‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಅಡುಗೆಗಳ ಪುಸ್ತಕ ರೂಪ ಇದಾಗಿದೆ. ತಿನ್ನುವ ವಿಧಾನಗಳು ಬದಲಾಗುತ್ತಾ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಭಾರತೀಯ ಆಚರಣೆಗಳಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದ್ದು ವಿವಿಧ ಪ್ರದೇಶದಿಂದ ವಿವಿಧ ಹಬ್ಬಗಳ ಪಾಕವಿಧಾನಗಳಿರುತ್ತವೆ. ಬಹಳ ಜನ ಸಾವಿರಾರು ಮೈಲಿ ದೂರ ಹೋಗಿ ಇಂತಹ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ, ಅಂತಹ ಆಸಕ್ತಿ ಇರುವವರು ಹಬ್ಬದಂದು ಮನೆಯಲ್ಲೇ ಇಲ್ಲಿನ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಈ ‘ಒಗ್ಗರಣೆ ಡಬ್ಬಿ ಭಾಗ-3 (ಹಬ್ಬದಡುಗೆ)‘ ಮನೆಯ ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್‌ಗಳಿಗೆ ಉಪಯುಕ್ತವಾಗುತ್ತದೆ.
©2025 Book Brahma Private Limited.