಬ್ದಾರಿ ಆಯಾ ರಾಜ್ಯಗಳದೆ ಎಂಬುದನ್ನು ಮನಗಂಡರೂ ಪಟ್ಯಪುಸ್ತಕಗಳು, ಪೂರಕಪಟ್ಯಗಳು ಮೊದಲಾದವನ್ನು ಹಂಚಿಕೊಳ್ಳುವುದಕ್ಕೆ ಇಲ್ಲವೆ ತಯಾರಿಸುವುದಕ್ಕೆ ಈ ರಾಜ್ಯಗಳ ನಡುವಿನ ಒಪ್ಪಂದ ಸಹಾಯ ಮಾಡಬಹುದು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು’ ಕುರಿತು ಬರೆದಿದ್ದಾರೆ.
ಬಾರತದ ಬಾಶಿಕ ಪರಿಸ್ತಿತಿಯನ್ನು ಕುರಿತು ಮಾತನಾಡುವಾಗ ಬಿನ್ನ ಬಾಶೆಗಳ ಮಾತುಗರು ಮತ್ತು ಅವರ ಹರಡಿರುವಿಕೆ ಬಗೆಗೆ ಕೆಲವು ವಿಚಾರಗಳನ್ನು ಮಾತನಾಡಿದೆ. ಕರ‍್ನಾಟಕದ ಸಂರ‍್ಬವನ್ನು ಗಮನದಲ್ಲಿ ಇಟ್ಟುಕೊಂಡರೆ ಕೆಲವು ಬಾಶೆಗಳು ಕೆಲವು ನಿರ‍್ದಿಶ್ಟ ಪರಿಸರದಲ್ಲಿ ಕಂಡುಬರುತ್ತವೆ. ತುಳು ಮಂಗಳೂರು ಮತ್ತು ಸುತ್ತಲಿನ ಪರಿಸರದಲ್ಲಿ, ಕೊಡವ ಕೊಡಗು ಪರಿಸರದಲ್ಲಿ, ಕೊಂಕಣಿ ಕಾರವಾರ ಮತ್ತು ಸುತ್ತಲಿನ ಪರಿಸರಗಳಲ್ಲಿ, ಬ್ಯಾರಿ ಮಂಗಳೂರು ಪರಿಸರದಲ್ಲಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಪರಿಸರಗಳಲ್ಲಿ ಇರುಳ ಕಂಡುಬರುತ್ತವೆ. ಹಾಗಾಗಿ ಈ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣ ಶುರು ಮಾಡುವುದಕ್ಕೆ ತುಂಬಾ ಅನುಕೂಲವಾಗುತ್ತದೆ. ವಾಸ್ತವದಲ್ಲಿ ಈ ಮೇಲೆ ಉಲ್ಲೇಕಿಸಿದ ಪರಿಸರಗಳಲ್ಲಿ ಈ ಬಾಶೆಗಳ ದೊಡ್ಡ ಸಂಕೆಯ ಮಂದಿ ವಾಸವಾಗಿರುವುದರಿಂದ ಅವರಿಗಾಗಿ ಪ್ರತ್ಯೇಕ ವ್ಯವಸ್ತೆಯನ್ನು ಮಾಡಿಕೊಳ್ಳಬಹುದು.
