‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಅಡುಗೆಗಳ ಪುಸ್ತಕ ರೂಪ ಇದಾಗಿದೆ. ತಿನ್ನುವ ವಿಧಾನಗಳು ಬದಲಾಗುತ್ತಾ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಬಹಳ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ, ಅಂತಹ ಆಸಕ್ತಿ ಇರುವವರು ಮನೆಯಲ್ಲೇ ಇಲ್ಲಿಯ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಈ ‘ಒಗ್ಗರಣೆ ಡಬ್ಬಿ ಭಾಗ-1 (ಸಿಂಪ್ಲಿ ವೆಜ್)‘ ಮನೆಯ ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್ಗಳಿಗೆ ಉಪಯುಕ್ತವಾಗುತ್ತದೆ.
©2024 Book Brahma Private Limited.