ದಿನ ಬೆಳಗಾದರೆ ಗೃಹಿಣಿಯರಿಗೆ ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡುತ್ತದೆ. ಅದಕ್ಕೆಂದು ಮುರಳಿ ಅವರು ‘ಝೀ ವಾಹಿನಿ’ಯ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದಲ್ಲಿ ಬೆಳಗಿನ ಉಪಹಾರದ ರೆಸಿಪಿಗಳನ್ನು ತಯಾರಿಸಿದನ್ನು ಅಕ್ಷರದ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ತಿನ್ನುವ ವಿಧಾನಗಳು ಬದಲಾಗುತ್ತಾ, ತಿನ್ನುವ ರುಚಿ ಬದಲಾಗಿದೆ. ತಿನ್ನುವವರಿಗೆ ರುಚಿ ತುಂಬಾ ಮುಖ್ಯ. ಅಂತಹವರಿಗೆ ಈ ಪುಸ್ತಕ ಪ್ರಿಯವಾಗುತ್ತದೆ. ಬಹಳ ಜನ ಸಾವಿರಾರು ಮೈಲಿ ದೂರ ಹೋಗಿ ಅಡುಗೆಯ ರುಚಿ ಸವಿದ ಉದಾಹರಣೆಗಳು ಸಾಕಷ್ಟಿವೆ, ಅಂತಹ ಆಸಕ್ತಿ ಇರುವವರು ಹಬ್ಬದಂದು ಮನೆಯಲ್ಲೇ ಇಲ್ಲಿನ ರೆಸೆಪಿಗಳನ್ನು ಮಾಡಿ ರುಚಿ ನೋಡಬಹುದು. ಈ ‘ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ)' ಗೃಹಿಣಿಯರಿಗೆ, ತಾಯಂದಿರಿಗೆ, ಚೆಫ್‌ಗಳಿಗೆ ಉಪಯುಕ್ತವಾಗುತ್ತದೆ.
©2024 Book Brahma Private Limited.