ಈ ಪರಿಸರಗಳಲ್ಲಿ ಸದ್ಯ ಇರುವ ಶಾಲೆಗಳಲ್ಲಿ ಅವಶ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಗಡಿ ಪ್ರದೇಶಗಳಲ್ಲಿ ಪಕ್ಕದ ರಾಜ್ಯದ ಬಾಶೆಗಳ ದೊಡ್ಡ ಸಂಕೆಯ ಮಂದಿ ನೆಲೆಸಿರುವ ಹಲವಾರು ನಿರ‍್ಶನಗಳು ಸಿಗುತ್ತವೆ. ಕರ‍್ನಾಟಕ ರಾಜ್ಯ ತನ್ನ ಉದ್ದನೆಯ ಗಡಿಯನ್ನು ತೆಲುಗು ಮಾತನಾಡುವ ತೆಲಂಗಾಣ ಮತ್ತು ಆಂದ್ರಪ್ರದೇಶಗಳೊಂದಿಗೆ ಹಂಚಿಕೊಳ್ಳುತ್ತದೆ. ಉದ್ದಕ್ಕೂ ತೆಲುಗು ಮಾತನಾಡುವ ದೊಡ್ಡ ಸಂಕೆಯ ತೆಲುಗರು ಇದ್ದಾರೆ. ಕರ‍್ನಾಟಕದಲ್ಲಿ ಒಟ್ಟು ತೆಲುಗರ ಸಂಕೆ ಇತ್ತೀಚಿನ ಜನಗಣತಿ ಪ್ರಕಾರ 35,69,400 ಇದೆ. ತೆಲುಗು ಮಾತನಾಡುವವರು ಕರ‍್ನಾಟಕದ ತುಂಬ ಎಲ್ಲೆಡೆ ನೆಲೆಸಿರುವರಾದರೂ ಗಡಿಪ್ರದೇಶಗಳಲ್ಲಿ ಮತ್ತು ಬೆಂಗಳೂರಿನಲ್ಲಿ ತೆಲುಗು ಮಾದ್ಯಮವನ್ನು ತೆರೆಯುವುದು ಸುಲಬವಾಗಬಹುದು. ಇದರಂತೆಯೆ ತಮಿಳು, ಮರಾಟಿ, ಮಲಯಾಳಂ ಕೂಡ. ಅದರಂತೆಯೆ ಕರ‍್ನಾಟಕದಲ್ಲಿ ದೊಡ್ಡ ಸಂಕೆಯಲ್ಲಿರುವ ಹಿಂದಿ, ಗುಜರಾತಿ, ಪಂಜಾಬಿ, ಬೆಂಗಾಲಿ ಮೊದಲಾದ ಬಾಶೆಗಳ ಮಂದಿ ಹೆಚ್ಚಿನ ಸಂಕೆಯಲ್ಲಿ ನೆಲೆಸಿರಬಹುದಾದ ಪ್ರದೇಶಗಳನ್ನು ಕಂಡುಕೊಂಡು ಅಲ್ಲೆಲ್ಲ ಈ ರೀತಿಯ ತಾಯ್ಮಾತಿನ ಶಿಕ್ಶಣವನ್ನು ಶುರು ಮಾಡಬಹುದು.
ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂದವನ್ನು ಮಾಡಿಕೊಳ್ಳಬಹುದು. ಆಯಾ ರಾಜ್ಯದಲ್ಲಿ ನೆಲೆ ನಿಂತಿರುವವರ ಶಿಕ್ಶಣದ ಜವಾಬ್ದಾರಿ ಆಯಾ ರಾಜ್ಯಗಳದೆ ಎಂಬುದನ್ನು ಮನಗಂಡರೂ ಪಟ್ಯಪುಸ್ತಕಗಳು, ಪೂರಕಪಟ್ಯಗಳು ಮೊದಲಾದವನ್ನು ಹಂಚಿಕೊಳ್ಳುವುದಕ್ಕೆ ಇಲ್ಲವೆ ತಯಾರಿಸುವುದಕ್ಕೆ ಈ ರಾಜ್ಯಗಳ ನಡುವಿನ ಒಪ್ಪಂದ ಸಹಾಯ ಮಾಡಬಹುದು. ಇಲ್ಲಿಯೂ ಹಲವು ಬಿನ್ನ ಬಾಶೆಗಳನ್ನು ಆಡುವ ಬಿನ್ನ ರಾಜ್ಯಗಳಲ್ಲಿ ಇರುವವರು ಬಿನ್ನವಾದ ಹಿನ್ನೆಲೆಗಳನ್ನು ಹೊಂದಿರಬಹುದು. ಆಯಾ ರಾಜ್ಯದ ಹಿನ್ನೆಲೆಗಳನ್ನು ಪಟ್ಯದಲ್ಲಿ ಸೇರಿಸಬೇಕಾಗಬಹುದು. ಈ ಎಲ್ಲ ಅಂಶಗಳನ್ನೂ ಕೂಡ ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
