‘ಮುನ್ನುಡಿ ಮುಕುರ’ ಡಾ. ಸಿ.ನಾಗಣ್ಣ ಅವರು ವಿವಿಧ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳ ಸಂಕಲನ. ಈ ಕೃತಿಗೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಮುನ್ನುಡಿ ವಿಮರ್ಶೆಯಲ್ಲ, ಕೈದೀವಿಗೆ. ಅನೇಕರಿಗೆ ಅದು ದಾರಿದೀಪವಾಗಿ ಮುನ್ನಡೆಸಿಕೊಂಡು ಹೋಗಿದೆ. ಹೀಗೆಯೇ ಇರಬೇಕು ಎಂಬುದ ವಿಮರ್ಶೆ, ಹೀಗೆದ್ದರೆ ಚೆನ್ನ ಎಂಬುದು ಮುನ್ನುಡಿ. ಇದನ್ನು ಅರಿತೇ ನಾಗಣ್ಣ ಹಳಬರಿಗೆ ಮಾರ್ಗದರ್ಶಕರಾಗುತ್ತಾರೆ, ಹೊಸಪೀಳಿಗೆಯ ಲೇಖಕರನ್ನು ಕೈ ಹಿಡಿದು ಸಾಹಿತ್ಯಲೋಕಕ್ಕೆ ಸ್ವಾಗತಿಸುತ್ತಾರೆ. ಹೆಚ್ಚು ಓದಿಕೊಂಡಿದ್ದರೂ ಅಹಮ್ಮಿಕೆಯನ್ನು ಬೆಳೆಸಿಕೊಳ್ಳದೆ ಸಾತ್ವಿಕರಾಗಿದ್ದಾರೆ. ಹಾಗಾಗಿ ಉದಾರವಾದಿಯೆನಿಸಿಕೊಳ್ಳುತ್ತಾರೆ. ಸ್ವತಃ ಕವಿಯಾಗಿ, ಅನುವಾದಕರಾಗಿ, ಅಂಕಣಕಾರರಾಗಿ ಹೆಸರು ಮಾಡಿರುವ ಶ್ರೀಯುತರ ಕೊಡುಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎನ್ನುತ್ತಾರೆ.
©2024 Book Brahma Private Limited.