ರ‍್ನಾಟಕದಾಗ ಹೆಚ್ಚು ಮಾತುಗರಿರುವ ಎರಡನೆಯ ದೊಡ್ಡ ಬಾಶೆ ರ‍್ದು ಮಾದ್ಯಮ ಶಿಕ್ಶಣ ಸದ್ಯ ಜಾರಿಯಲ್ಲಿ ಇದೆ. ಆದರೆ ಅದನ್ನು ಸೂಕ್ತವಾಗಿ ವ್ಯವಸ್ತಿತವಾಗಿ ಬೆಳೆಸಬೇಕಿದೆ. ಇನ್ನು ಲಂಬಾಣಿಯಂತಾ ಬಾಶೆಯ ವಿಚಾರಕ್ಕೆ ಬರಬಹುದು. ವಾಸ್ತವದಲ್ಲಿ ಲಂಬಾಣಿಗರು ಕರ‍್ನಾಟಕದ ಅಯ್ದು ಬಹುದೊಡ್ಡ ಸಂಕೆಯ ಮಾತುಗರಿರುವ ಬಾಶಿಕ ಸಮುದಾಯಗಳಲ್ಲಿ ಒಂದಾಗಬಹುದು. ಅಶ್ಟು ದೊಡ್ಡ ಸಂಕೆಯ ಲಂಬಾಣಿಗರು ಕರ‍್ನಾಟಕದಾದ್ಯಂತ ಇದ್ದಾರೆ. ಆದರೆ ಲಂಬಾಣಿಯನ್ನು ಒಂದು ಬಾಶೆ ಎಂದು ಪರಿಗಣಿಸದೆ ಇರುವುದರಿಂದ ಇದನ್ನು ಪ್ರತ್ಯೇಕವಾಗಿ ಲೆಕ್ಕಿಸುವುದಿಲ್ಲ ಮತ್ತು ತೋರಿಸುವುದಿಲ್ಲ. ಹಾಗಾಗಿ ಲಂಬಾಣಿಯ ಇರುವಿಕೆಯೂ ತಿಳಿಯುವುದಿಲ್ಲ. ಇದು ಲಂಬಾಣಿಯ ವಿಶಯದಲ್ಲಿ ಮಾತ್ರವಲ್ಲದೆ ಬಾರತದ ಇನ್ನೂ ಹಲವಾರು ಬಾಶೆಗಳ ಸಂರ‍್ಬದಲ್ಲಿ ವಾಸ್ತವ.
ಬಾರತದಲ್ಲಿ ಹಿಂದಿ ಬಾಶೆಯ ಒಳಗೆ ಇರುವ ಒಳನುಡಿಗಳ ನಡುವೆ ಪರಸ್ಪರ ಅರ‍್ತವಾಗುವ ಸಾಮರ್‍ತ್ಯ ತುಂಬಾ ಕಡಿಮೆ ಇರುವ ಹಲವಾರು ಮಾತಿನಬಗೆಗಳನ್ನು ಹಿಂದಿಯ ಒಳನುಡಿಗಳು ಎಂದು ಪಟ್ಟಿಸಿದೆ. ಇವುಗಳಲ್ಲಿ ಲಂಬಾಣಿ, ಹಾಗೆಯೆ ರಾಜಸ್ತಾನಿ, ಮರ‍್ವಾಡಿ ಮೊದಲಾದವೂ ಇವೆ. ರ‍್ನಾಟಕದ ಸಂರ‍್ಬದಲ್ಲಿ ಇವುಗಳು ದೊಡ್ಡ ಸಂಕೆಯ ಮಂದಿಯನ್ನು ಹೊಂದಿವೆ. ಹಾಗಾಗಿ ಇವುಗಳ ವಿಶಯದಲ್ಲಿ ಮತ್ತು ಇಂತಾ ಇನ್ನೂ ಕೆಲ ಬಾಶೆಗಳ ವಿಚಾರದಲ್ಲಿ ಇದು ಸಮಸ್ಯೆ ಆಗುತ್ತದೆ. ವಾಸ್ತವದಲ್ಲಿ ಕೇಂದ್ರ ಸರಕಾರದ ಬಾರತೀಯ ಬಾಶಾ ಸಂಸ್ತಾನವೂ ಒಳಗೊಂಡು ಹಲವಾರು ಸಂಸ್ತೆಗಳಲ್ಲಿ ಹೆಚ್ಚಿನ ಇಂತಾ ಒಳನುಡಿಗಳ ಮೇಲೆ ಸ್ವತಂತ್ರ ಅದ್ಯಯನಗಳು ನಡೆಯುತ್ತಿವೆ.
ಹಾಗೆ ನೋಡಿದರೆ ರ‍್ನಾಟಕ ಸರಕಾರ ಇತ್ತಿಚೆಗೆ ಲಂಬಾಣಿ ಬಾಶಾ ಅದ್ಯಯನ ಸಂಸ್ತೆಯನ್ನೆ ಕನ್ನಡ ವಿಶ್ವವಿದ್ಯಾಲಯದಲ್ಲಿ ತೆರೆದಿದೆ. ಈ ಬಾಶೆಗಳ ಮೇಲೆ ಹಲಬಗೆಯ ಅದ್ಯಯನಗಳು ಬಂದಿವೆಯಾದರೂ ಶಿಕ್ಶಣವನ್ನು ಶುರು ಮಾಡುವುದಕ್ಕಾಗಿ ಇಂತಾ ಬಾಶೆಗಳಲ್ಲಿ ಸರಕಾರ ಹೆಚ್ಚಿನ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಈ ಮೂರು ಮತ್ತು ಇನ್ನೂ ಕೆಲವು ಬಾಶೆಗಳು ಹೀಗೆ ವಿವಿದೆಡೆ ಹರಡಿಕೊಂಡಿವೆ. ಆದರೆ ನಾಡಿನ ಹಲವಾರು ಕಡೆಗಳಲ್ಲಿ ಇವರು ದೊಡ್ಡ ಸಂಕೆಯಲ್ಲಿ ಕಂಡುಬರುತ್ತಾರೆ. ಹಾಗಾಗಿ ಸೂಕ್ತವಾದ ಸಂಕೆ ಎಂದು ಅನಿಸಿದಲ್ಲಿ ಈ ಬಾಶೆಗಳಲ್ಲಿ ಶಿಕ್ಶಣ ವ್ಯವಸ್ತೆ ಮಾಡಿಕೊಳ್ಳುವುದು ಸುಲಬವಾಗುತ್ತದೆ.
ಇನ್ನು ಕೆಲವು ಬಾಶೆಗಳು ವಿವಿದ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಈ ಸ್ತಿತಿಯನ್ನು ಹಲವಾರು ಬಾಶೆಗಳ ವಿಚಾರದಲ್ಲಿ ಕಾಣಬಹುದು. ಕೆಲವೊಮ್ಮೆ ಪಂಜಾಬಿ, ಓಡಿಯಾ ಮೊದಲಾದ ಅನುಸೂಚಿತ ಬಾಶೆಗಳ ಸ್ತಿತಿಯೂ ಹೀಗೆಯೆ ಇರಬಹುದು. ಯಾಕೆಂದರೆ ಇವರು ರ‍್ನಾಟಕದ ವಿವಿದ ಪ್ರದೇಶಗಳಲ್ಲಿ ಹರಡಿಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲ ಸಣ್ಣ ಸಣ್ಣ ಮತ್ತು ಬುಡಕಟ್ಟು ಬಾಶೆಗಳ ಸ್ತಿತಿ ಇದಾಗಿದೆ. ಇಂತಾ ಸಂರ‍್ಬದಲ್ಲಿ ಇಂದಿನ ಆದುನಿಕ ತಂತ್ರಗ್ನಾನ ಮೊದಲಾದವುಗಳ ಸಹಾಯವನ್ನು ಪಡೆದುಕೊಂಡು ಪಟ್ಯಪುಸ್ತಕಗಳ ಹೆಚ್ಚಿನ ರ‍್ಚು ಇಲ್ಲದೆ, ದೂರಶಿಕ್ಶಣ ಮಾದರಿಯ ತರಗತಿಗಳು ಮೊದಲಾದವನ್ನು ಎಶ್ಟು ಸಾದ್ಯವೊ ಅಶ್ಟು ಮಾಡಿಕೊಳ್ಳಬಹುದು. ಆದರೆ, ಇದು ಇಡಿಯಾಗಿ ಶಿಕ್ಶಣವನ್ನು ನಡೆಸುವುದಕ್ಕೆ ಅಸಾದ್ಯವಾದರೂ ಸಾದ್ಯವಿದ್ದಶ್ಟು ಆ ಮಕ್ಕಳ ಬಾಶೆಯನ್ನು ಅವರಿಗೆ ಕನಿಶ್ಟ ಒಂದು ಬಾಶೆಯಾಗಿಯಾದರೂ ಕೊಡುವುದಕ್ಕೆ ಅವಕಾಶಗಳನ್ನು ಮಾಡಿಕೊಳ್ಳಬಹುದು.
ಈ ಮೇಲೆ ಮಾತನಾಡಿದಂತೆ ಪ್ರದಾನ ಬಾಶೆಗಳಲ್ಲಿ ಕಂಡುಬರುವ ಒಳನುಡಿಗಳ ಬಿನ್ನತೆ ವಿಚಾರವನ್ನೂ ಇಲ್ಲಿ ಅವಶ್ಯವಾಗಿ ಗಮನಿಸಬೇಕಿದೆ. ಬುಡಕಟ್ಟುಗಳ ಇಲ್ಲವೆ ಇತರ ಸಣ್ಣ ಸಣ್ಣ ಬಾಶೆಗಳ ಸ್ತಿತಿಗಿಂತ ಈ ಒಳನುಡಿಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಒದಗಿಸುವುದು ಅತಿಹೆಚ್ಚು ಸುಲಬದ ಕೆಲಸ. ಯಾಕೆಂದರೆ ಕಲಬುರಗಿ ಕನ್ನಡ, ಮಸ್ಕಿ ಕನ್ನಡ ಎನ್ನುವುದನ್ನೆ ತೆಗೆದುಕೊಂಡರೆ ಈ ಕನ್ನಡಗಳು ಸಹಜವಾಗಿಯೆ ಒಂದೆ ನರ‍್ದಿಶ್ಟ ಪರಿಸರದಲ್ಲಿ ಕಂಡುಬರುತ್ತವೆ. ಈ ಒಳನುಡಿಗಳ ಹಿನ್ನೆಲೆಯ ಹಲವಾರು ಶಿಕ್ಶಕರು ಸುಲಬವಾಗಿ ದೊರೆಯುತ್ತಾರೆ. ಬಾಶೆಯ ಬೋದನೆಗೆ ಮಾತ್ರವಲ್ಲದೆ ಇತರೆಲ್ಲ ವಿಶಯಗಳ ಬೋದನೆಗೂ ಶಿಕ್ಶಕರು ತುಂಬಾ ಸುಲಬವಾಗಿ ಸಿಗುತ್ತಾರೆ.
ವಾಸ್ತವದಲ್ಲಿ ಸದ್ಯದ ಬಿನ್ನ ಪ್ರದೇಶಗಳಲ್ಲಿನ ಶಾಲೆಗಳಲ್ಲಿನ ಪಾಟಗಳು ಆಯಾ ಪರಿಸರದ ಕನ್ನಡವನ್ನು ವೆಗ್ಗಳವಾಗಿ ಬಳಸಿಕೊಳ್ಳುತ್ತಿವೆ. ಆಯಾ ಪರಿಸರದ ಹಿನ್ನೆಲೆಯಿಂದ ಬಂದ ಶಿಕ್ಶಕರು ಸಹಜವಾಗಿಯೆ ತಮ್ಮ ಒಳನುಡಿಗಳಿಂದ ಆಚೆಗೆ ಬರುವುದು ಕಶ್ಟ, ಬಹುತೇಕ ಸಂರ‍್ಬಗಳಲ್ಲಿ ಅಸಾದ್ಯ. ಆದರೆ, ಪಟ್ಯಪುಸ್ತಕಗಳ ಶಿಶ್ಟಕನ್ನಡ ಹೇರಿಕೆಯಿಂದಾಗಿ ಆ ಶಿಕ್ಶಕರು ತಮ್ಮ ಒಳನುಡಿ ಮತ್ತು ಶಿಶ್ಟಕನ್ನಡ ಈ ಎರಡರ ನಡುವೆ ಒದ್ದಾಡುತ್ತಾರೆ. ಬದಲಿಗೆ ಅವರ ಒಳನುಡಿಯಲ್ಲಿಯೆ ಪಟ್ಯಗಳು ಸಿದ್ದವಾಗಿಬಿಟ್ಟರೆ, ತರಗತಿಗಳಲ್ಲಿ ಅವರ ಒಳನುಡಿಯ ಬಳಕೆಗೆ ಬೆಂಬಲ ದೊರೆತರೆ ಪ್ರತಿ ತರಗತಿ ಕೋಣೆಯೂ ಒಂದು ಮಕ್ಕಳ ಉಲ್ಲಸಿತ ಮನೊವಿಕಾಸದ ಕೇಂದ್ರಗಳಾಗುವ ಸಾದ್ಯತೆ ಇರುತ್ತದೆ. ಅಂದರೆ ಸದ್ಯದ ಶಿಕ್ಶಣದ ಯಶಸ್ಸಿನ ಪ್ರತಿಶತತೆ ಸಹಜವಾಗಿ ತುಂಬಾ ಹೆಚ್ಚಾಗುತ್ತದೆ.
ಹಾಗಾಗಿ ಈ ಪ್ರದಾನ ಬಾಶೆಗಳ ಒಳನುಡಿಗಳನ್ನೂ ತಾಯ್ಮಾತಿನ ಶಿಕ್ಶಣಕ್ಕೆ ಬಳಸಿಕೊಳ್ಳುವುದು ಅವಶ್ಯ. ಹೀಗೆ ಒಳನುಡಿಗಳನ್ನು ಶಿಕ್ಶಣದೊಳಗೆ ತರುವಾಗಲೂ ಸಮಸ್ಯೆಗಳು ಸಹಜವಾಗಿಯೆ ಬರುತ್ತವೆ. ಪ್ರತಿ ಪ್ರಾದೇಶಿಕ ಒಳನುಡಿ ತನ್ನೊಳಗೆ ಹಲವಾರು ಸಾಮಾಜಿಕ ಒಳನುಡಿಗಳನ್ನು ಒಳಗೊಂಡಿವೆ. ಈ ವಿಶಯವನ್ನು ಪಟ್ಯತಯಾರಿ ಮೊದಲಾದ ಸಂದರ‍್ಬಗಳಲ್ಲಿ ಅವಶ್ಯವಾಗಿ ಗಮನಿಸಬೇಕಾಗುತ್ತದೆ. ಸಾಮಾಜಿಕ ತರತಮವನ್ನು ಪಟ್ಯಗಳು ತಾರದಂತೆ, ಹೊರದಂತೆ ನಿಗಾ ವಹಿಸಬೇಕಾಗುತ್ತದೆ. ಇಂತಾ ಸಮಸ್ಯೆಗಳಿಗೂ ಕೂಡ ಆಯಾ ಪರಿಸರದಲ್ಲಿಯೆ ಸಮಾದಾನಗಳನ್ನು ಕಂಡುಕೊಳ್ಳಬೇಕಾಗಿರುತ್ತದೆ. ಎಲ್ಲ ಪರಿಸರಕ್ಕೂ ಸರಿಹೋಗಬಹುದಾದ ಒಂದು ಸಮಾದಾನ ದೊರೆಯಲಿಕ್ಕಿಲ್ಲ.
"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...
"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು...
"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...
©2025 Book Brahma Private Limited.